Cricket News: ಸೋತ ಭಾರತ ಕ್ರಿಕೆಟ್ ತಂಡಕ್ಕೆ ಖಡಕ್ ಪ್ರಶ್ನೆ ಕೇಳಿದ ಗವಾಸ್ಕರ್: ಯಾರೊಬ್ಬರ ಬಳಿಯೂ ಉತ್ತರವಿಲ್ಲ ಖಡಕ್ ಪ್ರಶ್ನೆ ಏನು ಗೊತ್ತೇ??

Cricket News: ಭಾರತ ಕ್ರಿಕೆಟ್ ತಂಡವು (Team India) ಈ ಬಾರಿಯ ವಿಶ್ವಕಪ್ ಟಿ20 (T20 World Cup 2022) ಪಂದ್ಯದಲ್ಲಿ ಸೆಮಿ ಫೈನಲ್ ನಲ್ಲಿ ರೋಚಕ ಗೆಲುವು ದಾಖಲಿಸಿ ಫೈನಲ್ ನಲ್ಲಿ ಪಾಕಿಸ್ತಾನದ ಎದುರಾಳಿಯಾಗಿ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಳ್ಳಲಿದೆ ಎಂಬ ನಿರೀಕ್ಷೆ ಸೃಷ್ಟಿಸಿತ್ತು. ಆದರೆ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಹೀನಾಯವಾಗಿ ಸೋಲನ್ನಪ್ಪಿದೆ. ಈ ಮೂಲಕ ಟ್ರೋಫಿ ಗೆಲ್ಲುವ ಕನಸು ಸುಳ್ಳಾಗಿದೆ. ಭಾರತ ತಂಡದ ಇಂತಹ ಕಳಪೆ ಪ್ರದರ್ಶನದ ಬಗ್ಗೆ ಸಾಕಷ್ಟು ಟಿಕೆಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ಭಾರತದ ಅದ್ಭುತ ಬ್ಯಾಟ್ಸ್ಮನ್, ಮಾಜಿ ನಾಯಕ ಸುನಿಲ್ ಗವಾಸ್ಕರ್ (Sunil Gavaskar) ರವರು ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ. ತಂಡದ ಆಟಗಾರರ ಕಳಪೆ ಪ್ರದರ್ಶನ ಮತ್ತು ಅದಕ್ಕಾಗಿ ಅವರು ಹೇಳುತ್ತಿರುವ ನೆಪಗಳ ಕುರಿತು ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಸುನಿಲ್ ಗವಾಸ್ಕರ್ ಕೆಲವು ಸಲಹೆಗಳನ್ನು ಸೂಚಿಸಿದ್ದಾರೆ. ವರ್ಕ್ ಲೋಡ್ ಮ್ಯಾನೇಜ್ಮೆಂಟ್ ಬಿಟ್ಟು ಭಾರತ ಕ್ರಿಕೆಟ್ ತಂಡವು ಮುಂದೆ ಹೋಗಬೇಕಿದೆ. ಇದನ್ನೆಲ್ಲಾ ತಲೆಯಿಂದ ತೆಗೆದು ಹಾಕಿ ಸರಿಯಾಗಿ ಆಡಬೇಕಿದೆ. ಮೂರು ಮೂರು ಮಾದರಿಯ ಕ್ರಿಕೆಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾಗೆ ಆಡಲು ಕಷ್ಟವಿದೆ ಎಂದು ಹೇಳುತ್ತಿದ್ದಾರೆ. ಆದರೆ ಅವರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗಳಲ್ಲಿ ಆಡುವುದಕ್ಕೆ ಯಾವ ಕಷ್ಟವೂ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇವೆಲ್ಲವೂ ಕೇವಲ ತಂಡದ ಆಟಗಾರರ ನೆಪಗಳು ಅಷ್ಟೇ ಎಂದು ಅವರು ಕಿಡಿ ಕಾರಿದ್ದಾರೆ. ಸೋತಾಗಲೆಲ್ಲ ಸುಮ್ಮನೆ ವರ್ಕ್ ಲೋಡ್ ಎನ್ನುವ ನೆಪಗಳನ್ನು ಹೇಳುವುದನ್ನು ಟೀಮ್ ಇಂಡಿಯ ಬಿಡಬೇಕಿದೆ ಎಂದಿದ್ದಾರೆ. ಇದನ್ನು ಓದಿ.. ಸಾಕಷ್ಟು ಬದಲಾವಣೆ ಮಾಡಿ, ಕೊಹ್ಲಿ ನಾಯಕತ್ವ ಕಿತ್ತುಕೊಂಡು, ಗೆದ್ದೇ ಬಿಡುತ್ತೇವೆ ಎನ್ನುವಂತಿದ್ದ ದ್ರಾವಿಡ್, ಸೋಲಿಗೆ ಕೊಟ್ಟ ಕಾರಣ ಏನು ಗೊತ್ತೇ??

