News from ಕನ್ನಡಿಗರು

ಕೊನೆಗೂ ಬಯಲಾಯ್ತು ವಿಕ್ರಾಂತ್ ರೋಣ ಚಿತ್ರದ ಮೊದಲ ಗಳಿಕೆ: ಎಷ್ಟು ಗೊತ್ತೇ?? ನಿಜಕ್ಕೂ ದಾಖಲೆ ಮಾಡಿತೇ ??

17

ನಮಸ್ಕಾರ ಸ್ನೇಹಿತರೆ ಹಲವಾರು ವರ್ಷಗಳಿಂದ ಬಿಡುಗಡೆಗಾಗಿ ಎದುರು ನೋಡುತ್ತಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಕೊನೆಗೂ ಕೂಡ ಈಗಾಗಲೇ ಬಿಡುಗಡೆಯಾಗಿದೆ. ಮೊದಲ ದಿನವೇ ವಿಶ್ವಾದ್ಯಂತ ಬರೋಬರಿ 9500 ಪರದೆಗಳಿಗಿಂತಲೂ ಅಧಿಕ ಪರದೆಗಳ ಮೇಲೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಕೆಲವೊಂದು ಕಡೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ಬಂದರೆ ಇನ್ನು ಕೆಲವು ಕಡೆಗಳಲ್ಲಿ ಚಿತ್ರ ಸೂಪರ್ ಹಿಟ್ ಎನ್ನುವ ಪ್ರತಿಕ್ರಿಯೆಗಳು ಸಿನಿಮಾ ರಸಿಕರಿಂದ ಬಂದಿದೆ. 3ಡಿ ನಲ್ಲಿ ಹಾಲಿವುಡ್ ಸಿನಿಮಾಗಳನ್ನು ಕೂಡ ಮೀರಿಸುವಂತೆ ಎಫೆಕ್ಟ್ ನೀಡಿದ್ದು ನಿಜಕ್ಕೂ ಕೂಡ ಪ್ರೇಕ್ಷಕರ ಕಣ್ಮನವನ್ನು ಸೆಳೆದಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಅಭಿನಯ ಚಕ್ರವರ್ತಿ ಎನಿಸುವಂತಹ ಪರ್ಫಾರ್ಮೆನ್ಸ್ ನಿಜಕ್ಕೂ ಕೂಡ ಪ್ರತಿಯೊಬ್ಬ ಪ್ರೇಕ್ಷಕರ ಮನವನ್ನು ಗೆದ್ದಿದೆ. ಇನ್ನು ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವುದರ ಕುರಿತಂತೆ, ಪ್ರತಿಯೊಬ್ಬರೂ ಕೂಡ ಕಾತರರಾಗಿದ್ದಾರೆ. ಹಾಗಿದ್ದರೆ ಕರ್ನಾಟಕದಲ್ಲಿ ಮೊದಲ ದಿನ ಎಷ್ಟು ಗಳಿಸಿದೆ ಎಂಬುದರ ಕುರಿತಂತೆ ಮೊದಲು ನಾವು ನಿಮಗೆ ತಿಳಿಸುತ್ತೇವೆ ಬನ್ನಿ. ಮೊದಲಿಗೆ ಊರ್ವಶಿ ಚಿತ್ರಮಂದಿರದ ವಿಚಾರಕ್ಕೆ ಬರುವುದಾದರೆ ಮೊದಲ ದಿನವೇ ಬರೋಬ್ಬರಿ ದಾಖಲೆಯ 25 ಲಕ್ಷ ಕಲೆಕ್ಷನ್ ಮಾಡಿದೆ ಎಂಬುದಾಗಿ ತಿಳಿದು ಬಂದಿದೆ.

ಇನ್ನು ಪ್ರತಿಷ್ಠಿತ ಆರ್ಮ್ಯಾಕ್ಸ್ ಮೀಡಿಯಾ ಸಂಸ್ಥೆ ನಡೆಸಿರುವ ರಿಸರ್ಚ್ ಪ್ರಕಾರ ಕರ್ನಾಟಕದಲ್ಲಿಯೇ ವಿಕ್ರಾಂತ್ ರೋಣ ಮೊದಲ ದಿನ ಬರೋಬ್ಬರಿ 16.2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬುದಾಗಿ ತಿಳಿದು ಬಂದಿದೆ ಆದರೆ ಕೆಲವೊಂದು ಡಿಸ್ಟ್ರಿಬ್ಯೂಟರ್ ಲೆಕ್ಕಾಚಾರದ ಪ್ರಕಾರ ಇದು ಇನ್ನಷ್ಟು ಹೆಚ್ಚಾಗಿದೆ ಎಂಬುದಾಗಿ ಕೇಳಿ ಬರುತ್ತಿದ್ದು ಒಟ್ಟಾರೆಯಾಗಿ ಏನಿಲ್ಲವೆಂದರು ಮೊದಲ ದಿನವೇ ಕರ್ನಾಟಕದಲ್ಲಿ 18 ಕೋಟಿ ರೂಪಾಯಿ ಗಳಿಕೆಯನ್ನು ಮಾಡಿದೆ ಎಂಬುದಾಗಿ ತಿಳಿದು ಬಂದಿದೆ. ಒಟ್ಟಾರೆಯಾಗಿ ವಿಶ್ವಾದ್ಯಂತ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ 35 ಕೋಟಿ ರೂಪಾಯಿಯನ್ನು ಮೀರಿದೆ ಎಂಬುದಾಗಿ ಕೂಡ ಸುದ್ದಿ ಇದೆ. ವಾರಂತ್ಯದಲ್ಲಿ ಇದು ಇನ್ನಷ್ಟು ಹೆಚ್ಚಾಗಿ ಅತಿ ಶೀಘ್ರದಲ್ಲೇ ನೂರು ಕೋಟಿ ರೂಪಾಯಿ ಕ್ಲಬ್ ಗೆ ವಿಕ್ರಾಂತ್ ರೋಣ ಸೇರಲಿದ್ದಾನೆ ಎಂದು ಹೇಳಬಹುದು.

Leave A Reply

Your email address will not be published.