ಬಿಡುಗಡೆಯಾದ ಮೊದಲ ದಿನವೇ ಸುದೀಪ್ ರವರಿಗೆ ಬಿಗ್ ಶಾಕ್: ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಕೆಲವೇ ಗಂಟೆಗಳಲ್ಲಿ ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ವಿಕ್ರಾಂತ್ ರೋಣ ಸಿನಿಮಾ ಹಲವಾರು ದಿನಗಳಿಂದ ಬಿಡುಗಡೆಗಾಗಿ ಕಾಯುತ್ತಿತ್ತು. ಕೊನೆಗೂ ಕೂಡ ಇಂದು ಅಂದರೆ ಜುಲೈ 28ರಂದು ಅದ್ದೂರಿಯಾಗಿ ದೇಶವಿದೇಶಗಳಲ್ಲಿ ಸಹಸ್ರಾರು ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಮಾತ್ರವಲ್ಲದೆ ಪರಭಾಷಾ ಸಿನಿಮಾ ರಸಿಕರು ಕೂಡ ಈ ಸಿನಿಮಾಗಾಗಿ ಕಾದುನಿಂತಿದ್ದರು.

ಈಗ ಈ ಸಿನಿಮಾ ಬಿಡುಗಡೆಯಾಗಿದ್ದು ಬಿಡುಗಡೆಯಾದ ಮೊದಲ ದಿನದಿಂದಲೇ ಸಿನಿಮಾದ ಕುರಿತಂತೆ ಪ್ರೇಕ್ಷಕರಲ್ಲಿ ಪಾಸಿಟಿವ್ ರೆಸ್ಪಾನ್ಸ್ ಕೇಳಿಬಂದಿತ್ತು ಹೀಗಾಗಿ ಚಿತ್ರ ಯಾವುದೇ ಸಂಕಷ್ಟ ವಿಲ್ಲದೆ ಬಾಕ್ಸಾಫೀಸಿನಲ್ಲಿ ಹೊಸ ದಾಖಲೆಯನ್ನು ನಿರ್ಮಿಸಲಿದೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ಈಗ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವಿಕ್ರಾಂತ್ ರೋಣ ಚಿತ್ರ ತಂಡಕ್ಕೆ ಶಾಕಿಂಗ್ ವಿಚಾರ ತಿಳಿದು ಬಂದಿದೆ. ಹೌದು ಗೆಳೆಯರೇ ಎಷ್ಟೇ ಮಾನವೀಯ ಜನತೆ ಇದ್ದರೂ ಕೂಡ ಈ ತಂತ್ರಜ್ಞಾನ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರತಿ ಸಿನಿಮಾಗೂ ಕೂಡ ಪೈರಸಿ ಎನ್ನುವ ಭೂತ ಬೆಂಬಿಡದೆ ಕಾಡುತ್ತಿದೆ. ವಿಕ್ರಾಂತ ರೋನಾ ಕೂಡ ಮೊದಲ ದಿನದಿಂದಲೇ ಈ ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂದು ಹೇಳಬಹುದು.

vr 2 | ಬಿಡುಗಡೆಯಾದ ಮೊದಲ ದಿನವೇ ಸುದೀಪ್ ರವರಿಗೆ ಬಿಗ್ ಶಾಕ್: ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಕೆಲವೇ ಗಂಟೆಗಳಲ್ಲಿ ಏನಾಗಿದೆ ಗೊತ್ತೇ??
ಬಿಡುಗಡೆಯಾದ ಮೊದಲ ದಿನವೇ ಸುದೀಪ್ ರವರಿಗೆ ಬಿಗ್ ಶಾಕ್: ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಕೆಲವೇ ಗಂಟೆಗಳಲ್ಲಿ ಏನಾಗಿದೆ ಗೊತ್ತೇ?? 2

ಮೊದಲ ದಿನವೇ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವಿಕ್ರಾಂತ್ ರೋಣ ಸಿನಿಮಾದ ಪೈರಸಿ ಲಿಂಕ್ಗಳು ಸಹಸ್ರಾರು ಸಂಖ್ಯೆಯಲ್ಲಿ ಓಡಾಡುತ್ತಿವೆ ಚಿತ್ರತಂಡ ಇದನ್ನು ಡಿಲೀಟ್ ಮಾಡಲು ಹಲವಾರು ಪ್ರಯತ್ನ ನಡೆಸುತ್ತಿದ್ದರು ಕೂಡ ಇದು ಮತ್ತೆ ಮತ್ತೆ ಪುನರಾವರ್ತನೆ ಆಗುತ್ತಿದೆ. ನಿಜವಾದ ಸಿನಿಮಾ ರಸಿಕ ರಾಗಿರುವ ನಾವು ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುವ ಮೂಲಕ ಅದಕ್ಕಾಗಿ ಪರಿ ಶ್ರಮ ಪಟ್ಟಿರುವ ಹಲವಾರು ಶ್ರಮಿಕರ ಶ್ರಮಕ್ಕೆ ಬೆಲೆ ನೀಡೋಣ. ಇನ್ನು ನೀವು ಕೂಡ ಸಿನಿಮಾವನ್ನು ವೀಕ್ಷಿಸಿದ್ದರೆ ತಪ್ಪದೆ ಸಿನಿಮಾದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

Comments are closed.