cricket news sunil gavaskar rahul dravid rohit sharma | Cricket News: ಸೋತ ಭಾರತ ಕ್ರಿಕೆಟ್ ತಂಡಕ್ಕೆ ಖಡಕ್ ಪ್ರಶ್ನೆ ಕೇಳಿದ ಗವಾಸ್ಕರ್: ಯಾರೊಬ್ಬರ ಬಳಿಯೂ ಉತ್ತರವಿಲ್ಲ ಖಡಕ್ ಪ್ರಶ್ನೆ ಏನು ಗೊತ್ತೇ??
Cricket News: ಸೋತ ಭಾರತ ಕ್ರಿಕೆಟ್ ತಂಡಕ್ಕೆ ಖಡಕ್ ಪ್ರಶ್ನೆ ಕೇಳಿದ ಗವಾಸ್ಕರ್: ಯಾರೊಬ್ಬರ ಬಳಿಯೂ ಉತ್ತರವಿಲ್ಲ ಖಡಕ್ ಪ್ರಶ್ನೆ ಏನು ಗೊತ್ತೇ?? 2

ಈಗಾಗಲೇ ತಂಡವು ಸೋತಿದೆ, ಅಂದಮೇಲೆ ಗೆಲ್ಲುವುದಕ್ಕಾಗಿ ನಾವು ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಬದಲಾವಣೆಗಳು ಕಾಣಿಸಲಿ ಎಂದಿದ್ದಾರೆ. ತಂಡದ ಆಟಗಾರರು ಸದಾ ವರ್ಕ್ ಲೋಡ್ ಎಂದು ಹೇಳುತ್ತಿರುತ್ತಾರೆ. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡುವಾಗ ಮಾತ್ರ, ಇಡೀ ಋತುವಿನಲ್ಲಿ ಆಡುವಾಗ ಅವರಿಗೆ ವರ್ಕ್ ಲೋಡ್ ಅನಿಸುವುದಿಲ್ಲವೇ? ತಂಡಕೊಸ್ಕರ ದೇಶಕ್ಕೋಸ್ಕರ ಆಡುವಾಗ ಮಾತ್ರ ಅವರಿಗೆ ವರ್ಕ್ ಲೋಡ್ ನೆನಪಾಗುತ್ತದೆ ಎಂದು ಕೋಪಗೊಂಡಿದ್ದಾರೆ. ಇದರ ಜೊತೆಗೆ ಪಂದ್ಯದಲ್ಲಿ ಸೋತ ನಂತರ ಆಟಗಾರರನ್ನು ಅತಿಯಾಗಿ ಮುದ್ದಿಸುವುದನ್ನು ಬಿಟ್ಟು ಗೆಲುವಿನ ಕಡೆಗೆ ಗಮನ ಹರಿಸಲಿ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನು ಓದಿ.. ಧೃವಸರ್ಜಾ ಮಗಳನ್ನ ನೋಡಲು ಮನೆಗೆ ಬಂದ ನಟ ದರ್ಶನ್. ಮಗುವಿಗೆ ಡಿ ಬಾಸ್ ಕೊಟ್ಟ ಉಡುಗೊರೆ ಏನು ಗೊತ್ತೇ??

Comments are closed.