Balakrishna: ನೇರವಾಗಿ ಬಾಲಕೃಷ್ಣ ರವರ ಮುಖದ ಮೇಲೆ, ನಿನ್ನ ಜೊತೆ ನಟನೆ ಮಾಡಲ್ಲ ಎಂದಿದ್ದ ಕನ್ನಡತಿ ಯಾರು ಗೊತ್ತೇ?? ಬಾಲಯ್ಯ ಕೊನೆಗೆ ಏನು ಮಾಡಿದರು ಗೊತ್ತೇ?
Balakrishna: ತೆಲುಗು ಚಿತ್ರರಂಗದ ಖ್ಯಾತ ನಟ ಬಾಲಕೃಷ್ಣ ಅವರ ಬಗ್ಗೆ ಎಲ್ಲರಿಗು ಗೊತ್ತಿದೆ. ಬಾಲಕೃಷ್ಣ ಅವರಿಗೆ ವಯಸ್ಸು 60 ದಾಟಿದೆ. ಆದರೆ ಇಂದಿಗೂ ಸಹ ಯಂಗ್ ಹೀರೋಗಳಿಗೆ ಕಡಿಮೆ ಇಲ್ಲ ಎನ್ನುವ ಹಾಗಿದೆ ಇವರ ಎನರ್ಜಿ. ಈಗಲೂ ಸಹ ಬಾಲಕೃಷ್ಣ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ. ಬಾಲಕೃಷ್ಣ ಅವರ ಜೊತೆಗೆ ಸಿನಿಮಾ ಎಂದರೆ, ಯಂಗ್ ಹೀರೋಯಿನ್ ಗಳು ಸಹ ಓಕೆ ಎನ್ನುತ್ತಾರೆ..
ಆದರೆ ಆ ಒಬ್ಬ ಸ್ಟಾರ್ ನಟಿ ಮಾತ್ರ ಬಾಲಕೃಷ್ಣ ಅವರ ಜೊತೆಗೆ ನಟಿಸುವುದಕ್ಕೆ ನೋ ಎಂದಿದ್ದರಂತೆ. ಅದಕ್ಕೆ ಒಂದು ಮುಖ್ಯ ಕಾರಣ ಕೂಡ ಇದೆ. ಬಾಲಯ್ಯ ಅವರು ನಟಿಸಿ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಆದ ಸಿನಿಮಾ ಚೆನ್ನಕೇಶವ ರೆಡ್ಡಿ. ಈ ಸಿನಿಮಾದಲ್ಲಿ ಹೀರೋಯಿನ್ ಆಗಿ ತಬು (Tabu) ಹಾಗೂ ಶ್ರೀಯಾ (Shriya Saran) ಅವರು ನಟಿಸಿದರು. ಆದರೆ ಈ ಸಿನಿಮಾದಲ್ಲಿ ತಬು ಅವರ ಪಾತ್ರಕ್ಕೆ ಮೊದಲ ಆಯ್ಕೆ ಬೇರೆ ನಟಿ ಆಗಿದ್ದರು.
ತಬು ಅವರು ನಟಿಸಿದ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು, ನಟಿ ಸೌಂದರ್ಯ (Soundarya) ಅವರು. ಸೌಂದರ್ಯ ಅವರ ಜೊತೆಗೆ ಈ ಪಾತ್ರದ ಬಗ್ಗೆ ಅಪ್ರೋಚ್ ಮಾಡಿದಾಗ, ಸೌಂದರ್ಯ ಅವರು ನೋ ಎಂದು ಹೇಳಿದ್ದರಂತೆ. ಸೌಂದರ್ಯ ಅವರು ಈ ಆಫರ್ ರಿಜೆಕ್ಟ್ ಮಾಡುವುದಕ್ಕೆ ಒಂದು ಮುಖ್ಯವಾದ ಕಾರಣ ಇದೆ. ಅದೇನು ಎಂದರೆ, ಚೆನ್ನಕೇಶವ ರೆಡ್ಡಿ ಸಿನಿಮಾದಲ್ಲಿ ಬಾಲಯ್ಯ ಅವರು ದ್ವಿಪಾತ್ರದಲ್ಲಿ ನಟಿಡಿದ್ದಾರೆ..
ಇದರಲ್ಲಿ ತಂದೆಯ ಜೋಡಿಯ ಪಾತ್ರಕ್ಕೆ ಸೌಂದರ್ಯ ಅವರನ್ನು ಅಪ್ರೋಚ್ ಮಾಡಲಾಗಿತ್ತು, ಆ ಸಮಯದಲ್ಲಿ ಸೌಂದರ್ಯ ಅವರು ಬೇಡಿಕೆಯಲ್ಲಿದ್ದ ಸ್ಟಾರ್ ಹೀರೋಯಿನ್..ಪೀಕ್ ನಲ್ಲಿದ್ದ ಸಮಯದಲ್ಲಿ ಸೌಂದರ್ಯ ಅವರು ಈ ಪಾತ್ರದಲ್ಲಿ ವಯಸ್ಸಾದ ಹಾಗೆ ನಟಿಸಿದರೆ, ತಮ್ಮ ಕೆರಿಯರ್ ಗೆ ಎಫೆಕ್ಟ್ ಆಗುತ್ತದೆ ಎನ್ನುವ ಕಾರಣಕ್ಕೆ ಸೌಂದರ್ಯ ಅವರು ನೋ ಅಂದಿದ್ದಾರಂತೆ. ಬಳಿಕ ತಂದೆ ಪಾತ್ರಕ್ಕೆ ಜೋಡಿಯಾಗಿ ತಬು ಅವರನ್ನು ಮಗನ ಪಾತ್ರಕ್ಕೆ ಶ್ರೀಯಾ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು.
Comments are closed.