ಬಿಗ್ ನ್ಯೂಸ್: ಮನೆಯಲ್ಲಿ ಕುಳಿತು ಉಚಿತವಾಗಿ ಜೀ 5 ನಲ್ಲಿ ನೋಡಿ ಹೊಸ ಸಿನಿಮಾಗಳು. ಹೇಗೆ ಗೊತ್ತೇ? ಆಫರ್ ಬೇಗ ಬಳಸಿ.

ನಮಸ್ಕಾರ ಸ್ನೇಹಿತರೇ ಹಿಂದೊಂದು ಕಾಲವಿತ್ತು ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ ಸಾಕು ಥಿಯೇಟರ್ ಮುಂದೆ ಸಾವಿರಾರು ಜನ ಸೆಲೆಬ್ರೇಶನ್ ಮಾಡೋಕೆ ರೆಡಿ ಆಗುತ್ತಿದ್ದರು. ಆದರೆ ಈ ಮಹಾಮಾರಿ ಬಂದಾಗಿನಿಂದ ಲಾಕ್ಡೌನ್ ಆದಮೇಲೆ ಜನರು ಮನೆಯಲ್ಲಿಯೇ ಚಿಕ್ಕ ಪರದೆಗಳ ಮೇಲೆ ಸಿನಿಮಾವನ್ನು ನೋಡಲು ವ್ಯಸ್ತರಾಗಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ಸಿನಿಮಾಗಳನ್ನು ನೋಡುವುದರಲ್ಲಿ ಸಿನಿಮಾ ಪ್ರೇಕ್ಷಕರು ಹೊಂದಿಕೊಂಡು ಬಿಟ್ಟಿದ್ದಾರೆ. ಮಹಾಮಾರಿ ಇದು ಕಾರಣದಿಂದಾಗಿ ಸಿನಿಮಾ ವನ್ನು ಚಿತ್ರಮಂದಿರಗಳಲ್ಲಿ ನೋಡಲು ಪ್ರೇಕ್ಷಕರು ಹಿಂದೇಟು ಹಾಕುತ್ತಿದ್ದಾರೆ.

ಈ ಕಾರಣದಿಂದಾಗಿಯೇ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಹಲವಾರು ಸಿನಿಮಾಗಳು ಡಿಜಿಟಲ್ ಪ್ಲಾಟ್ ಫಾರಂನಲ್ಲಿ ದೊಡ್ಡಮಟ್ಟದ ಯಶಸ್ಸನ್ನು ಕಾಣುತ್ತಿವೆ. ಈ ಕಾರಣದಿಂದಾಗಿ ಓಟಿಟಿ ಪ್ಲಾಟ್ಫಾರ್ಮ್ ನಲ್ಲಿರುವ ಅಪ್ಲಿಕೇಶನ್ಗಳ ನಡುವೆ ಸಾಕಷ್ಟು ಸ್ಪರ್ಧೆಗಳು ಏರ್ಪಟ್ಟಿದೆ ಎಂದು ಹೇಳಬಹುದಾಗಿದೆ. ಇವುಗಳಲ್ಲಿ ಜೀ5 ಕೂಡ ಹಿಂದೆ ಬಿದ್ದಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲವೊಂದು ನಿರ್ಮಾಪಕರು ಕನ್ನಡ ಚಿತ್ರಗಳನ್ನು ಓಟಿಟಿ ಪ್ಲಾಟ್ಫಾರ್ಮ್ ಗಳು ಖರೀದಿಸುತ್ತಿಲ್ಲ ಎಂಬುದಾಗಿ ಅಳಲನ್ನು ತೋಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಜೀ 5 ಶಿವಣ್ಣ ನಟನೆಯ ಭಜರಂಗಿ-2 ಹಾಗೂ ರಿಷಬ್ ಶೆಟ್ಟಿ ನಟನೆಯ ಗರುಡ ಗಮನ ವೃಷಭ ವಾಹನ ಚಿತ್ರವನ್ನು ಖರೀದಿಸಿತ್ತು.

kannada movies | ಬಿಗ್ ನ್ಯೂಸ್: ಮನೆಯಲ್ಲಿ ಕುಳಿತು ಉಚಿತವಾಗಿ ಜೀ 5 ನಲ್ಲಿ ನೋಡಿ ಹೊಸ ಸಿನಿಮಾಗಳು. ಹೇಗೆ ಗೊತ್ತೇ? ಆಫರ್ ಬೇಗ ಬಳಸಿ.
ಬಿಗ್ ನ್ಯೂಸ್: ಮನೆಯಲ್ಲಿ ಕುಳಿತು ಉಚಿತವಾಗಿ ಜೀ 5 ನಲ್ಲಿ ನೋಡಿ ಹೊಸ ಸಿನಿಮಾಗಳು. ಹೇಗೆ ಗೊತ್ತೇ? ಆಫರ್ ಬೇಗ ಬಳಸಿ. 2

ಎರಡು ಕೂಡ ಗೆದ್ದು ಯಶಸ್ವಿಯಾಗಿ ಬೀಗುತ್ತಿದೆ. ಈ ಹಿನ್ನೆಲೆಯಲ್ಲಿ ಒಂದು ಹೊಸ ಭರ್ಜರಿ ಆಫರನ್ನು ಸಂಸ್ಥೆ ಹೊರಡಿಸಿದೆ. ಅದೇನೆಂದರೆ ಜೀ 5 ಅಪ್ಲಿಕೇಶನ್ನಲ್ಲಿ 60ಕ್ಕೂ ಅಧಿಕ ಸಿನಿಮಾಗಳನ್ನು ಹಾಗೂ ವೆಬ್ ಸಿರೀಸ್ ಗಳನ್ನು ಫೆಬ್ರವರಿ 12ರಿಂದ ಪ್ರಾರಂಭವಾಗಿ 14ರವರೆಗೆ ಬ್ಯಾಕ್ ಟು ಬ್ಯಾಕ್ 72 ಗಂಟೆಗಳ ಕಾಲ ಉಚಿತವಾಗಿ ಯಾವುದೇ ಚಂದಾದಾರಿಕೆ ಇಲ್ಲದೆ ನೋಡಬಹುದಾಗಿದೆ. ಹೌದು ಇದು ಆಶ್ಚರ್ಯವಾದರೂ ಕೂಡ ನಿಜ. ಇಲ್ಲದಿದ್ದರೆ ಸಿನಿಮಾಗಳನ್ನು ಚಂದಾದಾರಿಕೆಯನ್ನು ಪಾವತಿಸಿ ನೋಡಬೇಕಾಗಿತ್ತು. ಮೊದಲ ಬಾರಿಗೆ ಜೀ 5 ಸಂಸ್ಥೆ 72 ಗಂಟೆಗಳ ಕಾಲ ಉಚಿತವಾಗಿ ಸಿನಿಮಾಗಳನ್ನು ನೋಡುವಂತಹ ಅವಕಾಶವನ್ನು ಸಿನಿಮಾ ಪ್ರೇಕ್ಷಕರಿಗೆ ಮಾಡಿಕೊಟ್ಟಿದೆ. ಹೀಗಾಗಿ ತಪ್ಪದೇ ಇದರ ಸದುಪಯೋಗ ಮಾಡಿಕೊಳ್ಳಿ.

Comments are closed.