Bigg Boss Kannada: ಎಲ್ಲಾ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿ ಸಂಭಾವನೆ ಪಡೆದ ದೀಪಿಕಾ: ಹೊರಬಂದು ಪಡೆದ ಸಂಭಾವನೆ ಎಷ್ಟು ಗೊತ್ತೇ?

Bigg Boss Kannada: ಕಲರ್ಸ್ ಕನ್ನಡದಲ್ಲಿ (Colors Kannada) ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಬಿಗ್ ಬಾಸ್ ಸೀಸನ್ 9 (BBK9) ಈಗಾಗಲೇ 50 ದಿನಗಳನ್ನು ಪೂರೈಸಿ ನಡೆಯುತ್ತಿದೆ. ಕಳೆದ ವಾರ ಬಿಗ್ ಬಾಸ್ ಸೀಸನ್ 50 ದಿನಗಳನ್ನು ಮುಗಿಸಿದ ಕಾರಣದಿಂದಾಗಿ ಯಾರನ್ನು ಎಲಿಮಿನೇಟ್ ಮಾಡಲಾಗಿರಲಿಲ್ಲ. ಆದರೆ ಈ ಬಾರಿ ಒಬ್ಬ ಟಫ್ ಕಾಂಪಿಟೇಟರ್ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಹಾಕಲಾಗಿದೆ. ಗೆಲ್ಲುವ ಭರವಸೆ ಮೂಡಿಸಿದ್ದ ಆಟಗಾರರೊಬ್ಬರು ಇದೀಗ ಮನೆಯಿಂದ ಆಚೆ ನಡೆದಿದ್ದಾರೆ. ಅವರೇ ನಟಿ ದೀಪಿಕಾ ದಾಸ್. ಹೌದು, ದೀಪಿಕಾ ದಾಸ್ (Deepika Das) ಅವರ ಎಲಿಮಿನೇಷನ್ ಎಲ್ಲರಿಗೂ ಆಶ್ಚರ್ಯ ತಂದಿದೆ. ಇದರ ಜೊತೆಗೆ ಅವರು ಇಷ್ಟು ದಿನ ಬಿಗ್ ಬಾಸ್ ನಲ್ಲಿ ಇದ್ದದ್ದಕ್ಕಾಗಿ ಪಡೆದ ಸಂಭಾವನೆಯ ಚರ್ಚೆಯಾಗುತ್ತಿದೆ.

ನಟಿ ದೀಪಿಕಾ ದಾಸ್ ಅವರು ನಾಗಿಣಿ (Nagini) ಧಾರವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ನಾಗಿಣಿಯ ಪಾತ್ರ ಅವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತು. ಆನಂತರ ಅವರು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟರು. ಕಳೆದ ಸೀಸನ್ ನಲ್ಲಿ ಮಿಂಚಿದ್ದ ಅವರು ಟಾಪ್ 5 ಆಟಗಾರರಲ್ಲಿ ಸ್ಥಾನ ಪಡೆದಿದ್ದರು. ಆದರೆ ಗೆಲ್ಲುವಲ್ಲಿ ಸ್ವಲ್ಪದಲ್ಲಿ ಮಿಸ್ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಒಂದು ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಹೊಂದಿರುವ ಅವರು ಸಾಕಷ್ಟು ಫೇಮಸ್. ಪ್ರತಿ ವಾರವು ನಾಮಿನೇಟ್ ಆಗುತ್ತಿದ್ದ ಅವರನ್ನು ಅಭಿಮಾನಿಗಳು ಸೇವ್ ಮಾಡುತ್ತಿದ್ದರು. ಆದರೆ ಅಚ್ಚರಿ ಎಂಬಂತೆ ಈ ವಾರ ಅವರು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಕಳೆದ ಸೀಸನ್ ನಲ್ಲಿ ಆಡಿದಷ್ಟು ಚೆನ್ನಾಗಿ ಈ ಸೀಸನ್ ನಲ್ಲಿ ದೀಪಿಕಾ ಆಡುತ್ತಿಲ್ಲ ಎಂಬ ಟೀಕೆಗಳು ಕೆಲವು ನೋಡುಗರಿಂದ ಕೇಳಿಬಂದಿದ್ದವು. ಅಲ್ಲದೆ ದೀಪಿಕಾ ಮನೆಯವರ ಬಳಿ ಅಷ್ಟಾಗಿ ಚೆನ್ನಾಗಿ ನಡೆದುಕೊಳ್ಳುವುದಿಲ್ಲ ಎಂದು ಸಹ ಹೇಳಲಾಗುತ್ತಿತ್ತು. ಪ್ರತಿಸಲ ಇದೇ ಆರೋಪವನ್ನು ಹೇಳಿ ದೀಪಿಕಾ ದಾಸ್ ಅವರನ್ನು ನಾಮಿನೇಟ್ ಮಾಡಲಾಗುತ್ತಿತ್ತು. ಪ್ರತಿ ಬಾರಿಯೂ ಅವರು ಸೇವ್ ಆಗುತ್ತಿದ್ದರು. ಇದನ್ನು ಓದಿ.. Big News: ರೋಹಿತ್ ಶರ್ಮ ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ. ಮೆರೆದಿದ್ದ ರೋಹಿತ್ ಬದಲು ನಾಯಕರಾಗುತ್ತಿರುವುದು ಯಾರು ಗೊತ್ತೇ??

