ಕಡಿಮೆ ಆದಾಯದಿಂದ ಲಕ್ಷ ಲಕ್ಷ ಗಳಿಸುವ ಅತ್ಯುತ್ತಮ ಬಿಸಿನೆಸ್ ಯಾವ್ಯಾವು ಗೊತ್ತೇ?? ನಗರ ಪ್ರದೇಶದಲ್ಲಿ ಇರುವವರು ಹಾಗಾಗ್ಗೇ ಹಳ್ಳಿಗೆ ಹೋಗಿ ಕೂಡ ಬಿಸಿನೆಸ್ ಮಾಡಬಹುದು.

ನಮಸ್ಕಾರ ಸ್ನೇಹಿತರೇ, ಕರೋನಾ ಕಾತದಿಂದ ಸಾಕಷ್ಟು ಜನ ನಗರ ಪ್ರದೇಶವನ್ನು ಬಿಟ್ಟು ಹಳ್ಳಿಗಳಿಗೆ ಹೋಗಿ ನೆನೆಸಿರುವುದೇ ಹೆಚ್ಚು. ಹೀಗೆ ಉದ್ಯೋಗ ಕಳೆದುಕೊಂಡಿದ್ದು ಬೇಸರದ ಸಂಗತಿಯೇ ಆಗಿದ್ದರೂ, ವಿದ್ಯಾವಂತರೂ ಕೂಡ ಕೃಷಿಯನ್ನು ನೆಚ್ಚಿಕೊಂಡು ಹಳ್ಳಿಗಳಿಗೆ ಹಿಂದಿರುಗಿದ್ದು ಉತ್ತಮ ಸಂಗತಿಯೆ. ಸಾಕಷ್ಟು ವಿವಿಧ ಆದಾಯ ತರುವಂಥ ಕೃಷಿ ಮಾಡಬಹುದಾಗಿದ್ದು ಅದರಲ್ಲಿ ಇಂದು ಶ್ರೀಗಂಧದ ಬೆಳೆಯ ಬಗ್ಗೆ ಅದರಿಂದ ಸಿಗುವ ಆದಾಯದ ಬಗ್ಗೆ ಮಾಹಿತಿಯನು ನೀಡುತ್ತೇವೆ.

ಹೌದು ಶ್ರೀಗಂಧಕ್ಕೆ ತುಂಬಾನೇ ಬೇಡಿಕೆಯಿದೆ. ವಿದೇಶಗಳಲ್ಲಿಯೂ ಕೂಡ ಶ್ರೀಗಂಧಕ್ಕೆ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ ಶ್ರೀಗಂಧದ ಬೆಳೆಯನ್ನು ಬೆಳೆದರೆ ಖಂಡಿತವಾಗಿಯೂ ತಿಂಗಳಿಗೆ ಉತ್ತಮ ಆದಾಯಗಳಿಸಬಹುದು. 1 ಲಕ್ಷ ರೂಪಾಯಿ ಹೂಡಿಕೆ ಮಾಡಿ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಈ ವ್ಯವಹಾರದಲ್ಲಿ ಹೂಡಿಕೆ ಮಾಡಿದ ಹಣಕ್ಕಿಂತ ದುಪ್ಪಟ್ಟು ಲಾಭವನ್ನು ಗಳಿಸಬಹುದು.

indian money 4 | ಕಡಿಮೆ ಆದಾಯದಿಂದ ಲಕ್ಷ ಲಕ್ಷ ಗಳಿಸುವ ಅತ್ಯುತ್ತಮ ಬಿಸಿನೆಸ್ ಯಾವ್ಯಾವು ಗೊತ್ತೇ?? ನಗರ ಪ್ರದೇಶದಲ್ಲಿ ಇರುವವರು ಹಾಗಾಗ್ಗೇ ಹಳ್ಳಿಗೆ ಹೋಗಿ ಕೂಡ ಬಿಸಿನೆಸ್ ಮಾಡಬಹುದು.
ಕಡಿಮೆ ಆದಾಯದಿಂದ ಲಕ್ಷ ಲಕ್ಷ ಗಳಿಸುವ ಅತ್ಯುತ್ತಮ ಬಿಸಿನೆಸ್ ಯಾವ್ಯಾವು ಗೊತ್ತೇ?? ನಗರ ಪ್ರದೇಶದಲ್ಲಿ ಇರುವವರು ಹಾಗಾಗ್ಗೇ ಹಳ್ಳಿಗೆ ಹೋಗಿ ಕೂಡ ಬಿಸಿನೆಸ್ ಮಾಡಬಹುದು. 2

