Biggboss Kannada: ಬಿಗ್ ಬಾಸ್ ನಲ್ಲಿ ಆರ್ಯವರ್ಧನ್ ವಿರುದ್ಧ ಹೊಸ ನಾಟಕ ಆರಂಭಿಸಿದ ಅಮೂಲ್ಯ: ಆರ್ಯ ವರ್ಧನ್ ಫ್ಯಾನ್ಸ್ ಫುಲ್ ಗರಂ. ಯಾಕೆ ಗೊತ್ತೆ?
Biggboss Kannada: ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ ಈಗಾಗಲೇ ಸಾಕಷ್ಟು ವಾರಗಳನ್ನು ಮುಗಿಸಿ ಇನ್ನೇನು ಕೊನೆಯ ಹಂತಕ್ಕೆ ಬಂದು ತಲುಪಿದೆ. ಈ ಕೊನೆಯ ವಾರಗಳಲ್ಲಿ ಆಟ ಇನ್ನಷ್ಟು ರೋಚಕತೆಯಿಂದ ಸಾಗುತ್ತಿದೆ. ಸಾಮಾನ್ಯವಾಗಿ ಪ್ರತಿ ವಾರವು ಸ್ಪರ್ಧಿಗಳಿಗೆ ಟಾಸ್ಕ್ ಗಳನ್ನು ನೀಡಲಾಗುತ್ತದೆ. ಆಟಗಳಲ್ಲಿ ಹೇಗೆ ಅವರು ಪಾಲ್ಗೊಂಡರು, ಇಡೀ ವಾರ ಹೇಗೆ ಅವರು ನಡೆದುಕೊಂಡರು, ವರ್ತಿಸಿದರು ಬೇರೆಯವರ ಜೊತೆ ಹೇಗೆ ಗೌರವದಿಂದ ನಡೆದುಕೊಂಡರು ಎನ್ನುವ ಎಲ್ಲಾ ಅಂಶಗಳನ್ನು ಗಮನಿಸಲಾಗುತ್ತದೆ. ಜೊತೆಗೆ ಪ್ರತಿ ವಾರ ಈ ಎಲ್ಲ ಅಂಶಗಳನ್ನು ಆಧರಿಸಿ ಅಲ್ಲಿನ ಸ್ಪರ್ಧಿಗಳೇ ಈ ವಾರ ಯಾರು ಉತ್ತಮವಾಗಿ ಆಡಿದರೂ ಮತ್ತು ಯಾರು ಕಳಪೆ ಪ್ರದರ್ಶನ ತೋರಿದರು ಎನ್ನುವುದನ್ನು ನಿರ್ಧರಿಸುತ್ತಾರೆ. ಇವುಗಳಲ್ಲಿ ಅತಿ ಹೆಚ್ಚು ಮತ ಪಡೆದ ಸ್ಪರ್ಧಿಗಳು ವಾರದ ಉತ್ತಮ ಮತ್ತು ಕಳಪೆ ಆಟಗಾರರಾಗಿ ಗುರುತಿಸಿಕೊಳ್ಳುತ್ತಾರೆ. ಅದರಂತೆ ಈ ವಾರ ಆರ್ಯವರ್ಧನ್ (Aryavardhan) ಗುರೂಜಿ ಕಳಪೆ ಪಟ್ಟ ಪಡೆದು ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಪ್ರತಿ ವಾರವೂ ನಡೆಯುವ ಈ ಕಾರ್ಯವು ಈ ವಾರವು ಬಿಗ್ ಬಾಸ್ ಮನೆಯಲ್ಲಿ ನಡೆಯಿತು. ಈ ವೇಳೆ ಸ್ಪರ್ದಿಗಳು ಒಬ್ಬೊಬ್ಬ ಆಟಗಾರನನ್ನು ಕಳಪೆ ಮತ್ತು ಉತ್ತಮ ಸ್ಥಾನಕ್ಕೆ ಆಯ್ಕೆ ಮಾಡಿಕೊಂಡರು. ಮತ್ತು ಅವರು ಯಾಕೆ ಉತ್ತಮ ಮತ್ತು ಯಾಕೆ ಕಳಪೆ ಎನ್ನುವುದಕ್ಕೂ ಕೂಡ ಸರಿಯಾದ ಕಾರಣಗಳನ್ನು ಸಹ ನೀಡಬೇಕಿರುತ್ತದೆ. ಈ ರೀತಿಯಾಗಿ ನಡೆದ ಕಾರ್ಯದಲ್ಲಿ ಅಮೂಲ್ಯ ಗೌಡ ಅವರು ಆರ್ಯವರ್ಧನ್ ಗುರೂಜಿಯವರನ್ನು ಕಳಪೆ ಎಂದು ಗುರುತಿಸಿದರು. ಆದರೆ ಇದನ್ನು ಹೇಳುವುದಕ್ಕೂ ಮೊದಲು ಒಂದು ರೀತಿಯ ದೊಡ್ಡ ಹೈಡ್ರಾಮವೇ ನಡೆಯಿತು ಎಂದು ಹೇಳಬಹುದು. ಕಡ್ಡಾಯವಾಗಿ ಯಾರಾದರೂ ಒಬ್ಬರು ಸ್ಪರ್ಧೆಯನ್ನು ಕಳಪೆ ಮತ್ತು