ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಅಂತ್ಯಗೊಳಿಸಲು ಕೆಜಿಎಫ್ ಕಾರಣ. ಯಾಕಂತೆ ಗೊತ್ತೆ?? ಕೆಜಿಎಫ್ ನಿಂದ ರಶ್ಮಿಕಾಗೆ ಶಾಕ್

ನಮಸ್ಕಾರ ಸ್ನೇಹಿತರೆ ಸದ್ಯದ ಮಟ್ಟಿಗೆ ದಕ್ಷಿಣಭಾರತದ ಚಿತ್ರಗಳಾಗಿರುವ ಆರ್ ಆರ್ ಆರ್ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳು ಇತ್ತೀಚಿನ ವರ್ಷದಲ್ಲಿ ಪಂಚಭಾಷಾ ಬಿಡುಗಡೆಯ ಮೂಲಕ ದೇಶ ವಿದೇಶಗಳಲ್ಲಿ ಭಾರತೀಯ ಚಿತ್ರರಂಗದ ಕೀರ್ತಿಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿವೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಇವೆರಡೂ ಚಿತ್ರಗಳ ನಂತರ ಎನ್ನುವುದಕ್ಕಿಂತ ಅದಕ್ಕಿಂತ ಮುಂಚೆ ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಪುಷ್ಪ ಚಿತ್ರ ಪಂಚ ಭಾಷೆಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ರವರು ಪರಕಾಯ ಪ್ರವೇಶವನ್ನು ಮಾಡಿ ಇಂದಿಗೂ ಕೂಡ ಭಾರತ ದೇಶದ ಪ್ರತಿಯೊಂದು ಮನೆಯಲ್ಲಿ ಕೂಡ ಪುಷ್ಪ ನ ಡೈಲಾಗ್ ಹೇಳುವಂತೆ ಮಾಡಿದ್ದಾರೆ.

ಸಿನಿಮಾದ ಪ್ರತಿಯೊಂದು ಹಾಡು ಹಾಗೂ ಡೈಲಾಗ್ಗಳು ಪ್ರತಿಯೊಂದು ಭಾಷೆಯ ಸಿನಿಮಾ ಪ್ರೇಕ್ಷಕರ ಬಾಯಲ್ಲಿ ಬಾಯ್ ಪಾಠವಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ನ್ಯಾಷನಲ್ ಕೃಷ್ ಆಗಿರುವ ರಶ್ಮಿಕ ಮಂದಣ್ಣ ನವರು ಕೂಡ ಮಿಂಚಿ ಮರೆದಿದ್ದಾರೆ ಹಾಗೂ ಈ ಪಾತ್ರದ ಮೂಲಕವೇ ಬಾಲಿವುಡ್ನಲ್ಲಿ ಕೂಡ ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಹೀಗಾಗಿ ಈಗಾಗಲೇ ಪುಷ್ಪ ಚಿತ್ರದ ಎರಡನೇ ಭಾಗದ ಮೇಲೆ ಪ್ರತಿಯೊಬ್ಬರ ನಿರೀಕ್ಷ ಕೂಡ ಹೆಚ್ಚಾಗಿದ್ದು ಅತಿ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎಂಬುದಾಗಿ ತಿಳಿದುಬಂದಿದೆ ಆದರೆ ರಶ್ಮಿಕ ಮಂದಣ್ಣ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಇದೇ ಎನ್ನುವುದಾಗಿದೆ. ಹೌದು ಗೆಳೆಯರೇ ಪುಷ್ಪ ಚಿತ್ರದ ಎರಡನೇ ಭಾಗದಲ್ಲಿ ರಶ್ಮಿಕ ಮಂದಣ್ಣ ನವರ ಶ್ರೀವಲ್ಲಿ ಪಾತ್ರವನ್ನು ಬೇಗ ಮುಗಿಸುತ್ತಾರೆ ಎಂಬುದಾಗಿದೆ. ಇದಕ್ಕೆ ಕೆಜಿಎಫ್ ಚಾಪ್ಟರ್ 2 ಚಿತ್ರ ಸ್ಪೂರ್ತಿಯಾಗಿದೆ.

rashmika kgf | ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಅಂತ್ಯಗೊಳಿಸಲು ಕೆಜಿಎಫ್ ಕಾರಣ. ಯಾಕಂತೆ ಗೊತ್ತೆ?? ಕೆಜಿಎಫ್ ನಿಂದ ರಶ್ಮಿಕಾಗೆ ಶಾಕ್
ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಅಂತ್ಯಗೊಳಿಸಲು ಕೆಜಿಎಫ್ ಕಾರಣ. ಯಾಕಂತೆ ಗೊತ್ತೆ?? ಕೆಜಿಎಫ್ ನಿಂದ ರಶ್ಮಿಕಾಗೆ ಶಾಕ್ 2

ಹೌದು ಗೆಳೆಯರೆ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಹೇಗೆ ನಾಯಕಿಯ ಪಾತ್ರವನ್ನು ಮುಗಿಸಿದನಂತರ ಹೀರೋ ಮೇಲೆ ಎಲ್ಲರಿಗೂ ಅನುಕಂಪ ಹೆಚ್ಚಾಗುತ್ತದೆಯೋ ಅದೇ ಐಡಿಯಾವನ್ನು ಪುಷ್ಪ ಚಿತ್ರದಲ್ಲಿ ಕೂಡ ಉಪಯೋಗಿಸಿಕೊಳ್ಳಲಾಗುತ್ತದೆ ಎಂಬುದಾಗಿ ಕೇಳಿಬರುತ್ತಿದೆ. ಶ್ರೀವಲ್ಲಿ ಪಾತ್ರವನ್ನು ಬೇಗ ಮುಗಿಸಿದ ನಂತರ ಅದರ ರಿವೆಂಜ್ ಅನ್ನು ತೀರಿಸಿಕೊಳ್ಳಲು ಪುಷ್ಪ ಇನ್ನಷ್ಟು ವ್ಯಾಗ್ರ ನಾಗುತ್ತಾನೆ ಎಂಬುದಾಗಿ ಎಲ್ಲರೂ ಊಹಿಸುತ್ತಿದ್ದಾರೆ. ಇದರ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.