ಬಿಡುಗಡೆಗೂ ಮುನ್ನವೇ ಪವರ್ ಸ್ಟಾರ್ ಪವನ್ ಕಲ್ಯಾಣ್ ರವರ ಭೀಮ್ಲಾನಾಯಕ್ ಚಿತ್ರ ಗಳಿಸಿರುವ ಕಲೆಕ್ಷನ್ ಎಷ್ಟು ಗೊತ್ತಾ?? ಇದಪ್ಪ ಹವಾ ಅಂದ್ರೆ.

ನಮಸ್ಕಾರ ಸ್ನೇಹಿತರೇ ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಹಲವಾರು ವರ್ಷಗಳ ನಂತರ ಮತ್ತೊಮ್ಮೆ ದೊಡ್ಡ ಪರದೆ ಮೇಲೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಹೌದು ಪವರ್ ಸ್ಟಾರ್ ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಭೀಮ್ಲಾ ನಾಯಕ್ ಚಿತ್ರ ಇದೇ ಫೆಬ್ರವರಿ 25ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಭೀಮ್ಲಾ ನಾಯಕ್ ಚಿತ್ರ ಮಲೆಯಾಳಂ ಚಿತ್ರರಂಗದ ಅಯ್ಯಪ್ಪನುಂ ಕೋಷಿಯುಂ ಚಿತ್ರದ ರಿಮೇಕ್ ಚಿತ್ರವಾಗಿದೆ.

bheemla nayak | ಬಿಡುಗಡೆಗೂ ಮುನ್ನವೇ ಪವರ್ ಸ್ಟಾರ್ ಪವನ್ ಕಲ್ಯಾಣ್ ರವರ ಭೀಮ್ಲಾನಾಯಕ್ ಚಿತ್ರ ಗಳಿಸಿರುವ ಕಲೆಕ್ಷನ್ ಎಷ್ಟು ಗೊತ್ತಾ?? ಇದಪ್ಪ ಹವಾ ಅಂದ್ರೆ.
ಬಿಡುಗಡೆಗೂ ಮುನ್ನವೇ ಪವರ್ ಸ್ಟಾರ್ ಪವನ್ ಕಲ್ಯಾಣ್ ರವರ ಭೀಮ್ಲಾನಾಯಕ್ ಚಿತ್ರ ಗಳಿಸಿರುವ ಕಲೆಕ್ಷನ್ ಎಷ್ಟು ಗೊತ್ತಾ?? ಇದಪ್ಪ ಹವಾ ಅಂದ್ರೆ. 2

ಈ ಚಿತ್ರದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡರೆ ರಾಣಾ ದಗ್ಗುಬಾಟಿ ರವರು ಶ್ರೀಮಂತ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಟ್ರೈಲರ್ ಹಾಗೂ ಟೀಸರ್ ಹಾಡುಗಳು ಸಾಕಷ್ಟು ದೊಡ್ಡಮಟ್ಟದಲ್ಲಿ ಯೂಟ್ಯೂಬ್ನಲ್ಲಿ ರೆಕಾರ್ಡನ್ನು ಕ್ರಿಯೇಟ್ ಮಾಡಿವೆ. ತೆಲುಗು ಚಿತ್ರರಂಗದ ಟಾಪ್ ನಾಯಕ ನಟನಾಗಿರುವ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸಿನಿಮಾ ಬಿಡುಗಡೆ ಆಗುತ್ತದೆ ಎಂದರೆ ಅಲ್ಲಿ ಬಿಸಿನೆಸ್ ಕೂಡ ಟಾಪ್ ಲೆವೆಲ್ ನಲ್ಲಿ ಆಗಬೇಕು. ಬಿಡುಗಡೆ ಆದ ಮೇಲೆ ಕೋಟ್ಯಾನು ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡುವುದು ಬೇರೆ ಸಿನಿಮಾಗಳ ವಾಡಿಕೆಯಾದರೆ, ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸಿನಿಮಾಗಳು ಬಿಡುಗಡೆಯಾಗುವುದಕ್ಕೆ ಮುನ್ನವೇ ಕೋಟ್ಯಾಂತರ ರೂಪಾಯಿಗಳನ್ನು ಕಲೆಕ್ಷನ್ ಮಾಡಿ ರೆಕಾರ್ಡ್ ಬ್ರೇಕ್ ಮಾಡುತ್ತದೆ.

ಇನ್ನು ಸಿನಿಮಾ ಬಿಡುಗಡೆಗೆ ಮುನ್ನವೇ ಭೀಮ್ಲಾ ನಾಯಕ್ ಚಿತ್ರ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ ಎನ್ನುವುದನ್ನು ತಿಳಿಯೋಣ ಬನ್ನಿ. ಮೂಲಗಳ ಪ್ರಕಾರ ಪವರ್ ಸ್ಟಾರ್ ಪವನ್ ಕಲ್ಯಾಣ್ ರಾಣಾ ದಗ್ಗುಬಾಟಿ ನಿತ್ಯಮೇನನ್ ಹಾಗೂ ಮುರಳಿ ಶರ್ಮಾ ಬ್ರಹ್ಮಾನಂದಂ ಸೇರಿದಂತೆ ಹಲವಾರು ನಟರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಬಿಡುಗಡೆಗೂ ಮುನ್ನವೇ ಪ್ರೀ ರಿಲೀಸ್ ಬಿಸಿನೆಸ್ ಆಗಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಬಿಡುಗಡೆಯಾಗಲು ಇನ್ನು ಕೇವಲ ಮೂರು ದಿನಗಳಷ್ಟೇ ಬಾಕಿ ಉಳಿದಿದ್ದು ಬಾಕ್ಸಾಫೀಸ್ ನಲ್ಲಿ ಕೂಡ ದೊಡ್ಡಮಟ್ಟದ ಕಲೆಕ್ಷನ್ ಮಾಡುವ ನಿರೀಕ್ಷೆ ಎದ್ದುಕಾಣುತ್ತಿದೆ.

Comments are closed.