ಎಲ್ಲರೂ ಕೊಹ್ಲಿ ಬಗ್ಗೆ ಆಲೋಚನೆ ಮಾಡಿ, ರೋಹಿತ್ ಅವರನ್ನು ಮರೆತಿರುವಾಗ ಪಾಕ್ ಕ್ರಿಕೆಟಿಗ ರೋಹಿತ್ ಬಗ್ಗೆ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಈ ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ 5 ವಿಕೆಟ್ಗಳ ಗೆಲುವು ಹಾಗೂ ಹಾಂಕಾಂಗ್ ತಂಡದ ವಿರುದ್ಧ ಭರ್ಜರಿ 40 ರನ್ನುಗಳ ಗೆಲುವನ್ನು ದಾಖಲಿಸಿ ಸೂಪರ್ ಫೋರ್ ಹಂತಕ್ಕೆ ತೇರ್ಗಡೆಯಾಗಿದೆ. ಇದೇ ಟೂರ್ನಮೆಂಟಿನಲ್ಲಿ ವಿರಾಟ್ ಕೊಹ್ಲಿ ರವರು ಕೂಡ ಫಾರ್ಮ್ ಗೆ ಮರಳಿ ಬಂದಿದ್ದಾರೆ ಇದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು ಎಲ್ಲರೂ ಕೂಡ ಖುಷಿಯಾಗಿದ್ದಾರೆ. ಇನ್ನು ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಸತತವಾಗಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದೆ.

ರೋಹಿತ್ ಶರ್ಮಾ ರವರ ನಾಯಕತ್ವದಲ್ಲಿ ಸತತವಾಗಿ ಗೆಲುವಿನ ಪ್ರದರ್ಶನವನ್ನು ಭಾರತೀಯ ಕ್ರಿಕೆಟ್ ತಂಡ ನೀಡುತ್ತಿದ್ದು ಈ ಬಾರಿ ಏಷ್ಯಾ ಕಪ್ ಅನ್ನು ಸುಲಭವಾಗಿ ಗೆಲ್ಲಬಹುದೆಂಬ ನಿರೀಕ್ಷೆಯನ್ನು ಮಾಡಲಾಗಿದೆ. ಆದರೆ ರೋಹಿತ್ ಶರ್ಮಾ ಅವರ ಬ್ಯಾಟಿನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬರುತ್ತಿಲ್ಲ. ಇದೇ ವಿಚಾರದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಕೂಡ ಮಾತನಾಡಿದ್ದಾರೆ. ರೋಹಿತ್ ಶರ್ಮಾ ಅವರ ಕುರಿತಂತೆ ಮಾತನಾಡುತ್ತಾ ಅವರ ಬಾಡಿ ಲ್ಯಾಂಗ್ವೇಜ್ ಸಾಕಷ್ಟು ದುರ್ಬಲ ವಾದಂತೆ ಕಂಡು ಬರುತ್ತಿದೆ ಎಂಬುದಾಗಿ ಮೂಗುಮುರಿದಿದ್ದಾರೆ. ಮೊದಲಿನಿಂದಲೂ ಕೂಡ ಭಾರತೀಯ ಕ್ರಿಕೆಟ್ ತಂಡದ ವಿರುದ್ಧ ಅಸಮಾಧಾನಕರ ಪ್ರತಿಕ್ರಿಯೆಗಳನ್ನೇ ನೀಡುತ್ತಾ ಬಂದಿರುವ ಹಫೀಜ್ ಇಲ್ಲಿ ಕೂಡ ತಂಡದ ನಾಯಕನ ವಿರುದ್ಧ ತಮ್ಮ ಅಸಮಾಧಾನಕರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

hafeez rohit | ಎಲ್ಲರೂ ಕೊಹ್ಲಿ ಬಗ್ಗೆ ಆಲೋಚನೆ ಮಾಡಿ, ರೋಹಿತ್ ಅವರನ್ನು ಮರೆತಿರುವಾಗ ಪಾಕ್ ಕ್ರಿಕೆಟಿಗ ರೋಹಿತ್ ಬಗ್ಗೆ ಹೇಳಿದ್ದೇನು ಗೊತ್ತೇ??
ಎಲ್ಲರೂ ಕೊಹ್ಲಿ ಬಗ್ಗೆ ಆಲೋಚನೆ ಮಾಡಿ, ರೋಹಿತ್ ಅವರನ್ನು ಮರೆತಿರುವಾಗ ಪಾಕ್ ಕ್ರಿಕೆಟಿಗ ರೋಹಿತ್ ಬಗ್ಗೆ ಹೇಳಿದ್ದೇನು ಗೊತ್ತೇ?? 2

ನಾಯಕತ್ವದ ಒತ್ತಡದಲ್ಲಿ ರೋಹಿತ್ ಶರ್ಮ ರವರು ಉತ್ತಮವಾಗಿ ಆಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಚ್ಚು ದಿನಗಳ ಕಾಲ ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಇರಲು ಸಾಧ್ಯವಿಲ್ಲ ಎಂಬುದಾಗಿ ಹಫೀಜ್ ಹೇಳಿದ್ದಾರೆ. ಇಂತಹ ನೂರಾರು ಹಫೀಜ್ ಗಳು ಏನೇ ಹೇಳಲಿ ಆದರೆ ಭಾರತೀಯ ಕ್ರಿಕೆಟ್ ತಂಡ ಇತ್ತೀಚಿನ ದಿನಗಳಲ್ಲಿ ರೋಹಿತ್ ಶರ್ಮ ಅವರ ನಾಯಕತ್ವದಲ್ಲಿ ಅತ್ಯಂತ ಯಶಸ್ವಿ ಪ್ರದರ್ಶನವನ್ನು ನೀಡುತ್ತಿದೆ ಎಂಬುದನ್ನು ಅಲ್ಲ ಗೆಳೆಯಲು ಸಾಧ್ಯವಿಲ್ಲ.

Comments are closed.