ನಮ್ಮ ರಾಮನಗರದಲ್ಲಿ ಖಾಲಿ ಇದೇ ಉದ್ಯೋಗಗಳು, ಬಾಕಿ ಇರುವ ಎರಡು ದಿನಗಳಲ್ಲಿ ಅರ್ಜಿ ಸಲ್ಲಿಸಿ ಸರ್ಕಾರೀ ನೌಕರಿ ಪಡೆಯಿರಿ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನೌಕರಿ ಎನ್ನುವುದು ಅದರಲ್ಲೂ ಸಂಪಾದನೆ ಎನ್ನುವುದು ಎಷ್ಟರ ಮಟ್ಟಿಗೆ ಪ್ರಾಮುಖ್ಯತೆ ವಹಿಸಿದೆ ಎಂದು ನಿಮಗೆ ತಿಳಿದಿದೆ. ಈಗ ರಾಮನಗರ ಜಿಲ್ಲಾದ್ಯಂತ ಹೊಸ ಕೆಲಸಕ್ಕಾಗಿ ಜನರಿಗೆ ಅವಕಾಶವನ್ನು ನೀಡಲು ಸರ್ಕಾರ ಮುಂದಾಗಿದೆ. ರಾಮನಗರ ಜಿಲ್ಲೆಯ 4 ತಾಲೂಕುಗಳ 5 ಶಿಶು ಅಭಿವೃದ್ಧಿ ವ್ಯಾಪ್ತಿಯ ಹುದ್ದೆಗಳ ಭರ್ತಿಗಾಗಿ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಟಣೆಯನ್ನು ಹೊರಡಿಸಿದೆ. ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಆಸಕ್ತ ಮಹಿಳೆಯರು ಫೆಬ್ರವರಿ 28 ರ ಸಂಜೆ 6 ಗಂಟೆ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಒಟ್ಟು 219 ಹುದ್ದೆಗಳು ತೆರೆದಿದ್ದು ಅದರಲ್ಲಿ ಮುಖ್ಯ ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗಾಗಿ 20, ಮಿನಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಾಗಿ 28 ಮತ್ತು ಅಂಗನವಾಡಿ ಸಹಾಯಕಿ ಸುದ್ದಿಗಾಗಿ 171 ಜನರಿಗೆ ಅವಕಾಶವನ್ನು ತೆರೆದಿಡಲಾಗಿದೆ. ಅಪ್ಲಿಕೇಶನ್ ಗೆ ಅರ್ಜಿ ಹಾಕಲು ಜನವರಿ 28ರಂದು ವೇಳಾಪಟ್ಟಿ ನೀಡಲಾಗಿದ್ದು ಕೊನೆಯ ದಿನಾಂಕ ಫೆಬ್ರವರಿ28 ಆಗಿದೆ. ಅಂಗನವಾಡಿ ಕಾರ್ಯಕರ್ತೆಯರು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು ಸಹಾಯಕಿ ಹುದ್ದೆಯನ್ನು ನಿರ್ವಹಿಸುವವರು ಕನಿಷ್ಠ ನಾಲ್ಕನೇ ತರಗತಿಯನ್ನು ಪಾಸಾಗಿರಬೇಕು. ವಯಸ್ಸಿನ ಅರ್ಹತೆಯನ್ನು ಗಮನಿಸಿದರೆ 35 ವರ್ಷದ ಒಳಗಿನ ವರಾಗಿರಬೇಕು. ಇನ್ನು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನವನ್ನು ನಿಮಗೆ ತಿಳಿಸುತ್ತೇವೆ ಬನ್ನಿ.

anganwadi karnataka 1 | ನಮ್ಮ ರಾಮನಗರದಲ್ಲಿ ಖಾಲಿ ಇದೇ ಉದ್ಯೋಗಗಳು, ಬಾಕಿ ಇರುವ ಎರಡು ದಿನಗಳಲ್ಲಿ ಅರ್ಜಿ ಸಲ್ಲಿಸಿ ಸರ್ಕಾರೀ ನೌಕರಿ ಪಡೆಯಿರಿ. ಹೇಗೆ ಗೊತ್ತೇ??
ನಮ್ಮ ರಾಮನಗರದಲ್ಲಿ ಖಾಲಿ ಇದೇ ಉದ್ಯೋಗಗಳು, ಬಾಕಿ ಇರುವ ಎರಡು ದಿನಗಳಲ್ಲಿ ಅರ್ಜಿ ಸಲ್ಲಿಸಿ ಸರ್ಕಾರೀ ನೌಕರಿ ಪಡೆಯಿರಿ. ಹೇಗೆ ಗೊತ್ತೇ?? 2

ಮೊದಲಿಗೆ anganwadirecruit.kar.nic.in ವೆಬ್ ಸೈಟ್ ಗೆ ಭೇಟಿ ನೀಡಿ ರಾಮನಗರ ಜಿಲ್ಲೆಯನ್ನು ಆಯ್ಕೆ ಮಾಡಬೇಕಾಗುತ್ತದೆ. ನಂತರ ನೀವು ಬಯಸುವ ಹುದ್ದೆಯನ್ನು ಆಯ್ಕೆ ಮಾಡಬೇಕಾಗುತ್ತೆ. ನಂತರ ಅಪ್ಲೈ ಬಟನ್ ಕ್ಲಿಕ್ ಮಾಡಿ. ನಂತರ ಹೊಸ ಪುಟ ತೆರೆಯುತ್ತದೆ ಅಲ್ಲಿ ಕೇಳಲಾಗಿರುವ ವಿವರಗಳನ್ನು ನೀವು ಟೈಪ್ ಮಾಡುವ ಮೂಲಕ ತುಂಬಿಸಬೇಕಾಗಿತ್ತು. ಮೀಸಲಾತಿ ಕೋರುವ ಹಾಗೂ ಇತರೆ ಪ್ರಮಾಣಪತ್ರಗಳನ್ನು ಅಲ್ಲಿ ನಮೂದಿಸಲಾಗಿರುವ ಆಯಾಯ ಆಪ್ಷನ್ ಗಳಲ್ಲಿ ಲಗತ್ತಿಸಬೇಕಾಗುತ್ತದೆ. ಒಂದು ವೇಳೆ ನೀವು ರಾಮನಗರ ದವರಾಗಿದ್ದರೆ ನಿಮಗೆ ಸರ್ಕಾರಿ ಕೆಲಸದ ಸುವರ್ಣಾವಕಾಶ ಕಾದಿದೆ.

Comments are closed.