Cricket News: ಟಿ 20 ವಿಶ್ವಕಪ್ ಸೋಲಿನ ನಂತರ ಬುದ್ದಿ ಕಲಿಯಿತೇ ಭಾರತ? ಶ್ರೀಲಂಕಾ ಸರಣಿಗೆ ಆಯ್ಕೆಯಾದ ತಂಡ ಹೇಗಿದೆ ಗೊತ್ತೇ?

Cricket News: ಸದ್ಯ ಬಾಂಗ್ಲಾದೇಶದ (India vs Bangladesh) ಪ್ರವಾಸದಲ್ಲಿರುವ ಟೀಮ್ ಇಂಡಿಯಾ (Team India) ಬಾಂಗ್ಲಾ ಪ್ರವಾಸದ ನಂತರ ತನ್ನ ತವರಿನಲ್ಲೇ ಇದೇ ಜನವರಿ ಆರಂಭದಲ್ಲಿ ಶ್ರೀಲಂಕದ (India vs Srilanka) ವಿರುದ್ಧ ಏಕದಿನ ಮತ್ತು ಟೆಸ್ಟ್ ಸರಣಿಗಳನ್ನು ಆಡಲಿದೆ. ಈ ಪಂದ್ಯಗಳಿಗೆ ಸಾಕಷ್ಟು ನಿರೀಕ್ಷೆ ಇದ್ದು, ಇದಕ್ಕಾಗಿ ಬಿಸಿಸಿಐ ತಂಡದ ರಚನೆ ಮಾಡುತ್ತಿದೆ. ವಿಶ್ವಕಪ್ (T20 World Cup) ಸೋಲಿನ ನಂತರ ತಕ್ಕ ಪಾಠ ಕಲಿತ್ತಿರುವ ಮಂಡಳಿಯು ಇದೀಗ ಯಾವ ಆಟಗಾರರನ್ನು ಕಣಕ್ಕೆ ಇಳಿಸಬೇಕು ಎನ್ನುವ ಪಕ್ಕ ಲೆಕ್ಕಾಚಾರದಲ್ಲಿದೆ ಎಂದೇ ಹೇಳಲಾಗುತ್ತಿದೆ. ಹೀಗಾಗಿಯೇ ಬಿಸಿಸಿಐ (BCCI) ತನ್ನ ತಪ್ಪಿನ ಅರಿವಾಗಿ ತಕ್ಕ ಬುದ್ದಿ ಕಲಿತು ಹೊಸ ಬಗೆಯ ತಂಡವನ್ನು ಶ್ರೀಲಂಕಾ ವಿರುದ್ಧ ಪಂದ್ಯಕ್ಕಾಗಿ ರಚಿಸುತ್ತಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಈ ಹೊಸ ತಂಡದಲ್ಲಿ ಯಾವೆಲ್ಲ ಆಟಗಾರರು ಸ್ಥಾನ ಪಡೆದಿದ್ದಾರೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

ಸದ್ಯ ಬಾಂಗ್ಲಾದೇಶದ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಬಾಂಗ್ಲಾದ ವಿರುದ್ಧ ಅಲ್ಲಿ ಟೆಸ್ಟ್ ಮ್ಯಾಚ್ ಆಡುತ್ತಿದೆ. ಏಕದಿನ ಸರಣಿಯಲ್ಲಿ ಸೋತ ನಂತರ ಇದೀಗ ಭಾರತ ಟೆಸ್ಟ್ ಮ್ಯಾಚ್ ಅಲ್ಲಾದರೂ ಉತ್ತಮ ಪ್ರದರ್ಶನ ತೋರಿ ಪಂದ್ಯವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿದೆ. ಇನ್ನು ಈ ಪ್ರವಾಸ ಮುಗಿದ ಬಳಿಕ ಭಾರತ ತನ್ನ ತವರಿನಲ್ಲೇ ಶ್ರೀಲಂಕದ ವಿರುದ್ಧ ಜನವರಿ ಮೂರರಿಂದ ಟೆಸ್ಟ್ ಮ್ಯಾಚ್ ಮತ್ತು ಏಕದಿನ ಪಂದ್ಯಗಳನ್ನು ಆಡಲಿದೆ. ಇದಕ್ಕಾಗಿ ಈಗಾಗಲೇ ಆಯ್ಕೆ ಸಮಿತಿ ತಂಡವನ್ನು ಅಂತಿಮಗೊಳಿಸುವ ಹಂತದಲ್ಲಿದೆ ಎಂದು ವರದಿಯಾಗಿದೆ. ಮತ್ತು ಈ ತಂಡದಲ್ಲಿ ತಂಡದ ನಾಯಕ ರೋಹಿತ್ ಶರ್ಮ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದ್ದು, ಅವರನ್ನು ಈ ತಂಡದಿಂದ ಕೈ ಬಿಡಲಾಗುವುದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Cricket News: ತನ್ನ ದೇಶದಲ್ಲಿ ಆಡಿ ಎಂದ ಐರ್ಲೆಂಡ್ ದೇಶಕ್ಕೆ, ಗಟ್ಟಿ ನಿರ್ಧಾರ ಮಾಡಿ ಉತ್ತರಕೊಟ್ಟ ಸಂಜು ಸ್ಯಾಮ್ಸನ್. ಉತ್ತಮ ನಿರ್ಧಾರ, ಕ್ರಿಕೆಟಿಗೆ ನ್ಯಾಯ ಎಂದ ಫ್ಯಾನ್ಸ್.

