ಬೇರೆ ಕಡೆ ಬೇಡ ಸ್ವಾಮಿ, ಕೇವಲ ಆಂಧ್ರ ತೆಲಂಗಾಣದಲ್ಲಿ ಪವನ್ ಭೀಮ್ಲಾ ನಾಯಕ್ ಚಿತ್ರ ಮೊದಲ ದಿನ ಗಳಿಸಿದ್ದು ಎಷ್ಟು ಕೋಟಿ ಗೊತ್ತೇ?? ಯಪ್ಪಾ ಇಷ್ಟೊಂದಾ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ದಿನಗಳಿಂದ ಹಲವಾರು ಸಿನಿಮಾಗಳು ಅದರಲ್ಲೂ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಯನ್ನು ಕಂಡಿವೆ. ಅವುಗಳಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಭೀಮ್ಲಾ ನಾಯಕ್ ಚಿತ್ರದ ಕುರಿತಂತೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಹಲವಾರು ವರ್ಷಗಳ ನಂತರ ಮತ್ತೊಮ್ಮೆ ದೊಡ್ಡ ಪರದೆ ಮೇಲೆ ಎಂಟ್ರಿ ನೀಡಿರುವಂತಹ ಚಿತ್ರವಾಗಿದೆ. ಹೌದು ರಾಜಕೀಯದಲ್ಲಿ ಸಕ್ರಿಯರಾಗಿದ್ದಂತಹ ಪವನ್ ಕಲ್ಯಾಣ್ ಅವರು ಭೀಮ್ಲಾ ನಾಯಕ್ ಚಿತ್ರದ ಮೂಲಕ ಮತ್ತೊಮ್ಮೆ ಗ್ರಾಂಡ್ ಆಗಿ ಎಂಟ್ರಿ ನೀಡಿದ್ದಾರೆ.

ಭಾರತೀಯ ಚಿತ್ರರಂಗದ ಹಲ್ಕ್ ಎಂದೇ ಖ್ಯಾತರಾಗಿರುವ ರಾಣಾ ದಗ್ಗುಬಾಟಿ ರವರು ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಅವರಿಗೆ ಸಾಥ್ ನೀಡಿದ್ದಾರೆ. ಚಿತ್ರ ಮಲಯಾಳಂ ಮೂಲದ ಅಯ್ಯಪ್ಪನುಂ ಕೋಷಿಯುಂ ಚಿತ್ರದ ರೀಮೇಕ್ ಆಗಿದೆ. ಚಿತ್ರ ಈಗಾಗಲೇ ಹಲವಾರು ನಿಬಂಧನೆಗಳ ನಡುವೆಯೂ ಕೂಡ ಸಖತ್ ಓಪನಿಂಗ್ ಪಡೆದುಕೊಂಡಿದೆ ಎಂಬುದಾಗಿ ಹಲವಾರು ಮೂಲಗಳು ಹೇಳುತ್ತಿವೆ. ತೆಲುಗು ಚಿತ್ರರಂಗದ ನಂಬರ್ ಒನ್ ಸೂಪರ್ ಸ್ಟಾರ್ ಆಗಿರುವ ಪವನ್ ಕಲ್ಯಾಣ್ ಅವರ ಸಿನಿಮಾವೆಂದರೆ ಬಾಕ್ಸಾಫೀಸ್ ಕಲೆಕ್ಷನ್ ವಿಚಾರದಲ್ಲಿ ಕೇಳುವುದೇ ಬೇಡ ಬಿಡುಗಡೆಗೂ ಮುನ್ನವೇ ಲಾಭವನ್ನು ಹೊಂದಿರುತ್ತದೆ.

pavan bheemla nayak | ಬೇರೆ ಕಡೆ ಬೇಡ ಸ್ವಾಮಿ, ಕೇವಲ ಆಂಧ್ರ ತೆಲಂಗಾಣದಲ್ಲಿ ಪವನ್ ಭೀಮ್ಲಾ ನಾಯಕ್ ಚಿತ್ರ ಮೊದಲ ದಿನ ಗಳಿಸಿದ್ದು ಎಷ್ಟು ಕೋಟಿ ಗೊತ್ತೇ?? ಯಪ್ಪಾ ಇಷ್ಟೊಂದಾ?
ಬೇರೆ ಕಡೆ ಬೇಡ ಸ್ವಾಮಿ, ಕೇವಲ ಆಂಧ್ರ ತೆಲಂಗಾಣದಲ್ಲಿ ಪವನ್ ಭೀಮ್ಲಾ ನಾಯಕ್ ಚಿತ್ರ ಮೊದಲ ದಿನ ಗಳಿಸಿದ್ದು ಎಷ್ಟು ಕೋಟಿ ಗೊತ್ತೇ?? ಯಪ್ಪಾ ಇಷ್ಟೊಂದಾ? 2

ಆದರೂ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನದಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎನ್ನೋದನ್ನು ತಿಳಿಯೋಣ ಬನ್ನಿ. ಹೌದು ಗೆಳೆಯರೇ ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ಮಾತ್ರವಲ್ಲದೆ ಪ್ರಮುಖ ಪಾತ್ರದಲ್ಲಿ ಕರ್ನಾಟಕ ಮೂಲದ ನಟಿಯಾಗಿರುವ ನಿತ್ಯ ಮೆನನ್ ರವರು ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಭೀಮ್ಲಾ ನಾಯಕ್ ಚಿತ್ರ ಕೇವಲ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮೊದಲ ದಿನಕ್ಕೆ ಬರೋಬ್ಬರಿ 84.30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಮೊದಲ ದಿನವೇ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರಗಳಲ್ಲಿ ಈ ಚಿತ್ರ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಬಹುದಾಗಿದೆ. ಈ ಭರ್ಜರಿ ಓಪನಿಂಗ್ ಮುಂದೆ ಬಿಡುಗಡೆ ಆಗುವಂತಹ ಹಲವಾರು ಚಿತ್ರಗಳಿಗೆ ಸ್ಪೂರ್ತಿ ಆಗಬಹುದಾಗಿದೆ.

Comments are closed.