News from ಕನ್ನಡಿಗರು

ಮೊದಲ ಬಾರಿಗೆ ಮುರುಘಾ ಶರಣರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಕೊಟ್ಟ ಷಾಕಿಂಗ್ ಹೇಳಿಕೆ ಏನು ಗೊತ್ತೇ??

47

ನಮಸ್ಕಾರ ಸ್ನೇಹಿತರೆ ರಾಜ್ಯದಾದ್ಯಂತ ಇತ್ತೀಚಿನ ದಿನಗಳಲ್ಲಿ ಜೋರಾಗಿ ಓಡಾಡುತ್ತಿರುವ ಸುದ್ದಿ ಎಂದರೆ ಅದು ಚಿತ್ರದುರ್ಗದ ಮುರುಘಾ ಮಠದ ಡಾ ಶ್ರೀ ಶಿವಮೂರ್ತಿ ಶಿವಶರಣ ಸ್ವಾಮೀಜಿಗಳ ವಿಚಾರ. ಕೆಲವರು ಅವರ ಪರವಾಗಿ ಮಾತನಾಡಿದರೆ ಇನ್ನು ಕೆಲವರು ಅವರ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿಷ್ಪಕ್ಷಪಾತವಾಗಿ ನಡೆಯಲಿರುವ ತನಿಖೆಯ ಮುಖಾಂತರವೇ ಅವರು ತಪ್ಪಿತಸ್ಥರು ಅಥವಾ ನಿರ್ದೋಷಿ ಎನ್ನುವುದಾಗಿ ತಿಳಿದು ಬರಬೇಕಾಗಿದೆ. ಸದ್ಯದ ಮಟ್ಟಿಗೆ ಅವರ ವಿರುದ್ಧ ಬಾಲಕಿಯರ ಮೇಲೆ ದೌರ್ಜನ್ಯ ಎಸೆಗಿರುವ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಲಾಗಿದೆ.

ರಾಜದಾದ್ಯಂತ ಶಿವಮೂರ್ತಿ ಶಿವಶರಣರ ವಿರುದ್ಧ ವ್ಯಾಪಕವಾಗಿ ಅಸಮಾಧಾನದ ಹೊಗೆ ಬುಸುಗುಡುತ್ತಿದೆ. ಶಿವಮೂರ್ತಿ ಶರಣರು ಹಾಗೂ ಅವರ ಬೆಂಬಲಿಗರು ಹೇಳುವ ಪ್ರಕಾರ ಮಠದಲ್ಲಿಯೇ ಅವರ ವಿರುದ್ಧ ಸಂಚು ನಡೆದಿದೆ ಎಂಬುದಾಗಿ ಕೇಳಿ ಬರುತ್ತಿದೆ. ರಾಜ್ಯಾದ್ಯಂತ ತನಿಖೆ ಪಾರದರ್ಶಕವಾಗಿ ನಡೆಯಬೇಕು ಎಂಬುದಾಗಿ ಆಗ್ರಹಿಸಿದ್ದಾರೆ. ಏನು ಇತ್ತೀಚಿಗಷ್ಟೇ ಸ್ವಾಮೀಜಿಗಳಿಗೆ ಹೃದಯ ಸಂಬಂಧಿತ ಸಮಸ್ಯೆ ಎದುರಾಗಿದೆ ಎಂಬ ಕಾರಣಕ್ಕಾಗಿ ಜಯದೇವ ಆಸ್ಪತ್ರೆಗೆ ಚಿಕಿತ್ಸೆಯ ಸಲುವಾಗಿ ದಾಖಲಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಇದೇ ವಿಚಾರದ ಕುರಿತಂತೆ ವಿಪಕ್ಷ ನಾಯಕ ಆಗಿರುವ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಮೌನ ಮುರಿದಿದ್ದಾರೆ. ” ಮುರುಘ ಮಠದ ಸ್ವಾಮೀಜಿಗಳ ವಿರುದ್ಧ ವಿದ್ಯಾರ್ಥಿನಿಯರು ನೀಡಿರುವ ದೂರು ಗಂಭೀರ ಸ್ವರೂಪದ್ದಾಗಿದೆ. ಹೀಗಾಗಿ ಪೊಲೀಸರು ಯಾವುದೇ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ತನಿಖೆಯನ್ನು ನಡೆಸಿ ನ್ಯಾಯವನ್ನು ಒದಗಿಸಬೇಕಾಗಿದೆ” ಎಂಬುದಾಗಿ ಸಿದ್ದರಾಮಯ್ಯ ರವರು ಈ ಪ್ರಕರಣದ ಕುರಿತಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.