ನೀವು ಕನ್ನಡತಿ ಕಿರಣ್ ರಾಜ್ ಅಭಿಮಾನಿಗಳಾ?? ಹಾಗಿದ್ದರೆ ಕಿರಣ್ ರಾಜ್ ರವರ ಕಡೆಯಿಂದ ಮತ್ತೊಂದು ಸಿಹಿ ಸುದ್ದಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಕೆಲವೇ ಕೆಲವು ನಟರು ಮಾತ್ರ ಧಾರಾವಾಹಿಗಳಿಂದ ಆಚೆಗೂ ಕೂಡ ಜನರ ಮನಸೇ ಹತ್ತಿರವಾಗಿ ಅವರಿಗೆ ಇಷ್ಟವಾಗಿದ್ದಾರೆ. ಅಂಥವರಲ್ಲಿ ನಟ ಕಿರಣ್ ರಾಜ್ ಕೂಡ ಒಬ್ಬರು. ಹೌದು ನಾವು ಮಾತನಾಡುತ್ತಿರುವುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ ನಟ ಕಿರಣ್ ರಾಜ ರವರ ಕುರಿತಂತೆ.

ಈಗಾಗಲೇ ಕೇವಲ ಧಾರಾವಾಹಿಗಳಿಂದ ಮಾತ್ರವಲ್ಲದೆ ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅವರು ಪೋಸ್ಟ್ ಮಾಡುವಂತಹ ಸ್ಪೂರ್ತಿದಾಯಕ ವಿಡಿಯೋಗಳು ಅವರು ಜನರ ಮನಸ್ಸಿಗೆ ಅತ್ಯಂತ ಸಮೀಪದವರಾಗಿದ್ದಾರೆ. ಅವರು ಕೇವಲ ಧಾರವಾಹಿಗಳಲ್ಲಿ ಮಾತ್ರವಲ್ಲದೆ ಈಗ ಸಿನಿಮಾಕ್ಕೂ ಕೂಡ ಕಾಲಿಟ್ಟಿದ್ದಾರೆ. ಈಗಾಗಲೇ ಬಹುದ್ದೂರ್ ಗಂಡು ಎನ್ನುವ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇದು ಅವರ ಮೊದಲನೇ ಸಿನಿಮಾ ವಾಗಿದ್ದು ಚಿತ್ರದ ಚಿತ್ರೀಕರಣ ಕೊನೆಯ ಭಾಗವನ್ನು ತಲುಪಿದ್ದು ಇನ್ನೇನು ಕೆಲವೇ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

kiran raj kannadati | ನೀವು ಕನ್ನಡತಿ ಕಿರಣ್ ರಾಜ್ ಅಭಿಮಾನಿಗಳಾ?? ಹಾಗಿದ್ದರೆ ಕಿರಣ್ ರಾಜ್ ರವರ ಕಡೆಯಿಂದ ಮತ್ತೊಂದು ಸಿಹಿ ಸುದ್ದಿ. ಏನು ಗೊತ್ತೇ??
ನೀವು ಕನ್ನಡತಿ ಕಿರಣ್ ರಾಜ್ ಅಭಿಮಾನಿಗಳಾ?? ಹಾಗಿದ್ದರೆ ಕಿರಣ್ ರಾಜ್ ರವರ ಕಡೆಯಿಂದ ಮತ್ತೊಂದು ಸಿಹಿ ಸುದ್ದಿ. ಏನು ಗೊತ್ತೇ?? 2

ಇದರ ಬೆನ್ನಲ್ಲೇ ಈಗ ಅಭಿಮಾನಿಗಳಿಗೆ ಕಿರಣ್ ರಾಜ್ ಮತ್ತೊಂದು ಸಂತೋಷದ ಸುದ್ದಿಯನ್ನು ನೀಡಿದ್ದಾರೆ. ಹೌದು ಇದು ಖಂಡಿತವಾಗಿ ಕಿರಣ್ ರಾಜ್ ರವರ ಅಭಿಮಾನಿಗಳಿಗೆ ಸಾಕಷ್ಟು ಸಂತೋಷವನ್ನು ನೀಡುವಂತಹ ಸುದ್ದಿ. ಹೌದು ಅದೇನೆಂದರೆ ಕಿರಣ್ ರಾಜ್ ರವರು ತಮ್ಮ ಎರಡನೇ ಸಿನಿಮಾವನ್ನು ಕೂಡ ಅನೌನ್ಸ್ ಮಾಡಿದ್ದಾರೆ. ಈ ಚಿತ್ರದ ಹೆಸರು ಬಡ್ಡೀಸ್ ಎನ್ನುವುದಾಗಿ. ಈ ಸಿನಿಮಾ ಸ್ನೇಹದ ಕುರಿತಂತೆ ಸಂದೇಶವನ್ನು ಸಾರುವಂತಹ ಸಿನಿಮಾವಾಗಿದೆ. ಇಂದಿನಿಂದ ಚಿತ್ರದ ಪ್ರಚಾರ ಕಾರ್ಯವನ್ನು ಕೂಡ ಆರಂಭಿಸಲಾಗಿದೆ. ಚಿತ್ರವನ್ನು ಮಂಗಳೂರು ಮೂಲದ ದುಬೈನ ಭಾರತಿ ಶೆಟ್ಟಿ ಅನ್ನುವ ಜಾಹೀರಾತು ಸಂಸ್ಥೆಯ ಮಾಲೀಕೆ ನಿರ್ಮಾಣ ಮಾಡುತ್ತಿದ್ದಾರೆ. ಧಾರವಾಹಿಯಂತೆ ಸಿನಿಮಾದಲ್ಲಿ ಕೂಡ ಕಿರಣ್ ರಾಜ್ ರವರು ಅದ್ವಿತೀಯ ಹೆಸರು ಸಾಧಿಸಲಿ ಎಂದು ಹಾರೈಸೋಣ.

Comments are closed.