ಕನ್ನಡತಿ ಶ್ರೀನಿಧಿ ಶೆಟ್ಟಿ ಹಾಗೂ ವಿಕ್ರಂ ನಟಿಸಿರುವ ಬಹು ನಿರೀಕ್ಷಿತ ಕೋಬ್ರಾ ಸಿನಿಮಾ ಮೊದಲ ದಿನ ಗಳಿಸಿದ್ದು ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೆಜಿಎಫ್ ಚಾಪ್ಟರ್ 1 ಹಾಗೂ 2ರಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಶ್ರೀನಿಧಿ ಶೆಟ್ಟಿ, ಬೇರೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಕೆಜಿಎಫ್ ಸರಣಿಯ ಚಿತ್ರಗಳ ನಂತರ ಅವರು ಒಪ್ಪಿಕೊಂಡಿದ್ದು ಹಾಗೂ ನಟಿಸಿದ್ದು ಕೇವಲ ಒಂದೇ ಒಂದು ಸಿನಿಮಾದಲ್ಲಿ. ಹೌದು ಅದು ತಮಿಳು ಚಿತ್ರರಂಗದ ಚಿಯಾನ್ ಖ್ಯಾತಿಯ ವಿಕ್ರಂ ನಟನೆಯ ಕೋಬ್ರಾ ಸಿನಿಮಾದಲ್ಲಿ.

ವಿಭಿನ್ನ ಕಥಾಂದರವನ್ನು ಹೊಂದಿರುವ ಹಾಗೂ ವಿಕ್ರಂ ಅವರ ನಾನಾ ರೀತಿಯ ಲೂಕ್ ಹಾಗೂ ಶೇಡ್ ಗಳನ್ನು ಹೊಂದಿರುವ ವಿಶೇಷ ಸಿನಿಮಾ ಆಗಿರುವ ಕೋಬ್ರಾ ಇದೇ ಆಗಸ್ಟ್ 31ರಂದು ವಿಶ್ವವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಗಣೇಶ ಚತುರ್ಥಿ ಹಬ್ಬದ ರಜೆಯ ಪ್ರಯುಕ್ತವಾಗಿ ಬಿಡುಗಡೆ ಆದ ಈ ಸಿನಿಮಾ ರಜೆಯ ಲಾಭವನ್ನು ಕೂಡ ಪಡೆದುಕೊಂಡಿತ್ತು. ಈ ಸಿನಿಮಾದ ಪ್ರಮುಖ ಆಕರ್ಷಣೆ ಏನೆಂದರೆ,ಚಿಯಾನ್ ವಿಕ್ರಂ ಅವರು ಬರೋಬ್ಬ 8 ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಶ್ರೀನಿಧಿ ಶೆಟ್ಟಿ ಅವರ ಸಿನಿಮಾ ಕರಿಯರ್ ನ ಮೂರನೇ ಸಿನಿಮಾ ಇದಾಗಿದ್ದು ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರಲ್ಲಿ ಸಿನಿಮಾದ ಕುರಿತಂತೆ ಕುತೂಹಲ ಹೆಚ್ಚಾಗಿದೆ. ಎಆರ್ ರೆಹಮಾನ್ ರವರ ಸಂಗೀತ ಕೂಡ ಈ ಸಿನಿಮಾಗಿದೆ.

cobra 1 | ಕನ್ನಡತಿ ಶ್ರೀನಿಧಿ ಶೆಟ್ಟಿ ಹಾಗೂ ವಿಕ್ರಂ ನಟಿಸಿರುವ ಬಹು ನಿರೀಕ್ಷಿತ ಕೋಬ್ರಾ ಸಿನಿಮಾ ಮೊದಲ ದಿನ ಗಳಿಸಿದ್ದು ಎಷ್ಟು ಕೋಟಿ ಗೊತ್ತೇ??
ಕನ್ನಡತಿ ಶ್ರೀನಿಧಿ ಶೆಟ್ಟಿ ಹಾಗೂ ವಿಕ್ರಂ ನಟಿಸಿರುವ ಬಹು ನಿರೀಕ್ಷಿತ ಕೋಬ್ರಾ ಸಿನಿಮಾ ಮೊದಲ ದಿನ ಗಳಿಸಿದ್ದು ಎಷ್ಟು ಕೋಟಿ ಗೊತ್ತೇ?? 2

ಇನ್ನು ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಈ ಸಿನಿಮಾ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ವಿಲನ್ ಪಾತ್ರಧಾರಿಯಾಗಿ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಕಾಣಿಸಿಕೊಂಡಿದ್ದಾರೆ. ಇದೇ ವಾರದಲ್ಲಿ ವಾರಂತ್ಯದಲ್ಲಿ ಕೂಡ ಶನಿವಾದ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ ಎಂಬುದಾಗಿ ಸಿನಿಮಾ ಪಂಡಿತರ ಲೆಕ್ಕಾಚಾರ ಹಾಕಿದ್ದಾರೆ. ಒಟ್ಟಾರಿಯಾಗಿ ಕೋಬ್ರಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಪುಟಿದೆಳುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಹೇಳಬಹುದಾಗಿದೆ. ಚಿತ್ರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.