Cricket News: ಕ್ರಿಕೆಟ್ ತಂಡವನ್ನು ಆಯ್ಕೆ ಮಾಡುವ ಆಯ್ಕೆ ಸಮಿತಿಗೆ ಕನ್ನಡಿಗನೇ ಅಧ್ಯಕ್ಷ ಫಿಕ್ಸ್: ದ್ರಾವಿಡ್, ರೋಹಿತ್ ಗೆ ಬಿಗ್ ಶಾಕ್. ಬರುತ್ತಿರುವ ಖಡಕ್ ವ್ಯಕ್ತಿ ಯಾರು ಗೊತ್ತೇ?
Cricket News: ಕಳೆದ ಏಷ್ಯಾ ಕಪ್ (Asiacup) ನಿಂದಲೂ ಟೀಮ್ ಇಂಡಿಯಾ (Team India) ನೀರಸ ಪ್ರದರ್ಶನವನ್ನು ತೋರುತ್ತಿದೆ. ಅಂದುಕೊಂಡ ಮಟ್ಟಿಗೆ ತಂಡ ಯಶಸ್ವಿಯಾಗಿ ಆಡುತ್ತಿಲ್ಲ. ನಿರಂತರವಾಗಿ ಹೆಚ್ಚು ಕಡಿಮೆ ಎಲ್ಲಾ ಪಂದ್ಯಗಳಲ್ಲಿಯೂ ಸೋಲನ್ನು ಕಾಣುತ್ತಿದೆ. ಗೆದ್ದರೂ ಕೂಡ ಅಂತಹ ಹೇಳಿಕೊಳ್ಳುವ ಮಟ್ಟಕ್ಕೆ ತಂಡ ಆಡುತ್ತಿಲ್ಲ. ಈ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಸಹ ಸಾಕಷ್ಟು ನಿರಾಶರಾಗಿದ್ದಾರೆ. ಮತ್ತು ಟೀಮ್ ಇಂಡಿಯಾದ ಕಳಪೆ ಪ್ರದರ್ಶನದ ಬಗ್ಗೆ ಟೀಕಿಸುತ್ತಿದ್ದರು. ವಿಶ್ವಕಪ್ ನಲ್ಲೂ (T20 World Cup) ಕೂಡ ಭಾರತ ಸೆಮಿ ಫೈನಲ್ ವರೆಗೂ ಹೇಗೋ ತಲುಪಿ ನಂತರ ಅಲ್ಲಿ ಹೀನಾಯವಾಗಿ ಸೋಲನ್ನು ಕಂಡಿತ್ತು. ಇದರ ಮೊದಲ ತಲೆದಂಡವಾಗಿ ಬಿಸಿಸಿಐ ಟೀಮ್ ಇಂಡಿಯಾದ ಆಯ್ಕೆ ಸಮಿತಿಯನ್ನು ಸಂಪೂರ್ಣವಾಗಿ ವಜಗೊಳಿಸಿತ್ತು. ಇದರ ಬೆನ್ನಲ್ಲೇ ಹೊಸ ಆಯ್ಕೆ ಸಮಿತಿ ಸದಸ್ಯರಿಗಾಗಿ ಅರ್ಜಿಯನ್ನು ಆಹ್ವಾನಿಸಿತ್ತು. ಇದೀಗ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕನ್ನಡಿಗನೇ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಟಿ-20 ಬಳಿಕ ನ್ಯೂಜಿಲೆಂಡ್ (India vs New Zealand) ಪ್ರವಾಸದ ಸೀಮಿತ ಓವರ್ ಗಳ ಪಂದ್ಯದಲ್ಲಿಯೂ ಕೂಡ ಭಾರತ ಅದೇ ಹಳೆಯ ಚಾಳಿ ಮುಂದುವರಿಸಿತ್ತು. ನಂತರ ಬಾಂಗ್ಲಾದೇಶದ (India vs Bangladesh) ವಿರುದ್ಧದ ಏಕದಿನ ಸರಣಿಯಲ್ಲಿಯೂ ಕೂಡ ಮೊದಲ ಎರಡು ಪಂದ್ಯಗಳನ್ನು ಸೋಲುವ ಮೂಲಕ ಸರಣಿಯನ್ನು ಕಳೆದುಕೊಂಡಿತ್ತು. ಬಿಸಿಸಿಐ (BCCI) ಸತತವಾಗಿ ಸೋಲನ್ನು ಕಾಣುತ್ತಿರುವ ಮತ್ತು ಕಳಪೆ ಪ್ರದರ್ಶನ ತೋರುತ್ತಿರುವ ಟೀಮ್ ಇಂಡಿಯಾಗೆ ಬಿಸಿ ಮುಟ್ಟಿಸುವುದಕ್ಕಾಗಿ ಈ ಹಿಂದೆಯೇ ಬಿಸಿಸಿಐ ತಂಡದ ಆಯ್ಕೆ ಸಮಿತಿಯನ್ನು ವಜಗೂಡಿಸಿತ್ತು. ಹಾಗೆ ಹೊಸ ಸದಸ್ಯರಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಾಗಿ ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದು, ಇವರಲ್ಲಿ ಹಿರಿಯ ಕ್ರಿಕೆಟಿಗ ಮತ್ತು ಕನ್ನಡಿಗರಾದ ವೆಂಕಟೇಶ್ ಪ್ರಸಾದ್ (Venkatesh Prasad) ಅವರು ಮುಂಚೂಣಿಯಲ್ಲಿದ್ದಾರೆ. ಬಹುತೇಕ ಅವರೇ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. ಇದನ್ನು ಓದಿ..Cricket News: ಅಬ್ಬಾ ಟೀಮ್ ಇಂಡಿಯಾ ಕಷ್ಟ ಕೊನೆಗೂ ಮುಗಿಯಿತು: ಖಡಕ್ ಆಟಗಾರ ತಂಡಕ್ಕೆ ಎಂಟ್ರಿ. ಇನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾರು ಗೊತ್ತೆ?
ಈ ಹಿಂದೆ ವೆಂಕಟೇಶ್ ಪ್ರಸಾದ್ ಅವರು ತಂಡದ ನಾಯಕ ರೋಹಿತ್ ಶರ್ಮ (Rohit Sharma) ಮತ್ತು ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಆಟದ ಬಗ್ಗೆ ಕಿಡಿಕಾರಿದ್ದರು. ತಂಡದ ಸೋಲಿಗೆ ಬಹುತೇಕ ಅವರೇ ಕಾರಣರೆಂದು ಆರೋಪಿಸಿದ್ದರು. ಇದೀಗ ಒಂದು ವೇಳೆ ಆಯ್ಕೆ ಸಮಿತಿಗೆ ಅವರೇ ಆರಿಸಿ ಬಂದರೆ ತಂಡದಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ ರಾಹುಲ್ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮ ಅವರಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ. 2022ರ ಟಿ-20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ (India vs England) ವಿರುದ್ಧ 10 ವಿಕೆಟ್ ಸೋಲನ್ನು ಕಂಡ ನಂತರ ಬಿಸಿಸಿಐ ಇಡೀ ಆಯ್ಕೆ ಸಮಿತಿಯನ್ನು ರದ್ದುಗೊಳಿಸಿತು. ಈ ತಿಂಗಳ ಅಂತ್ಯದ ವೇಳೆಗೆ ಹೊಸ ಸದಸ್ಯರನ್ನು ಆಯ್ಕೆ ಸಮಿತಿಗೆ ನೇಮಿಸಿಕೊಳ್ಳುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಕನ್ನಡಿಗ ಮತ್ತು ಹಿರಿಯ ಕ್ರಿಕೆಟ್ ಆಟಗಾರರಾದ ವೆಂಕಟೇಶ್ ಪ್ರಸಾದ್ ಮುಂಚೂಣಿಯಲ್ಲಿದ್ದು, ಅವರೇ ಆರಿಸಿ ಬರುವ ಸಾಧ್ಯತೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ಇದನ್ನು ಓದಿ.. ಇದನ್ನು ಓದಿ.. Cricket News: ಮೂರನೇ ಪಂದ್ಯಕ್ಕೂ ಮುನ್ನ ಭಾರತ ತಂಡ ಸೇರಿಕೊಂಡ ಖಡಕ್ ಆಟಗಾರ, ಈತ ಬಂದ ಮೇಲೆ ಸೋಲಿಸಲಿ ನೋಡೋಣ. ಯಾರು ಗೊತ್ತೆ?
Comments are closed.