ಒಬ್ಬ ಸ್ಪರ್ಧಿಯನ್ನು ಉತ್ತಮ ಎಂದು ಉಳಿದ ಸ್ಪರ್ಧಿಗಳು ಆರಿಸಲೇ ಬೇಕಾಗುತ್ತದೆ. ಅದರಂತೆ ಅಮೂಲ್ಯ (Amulya) ಅವರ ಸರದಿ ಬಂದಾಗ ಅವರು ಕಳಪೆ ಸ್ಥಾನಕ್ಕೆವನ್ನು ಯಾರಿಗೆ ಕೊಡುವುದು ಎಂದು ಗೊತ್ತಾಗದೆ ಸಾಕಷ್ಟು ಗೊಂದಲವನ್ನು ಸೃಷ್ಟಿಸಿದರು. ಇದನ್ನು ಓದಿ..Lakshana: ಲಕ್ಷಣ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್: ಮೌರ್ಯ ಬದಲಾದದ್ದು ನಾಯಕನ? ಪ್ರೇಕ್ಷರಿಗೆ ಮತ್ತಷ್ಟು ಮನರಂಜನೆ ಫಿಕ್ಸ್
ನನಗೆ ಇಲ್ಲಿ ಯಾರು ಸಹ ಕಳಪೆ ಎಂದು ಅನಿಸುತ್ತಿಲ್ಲ. ಕಳಪೆ ನನಗೆ ನಾನೇ ಕೊಟ್ಟುಕೊಳ್ಳುವುದಾದರೆ ಹಾಗೆ ಮಾಡಿಕೊಳ್ಳುತ್ತಿದ್ದೆ.ಇಲ್ಲಿ ಎಲ್ಲರೂ ಚೆನ್ನಾಗಿ ಆಡಿದ್ದಾರೆ. ಯಾರೋ ಒಬ್ಬರನ್ನೂ ಕಳಪೆ ಎಂದು ಕರೆಯಲು ನನ್ನ ಮನಸ್ಸಾಕ್ಷಿ ಒಪ್ಪುತ್ತಿಲ್ಲ. ನನಗೆ ಮನಸ್ಸಾಕ್ಷಿ ಒಪ್ಪದ ಯಾವ ಕೆಲಸವನ್ನು ನಾನು ಮಾಡುವುದಿಲ್ಲ. ಆದರೂ ಕೂಡ ಇದು ಒಂದು ಫಾರ್ಮ್ಯಾಟ್. ಬಿಗ್ ಬಾಸ್ ನಿಯಮವನ್ನು ನಾನು ಪಾಲಿಸಲೇಬೇಕಾಗಿದೆ. ಹಾಗಾಗಿಯೇ ನಾನು ಒಬ್ಬರ ಹೆಸರನ್ನು ಸೂಚಿಸಲೇ ಬೇಕಾಗಿರುವುದರಿಂದ ಆರ್ಯವರ್ಧನ್ ಗುರೂಜಿಯವರ ಹೆಸರನ್ನು ತೆಗೆದುಕೊಳ್ಳುತ್ತೇನೆ. ಗುರೂಜಿ ಒಳ್ಳೆಯ ಆಟಗಾರರೇ ಆಗಿದ್ದಾರೆ. ಅವರು ಯಾವುದೇ ಕಾರಣಕ್ಕು ಕಳಪೆ ಅಲ್ಲ. ಆದರೂ ಕೂಡ ನಾನು ಒಂದು ಹೆಸರನ್ನು ತೆಗೆದುಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿ ಇರುವುದರಿಂದಾಗಿ ನಾನು ಅವರ ಹೆಸರನ್ನು ತೆಗೆದುಕೊಳ್ಳುತ್ತೇನೆ ಎಂದು ಕಳಪೆಗೆ ಗುರೂಜಿ ಹೆಸರನ್ನು ಅಮೂಲ್ಯ ಸೂಚಿಸಿದ್ದಾರೆ. ಆದರೆ ಯಾವುದೇ ಸೂಕ್ತ ಕಾರಣಗಳು ಇಲ್ಲದೆ ಆರ್ಯವರ್ಧನ್ ಗುರೂಜಿಗೆ ಕಳಪೆ ನೀಡಿದ್ದಕ್ಕಾಗಿ ಗುರೂಜಿ ಅಭಿಮಾನಿಗಳು ಅಮೂಲ್ಯ ಮೇಲೆ ಕೋಪಗೊಂಡಿದ್ದು, ನೆಟ್ಟಿಗರು ಟೀಕಿಸುತ್ತಿದ್ದಾರೆ. ಇದನ್ನು ಓದಿ.. Kannada News: ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟ ಹಿರಿಯ ನಟಿ: ಇಬ್ಬರಿಗೂ ಇಷ್ಟವಾದರೇನೇ ಆ ಕೆಲಸ ಮಾಡುತ್ತಾರೆ ಎಂದು ಮುಲಾಜಿಲ್ಲದೆ ಹೇಳಿದ್ದೇನು ಗೊತ್ತೆ?
Comments are closed.