Shriya Saran: ಶ್ರೀಯಾ ಸರನ್ ದೊಡ್ಡ ಮನಸ್ಸು ಕಂಡು ಭೇಷ್ ಎಂದು ಚಿರಂಜೀವಿ: ಯಾರು ಒಪ್ಪದೇ ಇದ್ದಾಗ ಶ್ರೇಯ ಶರಣ್ ಮಾಡಿದ್ದೇನು ಗೊತ್ತೇ??
Shriya Saran: ಸೌತ್ ಇಂಡಿಯನ್ ಸಿನಿಮಾದ ಸ್ಟಾರ್ ನಟಿಯರಲ್ಲಿ ಒಬ್ಬರು ಶ್ರೀಯಾ ಸರನ್. ಈ ನಟಿ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ನಟಿಸಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡವರು. ಶ್ರೀಯಾ ಸರನ್ ಅವರು ಚಿತ್ರರಂಗಕ್ಕೆ 20 ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿದೆ. ಆಕೆಗೆ ಮದುವೆಯಾಗಿ ಮಗು ಕೂಡ ಇದೆ. ಆದರೆ ಶ್ರೀಯಾ ಅವರಿಗೆ ಇಂದಿಗೂ ಸಹ ಬೇಡಿಕೆ ಕಡಿಮೆ ಆಗಿಲ್ಲ.
ಕಳೆದ ವರ್ಷ ತೆರೆಕಂಡ ಎಸ್.ಎಸ್.ರಾಜಮೌಳಿ (SS Rajamouli) ಅವರ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಆರ್.ಆರ್.ಆರ್ (RRR) ಸಿನಿಮಾದಲ್ಲಿ ಶ್ರೀಯಾ ನಟಿಸಿದ್ದರು. ಈ ವರ್ಷ ಕನ್ನಡದ ಮತ್ತೊಂದು ಬ್ಲಾಕ್ ಬಸ್ಟರ್ ಕಬ್ಜ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದರು. ಹೀಗೆ ಶ್ರೀಯಾ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಾ, ಜೊತೆಗೆ ಕುಟುಂಬವನ್ನು ಬ್ಯಾಲೆನ್ಸ್ ಮಾಡುತ್ತಾ ಸಂತೋಷವಾಗಿದ್ದಾರೆ. ಶ್ರೀಯಾ ಅವರು 2002ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು.
ಆಗಿನ ಸ್ಟಾರ್ ನಟರು, ಸೂಪರ್ ಸ್ಟಾರ್ ರಜನಿಕಾಂತ್ (Rajanikanth), ಮೆಗಾಸ್ಟಾರ್ ಚಿರಂಜೀವಿ (Chiranjeevi), ನಾಗಾರ್ಜುನ (Nagarjuna), ವಿಕ್ಟರಿ ವೆಂಕಟೇಶ್ (Venkatesh), ಎಲ್ಲರ ಜೊತೆಯಲ್ಲೂ ನಟಿಸಿ ಸ್ಟಾರ್ ಪಟ್ಟಕ್ಕೆ ಏರಿದರು. ಇನ್ನು ಯಂಗ್ ಹೀರೋಗಳಾದ ಸೂರ್ಯ (Surya), ಪವನ್ ಕಲ್ಯಾಣ್ (Pawan Kalyan), ಪ್ರಭಾಸ್ (PRabhas) ಇವರೆಲ್ಲರ ಜೊತೆಗೆ ನಟಿಸಿ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಈ ಶ್ರೀಯಾ ಸರನ್ ಅವರನ್ನು ಮೆಗಾಸ್ಟಾರ್ ಚಿರಂಜೀವಿ ಅವರು ಮೆಚ್ಚಿ ಹೊಗಳಿದ್ದಾರೆ.
ಅದಕ್ಕೆ ಕಾರಣ ಏನು ಅಂದ್ರೆ ಈಗ ಚಿರಂಜೀವಿ, ನಾಗಾರ್ಜುನ ಅವರಂಥ ಸೀನಿಯರ್ ಹೀರೋಗಳ ಜೊತೆಗೆ ಸಿನಿಮಾಗಳಲ್ಲಿ ನಟಿಸಲು ಹೀರೋಯಿನ್ ಗಳು ಹಿಂದೇಟು ಹಾಕುತ್ತಿದ್ದಾರೆ. ಹಾಗಿರುವಾಗ ನಟಿ ಶ್ರೀಯಾ ಸರನ್ ಅವರು ಇದೀಗ ಮೆಗಾಸ್ಟಾರ್ ಚಿರಂಜೀವಿ ಅವರ ಭೋಲಾ ಶಂಕರ್ ಸಿನಿಮಾದಲ್ಲಿ ಐಟಂ ಸಾಂಗ್ ಒಂದರಲ್ಲಿ ಸ್ಟೆಪ್ ಹಾಕಲು ಸಂತೋಷದಿಂದ, ಕೇಳಿದ ತಕ್ಷಣವೇ ಓಕೆ ಹೇಳಿದ್ದು ಅದರಿಂದ ಚಿರಂಜೀವಿ ಅವರಿಗೆ ಬಹಳ ಸಂತೋಷವಾಗಿದ್ದಾರೆ. ಹಾಗೆಯೇ ಈ ಒಂದು ಹಾಡಿಗೆ ಸ್ಟೆಪ್ ಹಾಕುವುದಕ್ಕೆ 75 ಲಕ್ಷ ಸಂಭಾವನೆ ಕೇಳಿದ್ದಾರಂತೆ ಶ್ರೀಯಾ.
Comments are closed.