ಯಪ್ಪಾ ಬ್ರಹ್ಮಾನಂದಂ ಅಸ್ತಿ ಕೇಳಿದರೆ ಒಂದು ಕ್ಷಣ ಮೈಂಡ್ ಬ್ಲಾಕ್ ಆಗುತ್ತದೆ, ಟಾಪ್ ಹೀರೋಗಳು ಕೂಡ ಇಷ್ಟು ದುಡಿದಿಲ್ಲ. ಎಷ್ಟು ಗೊತ್ತೇ??

ತೆಲುಗು ಚಿತ್ರರಂಗದ ಇತಿಹಾಸದಲ್ಲಿ ಕಾಮಿಡಿ ವಿಭಾಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಕಾಮಿಡಿಗೆ ಹಸ್ತಾಕ್ಷರ ಎನ್ನುವ ಹಾಗೆ ಇರುವವರು ಬ್ರಹ್ಮಾನಂದಮ್ ಅವರು. ನಗುವಿನ ರ್ಆಜನಾಗಿ ಕೋಟ್ಯಾಂತರ ಜನರನ್ನು ಪ್ರತಿದಿನ ನಗಿಸುತ್ತಲೇ ಇದ್ದಾರೆ. ಕೆಲವರು ಹೇಳುವ ಡೈಲಾಗ್ ಗಳು, ನಟನೆ ನೋಡಿದರೆ ಕಾಮಿಡಿ ಎನ್ನಿಸುತ್ತದೆ. ಆದರೆ ತೆರೆಯಮೇಲೆ ಇವರನ್ನು ನೋಡಿದರೆ, ನಗು ಶುರುವಾಗುತ್ತದೆ. ಅವರು ನೀಡುವ ಎಕ್ಸ್ಪ್ರೆಷನ್ ಗಳು ಅಷ್ಟು ನಗು ತರಿಸುತ್ತದೆ.

ಇಷ್ಟು ಹೊತ್ತು ನಾವು ಹೇಳುತ್ತಿರುವವರು ಅವರ ಬಗ್ಗೆನೆ ಕಣ್ರೀ.. ಕಾಮಿಡಿ ಕಿಂಗ್, ಹಾಸ್ಯ ಬ್ರಹ್ಮ, ಬ್ರಹ್ಮಾನಂದಂ ಅವರ ಬಗ್ಗೆ. 1956ರ ಫೆಬ್ರವರಿ 1 ರಂದು ಜನಿಸಿದ ಇವರ, ಗುಂಟೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಅದಾದ ಬಳಿಕ ಶಿಕ್ಷಕರಾಗಿ ಮಕ್ಕಳಿಗೆ ಪಾಠ ಹೇಳಿ ಕೊಟ್ಟರು. ಆದರೆ ನಟನೆಯ ಮೇಲಿರುವ ಪ್ಯಾಷನ್ ಇಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇವರ ವೃತ್ತಿ ಜೀವನಕ್ಕೆ ದೊಡ್ಡ ತಿರುವು ತಂದುಕೊಟ್ಟ ಸಿನಿಮಾ ಆಹಾ ನಾ ಪೆಲ್ಲಂಟ..

brahmanandam 1 | ಯಪ್ಪಾ ಬ್ರಹ್ಮಾನಂದಂ ಅಸ್ತಿ ಕೇಳಿದರೆ ಒಂದು ಕ್ಷಣ ಮೈಂಡ್ ಬ್ಲಾಕ್ ಆಗುತ್ತದೆ, ಟಾಪ್ ಹೀರೋಗಳು ಕೂಡ ಇಷ್ಟು ದುಡಿದಿಲ್ಲ. ಎಷ್ಟು ಗೊತ್ತೇ??
ಯಪ್ಪಾ ಬ್ರಹ್ಮಾನಂದಂ ಅಸ್ತಿ ಕೇಳಿದರೆ ಒಂದು ಕ್ಷಣ ಮೈಂಡ್ ಬ್ಲಾಕ್ ಆಗುತ್ತದೆ, ಟಾಪ್ ಹೀರೋಗಳು ಕೂಡ ಇಷ್ಟು ದುಡಿದಿಲ್ಲ. ಎಷ್ಟು ಗೊತ್ತೇ?? 2

ಈ ಸಿನಿಮಾ ಬಳಿಕ ಅವರು ನಿರ್ಮಾಪಕರಿಗೆ ಡೇಟ್ಸ್ ಕೊಡಲಾಗದಷ್ಟು ಬ್ಯುಸಿ ಆಗಿಬಿಟ್ಟರು. ಈಗಲೂ ಇವರ ಕೈತುಂಬಾ ಸಿನಿಮಗಳಿದ್ದು, ಸಿನಿಪ್ರಿಯರನ್ನು ನಗಿಸುತ್ತಲೇ ಇದ್ದಾರೆ. ಮೂರು ಜೆನೆರೇಷನ್ ಕಲಾವಿದರ ಜೊತೆಗೆ ನಟಿಸಿದ ಹೆಗ್ಗಳಿಕೆ ಬ್ರಹ್ಮಾನಂದಮ್ ಅವರಿಗೆ ಮಾತ್ರ ಸ್ವಂತವಾದದ್ದು. ನಲವತ್ತು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿದ್ದು, ದಿಗ್ವಿಜಯ ಸಾಧಿಸುತ್ತಾ ಬಂದಿದ್ದಾರೆ ಬ್ರಹ್ಮಾನಂದಮ್ ಅವರು.

ಬ್ರಹ್ಮಾನಂದಮ್ ಅವರನ್ನು ನೋಡುವ ಸಲುವಾಗಿಯೇ ಥಿಯೇಟರ್ ಗೆ ಹೋಗುವ ಜನರು ಸಹ ಇದ್ದಾರೆ ಅಂದ್ರೆ ಅವರ ಮೇಲೆ ಜನರಿಗಿರುವ ಕ್ರೇಜ್ ಎಷ್ಟು ಎನ್ನುವುದನ್ನು ನೀವು ಅರ್ಧ ಮಾಡಿಕೊಳ್ಳಬಹುದ. 1250 ಕ್ಕಿಂತಲು ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಬ್ರಹ್ಮಾನಂದಮ್ ಅವರು ಅದೇ ರೀತಿ ಭಾರಿ ಹಣವನ್ನು, ಆಸ್ತಿಯನ್ನು ಸಹ ಗಳಿಸಿದ್ದಾರೆ. ಕೇವಲ ಸಿನಿಮಾಗಳಲ್ಲಿ ನಟಿಸುವ ಮೂಲಕ ಬ್ರಹ್ಮಾನಂದಮ್ ಅವರು ₹480 ಕೋಟಿ ಗಳಿಸಿದ್ದಾರೆ. ಇವರು ಹೆಚ್ಚಿನ ಹಣವನ್ನು ಜಮೀನುಗಳ ಮೇಲೆ ಅಂದರೆ ವ್ಯವಸಾಯಕ್ಕೆ ಹಾಕಿದ್ದು, ಜೊತೆಗೆ ರಿಯಲ್ ಎಸ್ಟೇಟ್ ಕೆಲಸಗಳಲ್ಲಿ ಸಹ ಹಣವನ್ನು ಹೂಡಿಕೆ ಮಾಡಿದ್ದಾರೆ.

Comments are closed.