ಇದ್ದಕ್ಕಿದ್ದ ಹಾಗೆ ಆಸ್ಪತ್ರೆ ಸೇರಿಕೊಂಡ ಚಾಹಲ್ ಪತ್ನಿ ಧನುಶ್ರೀ: ಯಾಕೆ ಅಂತೇ ಗೊತ್ತೇ?? ಗುಣಮುಖರಾಗಿ ಬೇಗ ಬನ್ನಿ ಎಂದ ಫ್ಯಾನ್ಸ್.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ವಲಯದ ಇಬ್ಬರು ಜೋಡಿಗಳ ಕುರಿತಂತೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಎದ್ದಿದ್ದವು. ಹೌದು ನಾವು ಮಾತನಾಡುತ್ತಿರುವುದು ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ಯಜುವೇಂದ್ರ ಚಹಾಲ್ ಹಾಗೂ ಅವರ ಪತ್ನಿ ಆಗಿರುವ ಧನಶ್ರೀ ಅವರ ಕುರಿತಂತೆ. ಇಬ್ಬರೂ ಕೂಡ ಪ್ರೀತಿಸಿ ಮದುವೆಯಾಗಿದ್ದರು.

ಸೋಶಿಯಲ್ ಮೀಡಿಯಾ ಗಳಲ್ಲಿ ಇವರ ಫೋಟೋ ಹಾಗೂ ವಿಡಿಯೋಗಳನ್ನು ನೋಡುವ ನೆಟ್ಟಿಗರು ಹಾಗೂ ಅಭಿಮಾನಿಗಳು ಮೇಡ್ ಫಾರ್ ಈಚ್ ಅದರ್ ಜೋಡಿಗಳು ಎನ್ನುವ ಹಾಗೆ ಮಾತನಾಡಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ಅವರಿಬ್ಬರೂ ಬೇರೆಯಾಗುತ್ತಿದ್ದಾರೆ ಎಂಬ ಗಾಳಿ ಸುದ್ದಿಗಳು ಹರಡಿದ್ದವು. ಇವುಗಳ ಬಗ್ಗೆ ಇಬ್ಬರೂ ಕೂಡ ಇವು ಸುಳ್ಳು ಸುದ್ದಿಗಳು ಎಂಬುದಾಗಿ ಈ ಗಾಳಿ ಸುದ್ದಿಗಳಿಗೆ ಅಧಿಕೃತವಾಗಿ ತೆರೆ ಎಳೆದಿದ್ದರು. ಈಗ ಧನಶ್ರೀ ಅವರ ಕುರಿತಂತೆ ಮತ್ತೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ದಿಗ್ಗನೆ ಎದ್ದಿದೆ. ಹೌದು ಮಿತ್ರರೇ ಧನಶ್ರೀ ಸಡನ್ನಾಗಿ ಆಸ್ಪತ್ರೆಗೆ ಸೇರಿಕೊಂಡಿದ್ದಾರೆ. ಅಷ್ಟಕ್ಕೂ ಧನಶ್ರೀ ಅವರಿಗೆ ಆಗಿದ್ದಾದರೂ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

dhanashree | ಇದ್ದಕ್ಕಿದ್ದ ಹಾಗೆ ಆಸ್ಪತ್ರೆ ಸೇರಿಕೊಂಡ ಚಾಹಲ್ ಪತ್ನಿ ಧನುಶ್ರೀ: ಯಾಕೆ ಅಂತೇ ಗೊತ್ತೇ?? ಗುಣಮುಖರಾಗಿ ಬೇಗ ಬನ್ನಿ ಎಂದ ಫ್ಯಾನ್ಸ್.
ಇದ್ದಕ್ಕಿದ್ದ ಹಾಗೆ ಆಸ್ಪತ್ರೆ ಸೇರಿಕೊಂಡ ಚಾಹಲ್ ಪತ್ನಿ ಧನುಶ್ರೀ: ಯಾಕೆ ಅಂತೇ ಗೊತ್ತೇ?? ಗುಣಮುಖರಾಗಿ ಬೇಗ ಬನ್ನಿ ಎಂದ ಫ್ಯಾನ್ಸ್. 2

ಧನಶ್ರೀ ಅವರು ತಮ್ಮ ನೃತ್ಯಕ್ಕಾಗಿ ಸಾಕಷ್ಟು ಫೇಮಸ್ ಆಗಿದ್ದಾರೆ. ಹೀಗೆ ನೃತ್ಯಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಜಾರಿ ಬಿದ್ದು ಮೊಣಕಾಲು ಇಂಜುರಿ ಮಾಡಿಕೊಂಡಿದ್ದರು. ಹೀಗಾಗಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಧನಶ್ರೀ ಅವರು ಈಗಾಗಲೇ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯನ್ನು ಮುಗಿಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಕೆಳಗೆ ಚಹಾಲ್ ಕೂಡ ಬೇಗ ಗುಣಮುಖರಾಗಿ ಎನ್ನುವ ಸಂದೇಶವನ್ನು ಕೂಡ ರವಾನಿಸಿದ್ದಾರೆ. ಅಭಿಮಾನಿಗಳು ಕೂಡ ಬೇಗ ಗುಣಮುಖರಾಗಿ ಬನ್ನಿ ಎಂಬುದಾಗಿ ಪ್ರಾರ್ಥಿಸಿದ್ದಾರೆ.

Comments are closed.