ಕನ್ನಡತಿ ಕಿರಣ್ ರಾಜ್ ರವರ ಜೊತೆ ಬಡ್ಡಿಸ್ ಚಿತ್ರದಲ್ಲಿ ನಟನೆ ಮಾಡುತ್ತಿರುವ ಸಿರಿ ಪ್ರಹ್ಲಾದ್ ಯಾರು ಗೊತ್ತೇ?? ಹಿನ್ನೆಲೆಯೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ಯುವ ಉದಯೋನ್ಮುಖ ನಟಿಯರು ಇತ್ತೀಚಿನ ದಿನಗಳಲ್ಲಿ ಕಾಲಿಟ್ಟು ತಮ್ಮ ನಟನೆಯ ಮೂಲಕ ಸಂಚಲನವನ್ನು ಸೃಷ್ಟಿಸುತ್ತಿದ್ದಾರೆ. ಅವರಲ್ಲಿ ಇಂದು ಒಬ್ಬರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ನಟಿ ಸಿರಿ ಪ್ರಹ್ಲಾದ್ ರವರ ಕುರಿತಂತೆ. ಕಿರುತೆರೆಯ ನಟಿಯಾಗಿದ್ದ ಸಿರಿ ಪ್ರಹ್ಲಾದ್ ಒಂದು ಶಿಕಾರಿಯ ಕಥೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಈಗ ವೇಗವಾಗಿ ಬೆಳೆಯುತ್ತಿರುವ ನಟಿಯಾಗಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ನಿರ್ಮಾಣ ಮಾಡಿರುವ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ನಟಿಸಿರುವ ಲಾ ಸಿನಿಮಾದಲ್ಲಿ ಕೂಡ ಇವರ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಈ ಸಿನಿಮಾ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದೆ. ಸೈಮಾ 2020 ರಲ್ಲಿ ಬೆಸ್ಟ್ ಡೆಬ್ಯು ಟೆಂಟ್ ನಟಿ ಪ್ರಶಸ್ತಿಗೆ ಅವರು ಭಾಜನರಾಗಿದ್ದರು. ಇನ್ನು ಖ್ಯಾತ ಉದ್ಯಮಿ ವಿಜಯ್ ಸಂಕೇಶ್ವರ್ ಅವರ ಜೀವನಗಾಥೆ ಆಗಿರುವ ವಿಜಯನಂದ ಸಿನಿಮಾದಲ್ಲಿ ಅವರ ಪತ್ನಿಯಾಗಿರುವ ಲಲಿತಾ ಸಂಕೇಶ್ವರ ಪಾತ್ರದಲ್ಲಿ ಕೂಡ ಇವರು ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡತಿ ಧಾರಾವಾಹಿ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಮಿಂಚು ಹರಿಸುತ್ತಿರುವ ನಟ ಕಿರಣ್ ರಾಜ್ ನಟನೆಯ ಬಡ್ಡೀಸ್ ಸಿನಿಮಾದಲ್ಲಿ ನಟಿಸಿದ್ದು ಈಗಾಗಲೇ ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಯನ್ನು ಕಂಡಿದೆ.

siri | ಕನ್ನಡತಿ ಕಿರಣ್ ರಾಜ್ ರವರ ಜೊತೆ ಬಡ್ಡಿಸ್ ಚಿತ್ರದಲ್ಲಿ ನಟನೆ ಮಾಡುತ್ತಿರುವ ಸಿರಿ ಪ್ರಹ್ಲಾದ್ ಯಾರು ಗೊತ್ತೇ?? ಹಿನ್ನೆಲೆಯೇನು ಗೊತ್ತೇ?
ಕನ್ನಡತಿ ಕಿರಣ್ ರಾಜ್ ರವರ ಜೊತೆ ಬಡ್ಡಿಸ್ ಚಿತ್ರದಲ್ಲಿ ನಟನೆ ಮಾಡುತ್ತಿರುವ ಸಿರಿ ಪ್ರಹ್ಲಾದ್ ಯಾರು ಗೊತ್ತೇ?? ಹಿನ್ನೆಲೆಯೇನು ಗೊತ್ತೇ? 2

ಕೇವಲ ಇಷ್ಟು ಮಾತ್ರವಲ್ಲದೆ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ರವರ ಜೊತೆಗೆ ಮಲ್ಲೇಶಿ ಪ್ರೇಮ ಪ್ರಸಂಗ ಎನ್ನುವ ಹಾಸ್ಯ ಮಯ ಕಿರುಚಿತ್ರದಲ್ಲಿ ಕೂಡ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೂಡ 43000 ಗೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿರುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನಲ್ ಇನ್ಫ್ಲುಎನ್ಸರ್ ಕೂಡ ಆಗಿದ್ದಾರೆ.

Comments are closed.