ಇನ್ನು ಭಾರತದಲ್ಲಿ ಶ್ರೀಗಂಧದ ಬೆಲೆಯ ಬಗ್ಗೆ ನೋಡುವುದಾದರೆ, ಕೆಜಿಗೆ 8 ರಿಂದ 10 ಸಾವಿರ ರೂಪಾಯಿಗಳಿರುತ್ತವೆ. ಅದೇ ವಿದೇಶಗಳಲ್ಲಿ ಶ್ರೀಗಂಧದ ಬೆಲೆ ಸುಮಾರು 20 ರಿಂದ 25 ಸಾವಿರ ರೂಪಾಯಿಗಳಷ್ಟು. ಒಂದು ಶ್ರೀಗಂಧದ ಮರದಿಂದ 8 ರಿಂದ 10 ಕೆಜಿ ಶ್ರೀಗಂಧ ಚಕ್ಕೆ/ ತುಂಡುಗಳನ್ನು ಮರವನ್ನು ಸುಲಭವಾಗಿ ಪಡೆಯಬಹುದು. ಅಂದರೆ 1 ಎಕರೆ ಜಮೀನಿನಲ್ಲಿ ಶ್ರೀಗಂಧ ಕೃಷಿ ಮಾಡಿದರೆ 50 ರಿಂದ 60 ಲಕ್ಷ ರೂಪಾಯಿ ಆದಾಯ ಗಳಿಸಬಹುದು.

ಇನ್ನು ಮತ್ತೊಂದು ಲಾಭದಾಯಕ ಬೆಳೆ ಅಂದ್ರೆ ಅದು ಜೀರಿಗೆ. ಮಸಾಲೆಗಳಲ್ಲಿ ಬಳಸಲಾಗುವ ಜೀರಿಗೆಗೆ ವರ್ಷದ 365 ದಿನವೂ ಬೇಡಿಕೆ ತಪ್ಪಿದ್ದಲ್ಲ. ಹಾಗಾಗಿ ಜೀರಿಗೆ ಕೃಷಿ ಮಾಡಿದ್ರೆ ಅತ್ಯುತ್ತಮ ಲಾಭವನ್ನು ಗಳಿಸಬಹುದು. ಜೀರಿಗೆ ಕೃಷಿಗೆ ಲೋಮಿ ಮಣ್ಣು ಬೇಕಾಗುತ್ತದೆ. ಇದನ್ನು ಚಳಿಗಾಲದಲ್ಲಿ ಬಿತ್ತನೆ ಮಾಡಬೇಕು. ಜೀರಿಗೆ ಸಸ್ಯವು ಹೆಚ್ಚಿನ ಶಾಖ ತಡೆದುಕೊಳ್ಳಲ್ಲ. ಹಾಗಾಗಿ ಜೀರಿಗೆ ಬಿತ್ತನೆಯ ಸಮಯದಲ್ಲಿ ತಾಪಮಾನವು 24 ರಿಂದ 28 ಡಿಗ್ರಿ ಸೆಂಟಿಗ್ರೇಡ್ ಮತ್ತು ಸಸ್ಯದ ಬೆಳವಣಿಗೆಯ ಸಮಯದಲ್ಲಿ 20 ರಿಂದ 22 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಇರುವಂತೆ ನೋಡಿಕೊಳ್ಳಬೇಕು. ಇನ್ನು ಜೀರಿಗೆಯನ್ನು ನವೆಂಬರ್ ಮೂರನೇ ವಾರದಿಂದ ಡಿಸೆಂಬರ್ ಮೊದಲ ವಾರದವರೆಗೆ ಜೀರಿಗೆ ಬಿತ್ತನೆ ಮಾಡಲು ಸೂಕ್ತ ಸಮಯ.

Comments are closed.