ಟಾಪ್ ಧಾರಾವಾಹಿಯಾಗಿದ್ದರೂ ಕೂಡ ಬೇರೆ ಧಾರವಾಹಿ ನಟಿಯರಿಗಿಂತ ಕಡಿಮೆ ಸಂಭಾವನೆ ಪಡೆಯುತ್ತಿರುವ ಕನ್ನಡತಿ ಭುವಿ ರವರ ಸಂಭಾವನೆ ಎಷ್ಟು ಗೊತ್ತೇ??

ಕನ್ನಡತಿ ಧಾರಾವಾಹಿ ಮೂಲಕ ಮನೆಮಾತಾಗಿರುವ ನಟಿ ರಂಜನಿ ರಾಘವನ್. ಪುಟ್ಟಗೌರಿ ಮದುವೆ ಸೀರಿಯಲ್ ಇಂದ ರಂಜನಿ ಅವರು ಫೇಮಸ್ ಆಗಿದ್ದಕ್ಕಿಂತ ಹೆಚ್ಚಾಗಿ ಕನ್ನಡತಿ ಸೀರಿಯಲ್ ಇಂದ ಇನ್ನು ಹೆಚ್ಚಿನ ಜನರ ಪ್ರೀತಿ ಗಳಿಸಿದ್ದಾರೆ. ಕನ್ನಡತಿ ಧಾರಾವಾಹಿಯ ಭುವಿ ಮಾತನಾಡುವ ಕನ್ನಡಕ್ಕೆ ಎಲ್ಲಾ ವೀಕ್ಷಕರು ಫಿದಾ ಆಗಿದ್ದಾರೆ. ರಂಜನಿ ಅವರು ಕನ್ನಡ ಭಾಷೆಯ ಮೇಲೆ ಇಟ್ಟುಕೊಂಡಿರುವ ಅಭಿಮಾನ ಕೂಡ ಮೆಚ್ಚುವಂಥದ್ದು. ರಂಜನಿ ರಾಘವನ್ ಅವರು ನಟನೆ ಶುರು ಮಾಡಿದ್ದು, ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ. ಗೌರಿ ಪಾತ್ರದ ಮೂಲಕ ಕರ್ನಾಟಕದ ಮನೆಯ ಮಗಳಾಗಿದ್ದರು ರಂಜನಿ.

ಎಲ್ಲರೂ ಗೌರಿ ಪಾತ್ರವನ್ನು ತುಂಬಾ ಹಚ್ಚಿಕೊಂಡಿದ್ದರು. ಆದರೆ ಕನ್ನಡತಿ ಧಾರಾವಾಹಿಯ ಭುವನೇಶ್ವರಿ ಪಾತ್ರ, ರಂಜನಿ ಅವರನ್ನು ಜನಕ್ಕೆ ಇನ್ನು ಹತ್ತಿರ ಆಗುವ ಹಾಗೆ ಮಾಡಿದೆ. ಭುವಿ ಪಾತ್ರದ ತಾಳ್ಮೆ, ಮಾತು, ನಡವಳಿಕೆ, ಸರಳತೆ ಇದೆಲ್ಲವನ್ನು ಕಿರುತೆರೆ ವೀಕ್ಷಕರು ತುಂಬಾ ಇಷ್ಟಪಟ್ಟಿದ್ದಾರೆ. ಹರ್ಷ ಮತ್ತು ಭುವಿ ಜೋಡಿಗೆ ದೊಡ್ಡ ಫ್ಯಾನ್ ಬೇಸ್ ಇದೆ. ಸೋಷಿಯಲ್ ಮೀಡಿಯಾದಲ್ಲಿ ಭುವಿ ಮತ್ತು ಹರ್ಷನಿಗೆ ಎಷ್ಟು ಫ್ಯಾನ್ ಪೇಜ್ ಗಳಿವೆ ಎಂದು ಲೆಕ್ಕ ಮಾಡಲು ಸಾಧ್ಯವಿಲ್ಲ. ಮೈಸೂರು ಬೆಂಗಳೂರು ಮಾತ್ರವಲ್ಲದೆ, ಉತ್ತರ ಕರ್ನಾಟಕದಲ್ಲೂ ಸಹ ಕನ್ನಡತಿ ಧಾರಾವಾಹಿಯನ್ನು ತುಂಬಾ ಇಷ್ಟಪಟ್ಟು ನೋಡುವವರಿದ್ದಾರೆ. ರಾಜ್ಯದ ಗಡಿಯನ್ನು ದಾಟಿ ಜನರು ಕನ್ನಡತಿ ಧಾರಾವಾಹಿ ವೀಕ್ಷಿಸುತ್ತಿದ್ದಾರೆ ಎಂದರೆ ತಪ್ಪಲ್ಲ.

ranjani samba | ಟಾಪ್ ಧಾರಾವಾಹಿಯಾಗಿದ್ದರೂ ಕೂಡ ಬೇರೆ ಧಾರವಾಹಿ ನಟಿಯರಿಗಿಂತ ಕಡಿಮೆ ಸಂಭಾವನೆ ಪಡೆಯುತ್ತಿರುವ ಕನ್ನಡತಿ ಭುವಿ ರವರ ಸಂಭಾವನೆ ಎಷ್ಟು ಗೊತ್ತೇ??
ಟಾಪ್ ಧಾರಾವಾಹಿಯಾಗಿದ್ದರೂ ಕೂಡ ಬೇರೆ ಧಾರವಾಹಿ ನಟಿಯರಿಗಿಂತ ಕಡಿಮೆ ಸಂಭಾವನೆ ಪಡೆಯುತ್ತಿರುವ ಕನ್ನಡತಿ ಭುವಿ ರವರ ಸಂಭಾವನೆ ಎಷ್ಟು ಗೊತ್ತೇ?? 2

ಕನ್ನಡತಿ ಧಾರವಾಹಿ ಈಗ ರೋಚಕ ಘಟ್ಟದಲ್ಲಿ ಸಾಗುತ್ತಿದೆ, ಹರ್ಷ ಭುವಿ ಮದುವೆ ನಡೆದ ಬಳಿಕ, ಭುವಿ ಒಂದಲ್ಲಾ ಒಂದು ಸವಾಲುಗಳನ್ನು ಎದುರಿಸುತ್ತಲೇ ಇದ್ದಾಳೆ. ಏನೇ ಆದರು ಹರ್ಷ ಭುವಿ ಜೋಡಿ ಒಬ್ಬರನ್ನೊಬ್ಬರು ಬಿಟ್ಟುಕೊಡದೆ ಉತ್ತಮವಾಗಿ ಗೇಮ್ ಆಡುತ್ತಾ ಸಾಗುತ್ತಿರುವುದು ಒಳ್ಳೆಯ ವಿಚಾರ. ಈ ಧಾರವಾಹಿಯಲ್ಲಿ ನಟಿಸಲು ರಂಜನಿ ರಾಘವನ್ ಅವರು ಪಡೆಯುವ ಸಂಭಾವನೆ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಸಿಕ್ಕಿರುವ ಮಾಹಿತಿ ಪ್ರಕಾರ, ಕನ್ನಡತಿ ಧಾರವಾಹಿ ಕನ್ನಡ ಕಿರುತೆರೆಯ ಟಾಪ್ ಧಾರವಾಹಿ ಎನ್ನಿಸಿಕೊಂಡಿದ್ದರು ಸಹ ಈ ಧಾರವಾಹಿಗೆ ರಂಜನಿ ರಾಘವನ್ ಅವರು ಒಂದು ಎಪಿಸೋಡ್ ಗೆ 18 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

Comments are closed.