ಕಿಚ್ಚನಿಗೆ ಈ ಹುಟ್ಟುಹಬ್ಬ ತುಂಬಾ ವಿಶೇಷ: ಈ ಬಾರಿಯ ಕೇಕ್ ಅನ್ನು ತಯಾರಿಸಿದವರು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿನ್ನೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ತಮ್ಮ 49ನೇ ಜನ್ಮದಿನಾಚರಣೆಯನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದಾರೆ. ವಯಸ್ಸು 49 ಆಗಿದ್ದರೂ ಕೂಡ ಕಿಚ್ಚ ಸುದೀಪ್ ರವರು ಇಂದಿಗೂ ಕೂಡ 25ರ ಹರೆಯದ ಯುವಕರಂತೆ ಕಾಣಿಸಿಕೊಳ್ಳುತ್ತಾರೆ. ಇನ್ನೂ ಕಿಚ್ಚ ಸುದೀಪ್ ರವರ ಮನೆ ಮುಂದೆ ನಿನ್ನೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜನ್ಮ ದಿನಾಚರಣೆಯ ಪ್ರಯುಕ್ತ ಅವರಿಗೆ ಶುಭ ಕೋರಲು ಆಗಮಿಸಿದ್ದರು.

ನಾಡಿನ ಮೂಲೆ ಮೂಲೆಯಿಂದಲೂ ಕೂಡ ಅಭಿಮಾನಿಗಳು ಅಭಿನಯ ಚಕ್ರವರ್ತಿಯ ಜನ್ಮದಿನಕ್ಕೆ ಶುಭ ಕೋರಲು ಆಗಮಿಸಿದ್ದರು. ಇನ್ನು ಹಲವಾರು ಸೆಲೆಬ್ರಿಟಿಗಳು ಕೂಡ ಕಿಚ್ಚ ಸುದೀಪ್ ರವರ ಜನ್ಮದಿನಕ್ಕೆ ಶುಭ ಹಾರೈಸಿದ್ದರು. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ರವರ ಬರ್ತಡೇ ಯನ್ನು ವಿಶೇಷವನ್ನಾಗಿಸಲು ಒಬ್ಬ ವಿಶೇಷ ಅತಿಥಿ ಕೇಕ್ ತಯಾರಿಸಿಕೊಂಡು ಬಂದಿದ್ದರು. ಹೌದು ಗೆಳೆಯರೇ ಕರುನಾಡ ಚಕ್ರವರ್ತಿ ಶಿವಣ್ಣ ಅವರ ಪತ್ನಿ ಆಗಿರುವ ಗೀತಕ್ಕ ಕೇಕ್ ತಯಾರಿಸಿಕೊಂಡು ಸುದೀಪ್ ರವರ ಮನೆಗೆ ತಮ್ಮ ಪತಿಯೊಂದಿಗೆ ಆಗಮಿಸಿದ್ದರು.

sudeep geetakka | ಕಿಚ್ಚನಿಗೆ ಈ ಹುಟ್ಟುಹಬ್ಬ ತುಂಬಾ ವಿಶೇಷ: ಈ ಬಾರಿಯ ಕೇಕ್ ಅನ್ನು ತಯಾರಿಸಿದವರು ಯಾರು ಗೊತ್ತೇ??
ಕಿಚ್ಚನಿಗೆ ಈ ಹುಟ್ಟುಹಬ್ಬ ತುಂಬಾ ವಿಶೇಷ: ಈ ಬಾರಿಯ ಕೇಕ್ ಅನ್ನು ತಯಾರಿಸಿದವರು ಯಾರು ಗೊತ್ತೇ?? 2

ಕಿಚ್ಚ ಸುದೀಪ್ ಹಾಗೂ ಶಿವಣ್ಣ ಇಬ್ಬರೂ ಕೂಡ ಇನ್ನಷ್ಟು ಹತ್ತಿರವಾಗಲು ಗೀತಕ್ಕ ಕಾರಣ ಆಗಿದ್ದರು. ಯಾಕೆಂದರೆ ಕಿಚ್ಚ ಸುದೀಪ್ ರವರು ಹಾಗೂ ಗೀತಕ್ಕ ಇಬ್ಬರೂ ಕೂಡ ಶಿವಮೊಗ್ಗದವರಾಗಿದ್ದರು. ತಮ್ಮ ಕೈಯಾರೆ ತಾವೇ ಗೀತಕ್ಕ ಕೇಕ್ ತಯಾರಿಸಿಕೊಂಡು ಬಂದು ಶಿವಣ್ಣನವರೊಂದಿಗೆ ಸುದೀಪ್ ಅವರ ಮನೆಗೆ ಭೇಟಿ ನೀಡಿ ಕೇಕ್ ತಿನ್ನಿಸಿ ಕಿಚ್ಚ ಸುದೀಪ್ ಅವರಿಗೆ ಜನುಮದಿನದ ಶುಭಾಶಯಗಳು ಕೋರಿದರು. ಈ ಸಂದರ್ಭದಲ್ಲಿ ಸುದೀಪ್ ಅವರ ಪೂರ್ಣ ಫ್ಯಾಮಿಲಿ ಕೂಡ ಹಾಜರಿತ್ತು. ನೀವು ಕೂಡ ಕಾಮೆಂಟ್ ನಲ್ಲಿ ಕಿಚ್ಚ ಸುದೀಪ್ ರವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಬಹುದಾಗಿದೆ.

Comments are closed.