bigg boss kannada deepika das | Bigg Boss Kannada: ಎಲ್ಲಾ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿ ಸಂಭಾವನೆ ಪಡೆದ ದೀಪಿಕಾ: ಹೊರಬಂದು ಪಡೆದ ಸಂಭಾವನೆ ಎಷ್ಟು ಗೊತ್ತೇ?
Bigg Boss Kannada: ಎಲ್ಲಾ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿ ಸಂಭಾವನೆ ಪಡೆದ ದೀಪಿಕಾ: ಹೊರಬಂದು ಪಡೆದ ಸಂಭಾವನೆ ಎಷ್ಟು ಗೊತ್ತೇ? 2

ಆದರೆ ಈ ವಾರ ಅವರು ಮನೆಯಿಂದ ಅಧಿಕೃತವಾಗಿ ಎಲಿಮಿನೇಟ್ ಆಗಿದ್ದಾರೆ. ಇದೀಗ ದೀಪಿಕಾ ದಾಸ್ ಅವರು ಇಷ್ಟು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದುದ್ದಕ್ಕಾಗಿ ಪಡೆದ ಸಂಭಾವನೆಯ ಕುರಿತು ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಬಿಗ್ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಟಗಾರರಿಗೆ ಅವರ ಪ್ರಸಿದ್ಧಿ, ಖ್ಯಾತಿಯ ಆಧಾರದ ಮೇಲೆ ಮೊದಲೇ ವಾರಕ್ಕೆ ಇಷ್ಟು ಸಂಭಾವನೆ ಎಂದು ನಿರ್ಧರಿಸಿ ಒಳಗೆ ಕಳುಹಿಸಲಾಗಿರುತ್ತದೆ. ಅಂದಹಾಗೆ ದೀಪಿಕಾ ದಾಸ್ ಅವರು 9 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಆಡಿದ್ದಕ್ಕಾಗಿ ಅವರು ಬರೋಬ್ಬರಿ ಒಂಬತ್ತು ಲಕ್ಷ (9 ಲಕ್ಷ) ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ದೀಪಿಕಾ ದಾಸ್ ಅವರು ಸಾಕಷ್ಟು ಸಿನಿಮಾ ಕಥೆಗಳನ್ನು ಕೇಳುತ್ತಿದ್ದು, ಮುಂದೆ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇದನ್ನು ಓದಿ..Kannada Astrology: ಆರಂಭವಾಗುತ್ತಿದೆ ಗುರುವಿನ ಚಾಲನೆ. ಒಂದೇ ಬಾರಿಗೆ 5 ರಾಶಿಗಳಿಗೆ ಕಷ್ಟವನ್ನು ಮುಗಿಸಿ, ಅದೃಷ್ಟ ನೀಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

Comments are closed.