SSLC, PUC ಪಾಸಾಗಿದ್ದವರಿಗೆ ಇಲ್ಲಿದೆ ನೋಡಿ ಬಂಪರ್ ಉದ್ಯೋಗ, ಉದ್ಯೋಗ ಹುಡುಕುತ್ತಿದ್ದರೆ ಇದಕ್ಕಿಂತ ಬೆಸ್ಟ್ ಉದ್ಯೋಗ ಮತ್ತೊಂದಿಲ್ಲ.

ನಮಸ್ಕಾರ ಸ್ನೇಹಿತರೇ, ಹತ್ತನೇ ತರಗತಿ ಅಥವಾ ಪಿಯುಸಿ ಪಾಸಾದವರು ಉದ್ಯೋಗ ಹುಡುಕುತ್ತಿದ್ದರೆ, ನಿಮಗೊಂದು ಸುವರ್ಣಾವಕಾಶ ಇಲ್ಲಿದೆ. ಸೆಂಟ್ರಲ್ ಇನ್ಸ್ಟಿಟ್ಯೂಟ್ ಫಾರ್ ವುಮೆನ್ ಇನ್ ಅಗ್ರಿಕಲ್ಚರ್ ತನ್ನಲ್ಲಿರುವ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ನಿಮಗೂ ಆಸಕ್ತಿ ಇದ್ದರೆ ಕೂಡಲೇ ಅರ್ಜಿ ಸಲ್ಲಿಸಿ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.

ಸೆಂಟ್ರಲ್ ಇನ್ಸ್ಟಿಟ್ಯೂಟ್ ಫಾರ್ ವುಮೆನ್ ಇನ್ ಅಗ್ರಿಕಲ್ಚರ್ ನಲ್ಲಿ ಒಟ್ಟು 14 ಕಮ್ಯುನಿಟಿ ಮೊಬಿಲೈಸರ್, ಫೀಲ್ಡ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಫೆಬ್ರವರಿ 17 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕಮ್ಯುನಿಟಿ ಮೊಬಿಲೈಸರ್ ನಲ್ಲಿ -7 ಹುದ್ದೆಗಳು ಹಾಗೂ ಫೀಲ್ಡ್ ಅಸಿಸ್ಟೆಂಟ್ ನಲ್ಲಿ -7 ಹುದ್ದೆಗಳು ಭರ್ತಿ ಆಗಬೇಕಿದೆ. ಇನ್ನು ವೇತನದ ಬಗ್ಗೆ ಹೇಳುವುದಾದರೆ, ಕಮ್ಯುನಿಟಿ ಮೊಬಿಲೈಸರ್ ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 8000ರೂ. ಹಾಗೂ ಫೀಲ್ಡ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 15,000 ರೂ. ವೇತನ ಸಿಗಲಿದೆ.

ciwa recruitment | SSLC, PUC ಪಾಸಾಗಿದ್ದವರಿಗೆ ಇಲ್ಲಿದೆ ನೋಡಿ ಬಂಪರ್ ಉದ್ಯೋಗ, ಉದ್ಯೋಗ ಹುಡುಕುತ್ತಿದ್ದರೆ ಇದಕ್ಕಿಂತ ಬೆಸ್ಟ್ ಉದ್ಯೋಗ ಮತ್ತೊಂದಿಲ್ಲ.
SSLC, PUC ಪಾಸಾಗಿದ್ದವರಿಗೆ ಇಲ್ಲಿದೆ ನೋಡಿ ಬಂಪರ್ ಉದ್ಯೋಗ, ಉದ್ಯೋಗ ಹುಡುಕುತ್ತಿದ್ದರೆ ಇದಕ್ಕಿಂತ ಬೆಸ್ಟ್ ಉದ್ಯೋಗ ಮತ್ತೊಂದಿಲ್ಲ. 2

ಇನ್ನು ಕಮ್ಯುನಿಟಿ ಮೊಬಿಲೈಸರ್ ಹುದ್ದೆಗೆ 10ನೇ ತರಗತಿ ತೇರ್ಗಡೆ ಹೊಂದಿರಬೇಕು ಹಾಗೂ ಫೀಲ್ಡ್ ಅಸಿಸ್ಟೆಂಟ್ ಹುದ್ದೆಗೆ ಪಿಯುಸಿ ಅಥವಾ ಅಗ್ರಿಕಲ್ಚರ್/ಹಾರ್ಟಿಕಲ್ಚರ್, ಪದವಿ ಪಡೆದಿರಬೇಕು. ಇನ್ನು ಕಮ್ಯುನಿಟಿ ಮೊಬಿಲೈಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಫೆಬ್ರವರಿ 19 ಕೊನೆಯ ದಿನವಾದರೆ, ಫೀಲ್ಡ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು 17ನೇ ತಾರಿಕು ಕೊನೆಯ ದಿನಾಂಕವಾಗಿದೆ. ಹಾಗೆಯೇ ಕಮ್ಯುನಿಟಿ ಮೊಬಿಲೈಸರ್ ಹುದ್ದೆಗೆ ಫೆಬ್ರವರಿ 24ಕ್ಕೆ ಹಾಗೂ ಫೀಲ್ಡ್ ಅಸಿಸ್ಟೆಂಟ್ – ಹುದ್ದೆಗೆ ಫೆಬ್ರವರಿ 22ಕ್ಕೆ ಸಂದರ್ಶನವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ icar-ciwa.org.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.

Comments are closed.