News from ಕನ್ನಡಿಗರು

ಯಶಸ್ಸು ನೆತ್ತಿಗೇರಿಸಿಕೊಂಡು ಧಿಮಾಕು ತೋರಿಸಿದ ವಿಜಯ್ ದೇವರಕೊಂಡ ಗೆ ಮತ್ತೊಂದು ಶಾಕ್: ತೆಲುಗಿನವರನ್ನು ಎದುರಿಹಾಕಿಕೊಂಡ ತಪ್ಪು ಮಾಡಿದರೆ? ಏನಾಗಿದೆ ಗೊತ್ತೇ??

5

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ವಿಜಯ್ ದೇವರಕೊಂಡ ಅವರಿಗೆ ಶನಿ ಕಾಟ ಪ್ರಾರಂಭವಾಗಿದೆ ಎಂದು ಹೇಳಬಹುದಾಗಿದೆ. ಬರ ಬರುತ್ತಿದ್ದಂತೆ ಅವರ ಅಹಂಕಾರ ಎನ್ನುವುದು ಅವರಿಗೆ ಮುಳುವಾಗುತ್ತಿದ್ದಂತೆ ಕಾಣುತ್ತಿದೆ. ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿದ್ದ ವಿಜಯ್ ದೇವರಕೊಂಡ ತಲೆಯ ಮೇಲೆ ಕೊಂಬು ಬಂದವರಂತೆ ಆಡುತ್ತಿದ್ದರು. ಆದರೆ ಲೈಗರ್ ಸಿನಿಮಾದ ಸೋಲಿನ ಮೂಲಕ ಅವರ ಕೊಂಬು ಮುರಿದಂತಿದೆ ಎಂಬುದಾಗಿ ಹೇಳಬಹುದಾಗಿದೆ. ಲೈಗರ್ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಸಾಕಷ್ಟು ಉದ್ಧಟತನವನ್ನು ವಿಜಯ್ ದೇವರಕೊಂಡ ಮೆರೆದಿದ್ದರು.

ಯಾವುದೇ ಫ್ಯಾಮಿಲಿ ಬ್ಯಾಗ್ರೌಂಡ್ ಇಲ್ಲದೆ ನಾನು ಬಂದಿದ್ದೇನೆ ನನ್ನ ಸಿನಿಮಾಾಗೆ ಎಷ್ಟೊಂದು ಕ್ರೇಜ್ ಎನ್ನುವುದಾಗಿ ನಾನೇ ಎಲ್ಲ ಎಂಬಂತೆ ಮಾತನಾಡಿದರು. ಇವರಂತೆಯೇ ಸಿನಿಮಾ ಹಿನ್ನಲೆ ಇಲ್ಲದ ಹಲವಾರು ಜನರು ಇಂದಿಗೂ ಕೂಡ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಆಗಿದ್ದಾರೆ ಆದರೆ ಇವರ ಹಾಗೆ ಅಹಂಕಾರದ ರೀತಿಯಲ್ಲಿ ಯಾರು ಕೂಡ ಮಾತನಾಡುತ್ತಿಲ್ಲ ಎಲ್ಲರೂ ಕೂಡ ಶಾಂತವಾಗಿಯೇ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಇವರ ಆಟಿಟ್ಯೂಡ್ ಚಿತ್ರರಂಗದ ಹಲವಾರು ಹಿರಿಯರನ್ನು ಕೂಡ ಇರಿಸು ಮುರಿಸು ಮಾಡುವಂತೆ ಮಾಡಿದೆ. ಬಾಯ್ಕಾಟ್ ವಿಚಾರ ಬಂದಾಗಲೂ ಕೂಡ ಇಷ್ಟ ಇದ್ದರೆ ಸಿನಿಮಾವನ್ನು ಥೇಟರ್ಗಳಲ್ಲಿ ನೋಡುತ್ತಾರೆ ಇಲ್ಲದಿದ್ದರೆ ಟಿವಿ ಹಾಗೂ ಮೊಬೈಲ್ಗಳಲ್ಲಿ ನೋಡುತ್ತಾರೆ ಎಂಬುದಾಗಿ ಉಡಾಫೆಯ ಮಾತುಗಳನಾಡಿದ್ದರು.

ಈಗ ತೆಲುಗು ಪ್ರೇಕ್ಷಕರು ಹಾಗೂ ಸಿನಿಮಾ ರಂಗದವರು ಕೂಡ ವಿಜಯ್ ದೇವರಕೊಂಡ ವಿರುದ್ಧ ಅಸಮಾಧಾನದ ಹೊಗೆಯನ್ನು ಬಿಡುತ್ತಿದ್ದಾರೆ. ಇನ್ನು ಮೂಲೆಗಳ ಪ್ರಕಾರ ಲೈಗರ್ ಬರೋಬ್ಬರಿ 50 ಕೋಟಿ ನಷ್ಟವನ್ನು ನಿರ್ಮಾಪಕರಾಗಿರುವ ಕಾರಣ ಜೋಹರ್, ಚಾರ್ಮಿ ಕೌರ್ ಹಾಗೂ ಪುರಿ ಜಗನ್ನಾಥ್ ರವರಿಗೆ ಮಾಡಿಕೊಟ್ಟಿದೆ ಎಂಬುದಾಗಿ ತಿಳಿದು ಬಂದಿದೆ. ಇದನ್ನು ತಿಳಿದಿರುವ ತೆಲುಗು ಪ್ರೇಕ್ಷಕರು ಈಗ ಎರಡು ಗೆಲುವಿಗೆ ಇಷ್ಟೊಂದು ಮೆರೆದಿದ್ದಕ್ಕೆ ಹೀಗಾಯಿತು ಎಂಬುದಾಗಿ ಹಾಸ್ಯ ಮಾಡಿ ನಗುತ್ತಿದ್ದಾರೆ. ವಿಜಯ್ ದೇವರಕೊಂಡ ಅವರ ಸೋಲಿಗೆ ಏನು ನಿಜವಾಗಿಯೂ ಕಾರಣವಾಯಿತು ಎಂಬುದನ್ನು ತಪ್ಪದೆ ನಿಮ್ಮ ಅಭಿಪ್ರಾಯಗಳಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.