News from ಕನ್ನಡಿಗರು

ನಾಗ ಚೈತನ್ಯ ರವರ ಜೊತೆ ಸಂಸಾರ ಮಾಡಿದ್ದ ಮನೆಯನ್ನು 100 ಕೋಟಿ ಕೊಟ್ಟು ಮತ್ತೆ ಖರೀದಿ ಮಾಡಿದ ಸಮಂತಾ: ಅದು ಬೇಡಿ ಬೇಡಿ ಹೆಚ್ಚು ಕೋಟಿ ಕೋಟಿ ಕೊಟ್ಟಿದ್ದು ಯಾಕೆ ಗೊತ್ತೇ?

24

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಸಮಂತ ಹಾಗೂ ನಾಗಚೈತನ್ಯ ಇಬ್ಬರೂ ಕೂಡ ಪರಸ್ಪರ ವೈಮನಸ್ಸಿನ ಕಾರಣದಿಂದಾಗಿ ವಿವಾಹ ವಿಚ್ಛೇದನವನ್ನು ನೀಡುವ ಮೂಲಕ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಇಟ್ಟಿದ್ದರು. ಇದಾದ ನಂತರ ಇಬ್ಬರೂ ಕೂಡ ಈ ದುಃಖದಿಂದ ಹೊರ ಬರುವ ಎಲ್ಲಾ ಪ್ರಯತ್ನಗಳನ್ನು ಕೂಡ ಮಾಡಿ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯ ರಾಗಿದ್ದರು. ಅದರಲ್ಲೂ ವಿಶೇಷವಾಗಿ ಸಮಂತ ರವರು ಈ ಹೋರಾಟದಲ್ಲಿ ಒಬ್ಬಂಟಿಯಾಗಿದ್ದರೂ ಕೂಡ ಸಿನಿಮಾಗಳಲ್ಲಿ ಹೆಚ್ಚೆಚ್ಚು ನಿರತರಾಗುವ ಮೂಲಕ ಈ ದುಃಖವನ್ನು ಮರೆಯುವ ಪ್ರಯತ್ನವನ್ನು ಮಾಡಿದ್ದರು.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅವರು ಬಹುತೇಕ ಎಲ್ಲಾ ಭಾಷೆಗಳ ಎಲ್ಲಾ ಪ್ರಮುಖ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯದ ಮಟ್ಟಿಗೆ ಭಾರತೀಯ ಚಿತ್ರದ ಅತ್ಯಂತ ಬಹು ಬೇಡಿಕೆಯ ಜನಪ್ರಿಯ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ನಟಿ ಸಮಂತ ಅವರ ಕುರಿತಂತೆ ಆಶ್ಚರ್ಯಕರ ವಿಚಾರವನ್ನು ಹಿರಿಯ ತೆಲುಗು ನಟ ಮುರಳಿ ಮೋಹನ್ ರವರು ಸಂದರ್ಶನ ಒಂದರಲ್ಲಿ ಬಿಚ್ಚಿಟ್ಟಿದ್ದಾರೆ. ಹೌದು ಗೆಳೆಯರೇ ನಾಗ ಚೈತನ್ಯ ಅವರ ಜೊತೆಗೆ ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಸಮಂತ ಅವರು ಅವರಿಬ್ಬರ ಜೊತೆಯಾಗಿದ್ದ ಮನೆಯನ್ನು 100 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದಾರೆ.

ಇದು ಮನೆಯ ನಿಜವಾದ ಬೆಲೆಗಿಂತ ದ್ವಿಗುಣ ಆಗಿದ್ದು ಮನೆಯ ಮಾಲೀಕರಿಗೆ ದುಪ್ಪಟ್ಟು ಲಾಭವನ್ನು ಕೂಡ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇಷ್ಟೊಂದು ಹಟ ಬಿದ್ದು ಈ ಮನೆಯನ್ನು ಖರೀದಿಸಿದ್ದು ನಾಗ ಚೈತನ್ಯ ಅವರ ಮೇಲಿನ ನೆನಪಿಗಾಗಿಯೋ ಅಥವಾ ದ್ವೇಷಕ್ಕಾಗಿಯೋ ಎಂಬುದು ತಿಳಿದು ಬಂದಿಲ್ಲ. ಅದೇನೇ ಇರಲಿ ಸಮಂತಾ ಅವರ ಈ ನೂರು ಕೋಟಿ ರೂಪಾಯಿ ಮನೆಯ ಚರ್ಚೆ ಈಗ ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ.

Leave A Reply

Your email address will not be published.