cricket news ind vs sl squad | Cricket News: ಟಿ 20 ವಿಶ್ವಕಪ್ ಸೋಲಿನ ನಂತರ ಬುದ್ದಿ ಕಲಿಯಿತೇ ಭಾರತ? ಶ್ರೀಲಂಕಾ ಸರಣಿಗೆ ಆಯ್ಕೆಯಾದ ತಂಡ ಹೇಗಿದೆ ಗೊತ್ತೇ?
Cricket News: ಟಿ 20 ವಿಶ್ವಕಪ್ ಸೋಲಿನ ನಂತರ ಬುದ್ದಿ ಕಲಿಯಿತೇ ಭಾರತ? ಶ್ರೀಲಂಕಾ ಸರಣಿಗೆ ಆಯ್ಕೆಯಾದ ತಂಡ ಹೇಗಿದೆ ಗೊತ್ತೇ? 2

ಇನ್ನು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಡಲಿರುವ ಭಾರತದ ಸಂಭಾವ್ಯ ಆಟಗಾರರ ಪಟ್ಟಿಯನ್ನು ನೋಡುವುದಾದರೆ ಇಶಾನ್ ಕಿಶನ್ (Ishan Kishan) ಓಪನರ್ ಆಗಿ ತಂಡದಲ್ಲಿ ಇರಲಿದ್ದಾರೆ. ರಿಷಬ್ ಪಂತ್ (Rishabh Pant) ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದು ಸಂಜು ಸ್ಯಾಮ್ಸನ್ (Sanju Samson) ಕೂಡ ಸ್ಥಾನ ಪಡೆಯಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಜೊತೆಗೆ ಶ್ರೇಯಸ್ ಅಯ್ಯರ್ (Shreyas Iyer) ಕೂಡ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆಲ್ರೌಂಡರ್ ದೀಪಕ್ ಹೂಡ (Deepak Hooda) ಮತ್ತು ವಾಷಿಂಗ್ಟನ್ ಸುಂದರ್ (Washington Sundar) ಕೂಡ ತಂಡದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿದ್ದಾರೆ. ಹರ್ಷಲ್ ಪಟೇಲ್ (Harshal Patel) ಅವರ ಹೆಸರು ಕೂಡ ತಂಡದಲ್ಲಿ ಇರಲಿದೆ ಎಂದು ಕೇಳಿ ಬಂದಿದೆ. ಇನ್ನೂ ಬೌಲರ್ ಗಳ ಕಡೆಗೆ ನೋಡಿದರೆ ಭುವನೇಶ್ವರ್ ಕುಮಾರ್ (Bhuvneshwar Kumar) ವೇಗಿಗಳ ಸ್ಥಾನದಲ್ಲಿ ಆಯ್ಕೆಯಾಗಲಿದ್ದಾರೆ. ಅರ್ಶ್ ದೀಪ್ ಸಿಂಗ್ (Arshdeep Singh), ಉಮ್ರಾನ್ ಮಲಿಕ್ (Umran Malik) ಹಾಗೂ ಮೊಹಮ್ಮದ್ ಸಿರಾಜ್ (Mohammad Siraj) ಆಯ್ಕೆ ಆಗಬಹುದು. ಸ್ಪಿನ್ ವಿಭಾಗದಲ್ಲಿ ಯುಜ್ವೇಂದ್ರ ಚಹಲ್ (Yuzvendra Chahal) ಇರಲಿದ್ದಾರೆ ಎಂದು ತಿಳಿದುಬಂದಿದೆ. ಕುಲ್ದೀಪ್ ಯಾದವ್ (Kuldeep Yadav) ಕೂಡ ಸ್ಥಾನ ಪಡೆಯಲಿದ್ದಾರೆ.

ಶ್ರೀಲಂಕದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಟೆಸ್ಟ್ ಮ್ಯಾಚ್ ಅನ್ನು ತವರಿನಲ್ಲೇ ಟೀಮ್ ಇಂಡಿಯಾ ಆಡಲಿದೆ. ಮೊದಲ ಟಿ ಟ್ವೆಂಟಿ ಪಂದ್ಯ ಜನವರಿ ಮೂರರಂದು(January 3) ನಡೆಯಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ಘೋಷಿಸಿ ತಂಡದಿಂದ ಕೈಬಿಟ್ಟರೆ ಈ ಪಂದ್ಯದ ನಾಯಕನ ಸ್ಥಾನವನ್ನು ಹಾರ್ದಿಕ ಪಾಂಡ್ಯ ಅವರಿಗೆ ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಕೆ ಎಲ್ ರಾಹುಲ್ ಗೆ ಕೂಡ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಾಗಿದೆ. ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುತ್ತಿರುವುದರಿಂದ ಅವರ ಸ್ಥಾನದಲ್ಲಿ ಮೂರನೇ ಮಾಧ್ಯಮ ಕ್ರಮದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕೆ ಇಳಿಯಲಿದ್ದಾರೆ. ಹಾರ್ದಿಕ್ ಪಾಂಡ್ಯ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಈ ಹೊಸ ತಂಡದಲ್ಲಿ ಯಾರೆಲ್ಲಾ ಆಟಗಾರರು ಇರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಅಂದಹಾಗೆ ಬಿಸಿಸಿಐ ಅಂತಿಮವಾಗಿ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಬೇಕಿದೆ. ಇದನ್ನು ಓದಿ.. Kannada Astrology: ಮನೆಯಲ್ಲಿ ಅಪ್ಪಿ ತಪ್ಪಿಯೂ ಕೂಡ ಕನ್ನಡಿಯನ್ನು ಈ ದಿಕ್ಕಿನಲ್ಲಿ ಇಡಬೇಡಿ, ಹಣ ನಿಲ್ಲುವುದಿಲ್ಲ, ಕಷ್ಟ ಅನುಭವಿಸ್ತೀರಾ. ಯಾವ ದಿಕ್ಕು ಗೊತ್ತೇ?

Comments are closed.