ಒಬ್ಬರಿಗೆ ಒಂದೇ ಹುದ್ದೆ ನಿಯಮದ ಅನ್ವಯ ರಾಜೀನಾಮೆ ನೀಡುವ ಪ್ರಶ್ನೆಗೆ ಬಿಎಸ್ವೈಗೆ ಟಾಂಗ್ ನೀಡಿದ ಸಿಟಿ ರವಿ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಶಿಸ್ತಿನ ಪಕ್ಷ ಎಂದು ಹೆಸರು ಪಡೆದು ಕೊಂಡಿರುವ ಬಿಜೆಪಿ ಪಕ್ಷದಲ್ಲಿ ಹಲವಾರು ನಿಯಮಗಳನ್ನು ಪಾಲಿಸಿಕೊಂಡು ನಾಯಕರು ರಾಜಕೀಯ ನಡೆಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿಯಲ್ಲಿ ದೆಹಲಿಯಿಂದ ಹಿಡಿದು ದೇಶದ ಮೂಲೆ ಮೂಲೆಗಳ ವರೆಗೂ ಪಕ್ಷದಲ್ಲಿ ಸೇವೆ ಸಲ್ಲಿಸುವ ಕಾರ್ಯಕರ್ತರಿಂದ ಹಿಡಿದು ರಾಜಕೀಯ ನಾಯಕರ ವರೆಗೂ ಒಂದೇ ನಿಯಮಗಳು ಅನ್ವಯವಾಗುತ್ತವೆ. ಅದರಲ್ಲಿಯೂ ಪ್ರಮುಖವಾಗಿ ಎಲ್ಲರಿಗೂ ಪಕ್ಷದಲ್ಲಿ ಹುದ್ದೆ ಸಿಗಬೇಕು ಎಂಬ ನಿಯಮದ ಅನ್ವಯ ಬಿಜೆಪಿ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮವಿದೆ.

ಈ ನಿಯಮವನ್ನು ಅಮಿತ್ ಶಾ, ನರೇಂದ್ರ ಮೋದಿ ಸೇರಿದಂತೆ ಎಲ್ಲಾ ಬಿಜೆಪಿ ಪಕ್ಷದ ಅಗ್ರಜ ನಾಯಕರು ಪಾಲಿಸಲೇ ಬೇಕಾಗಿದೆ. ಹೀಗಿರುವಾಗ ಇಷ್ಟು ದಿವಸ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಸಿಟಿ ರವಿ ರವರು ಇತ್ತೀಚೆಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಸಿಟಿ ರವಿ ರವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು.

ಇದರ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ಸಿಟಿ ರವಿ ರವರು ಪ್ರತಿಕ್ರಿಯಿಸಿ, ನಮ್ಮ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬುವ ಅಲಿಖಿತ ನಿಯಮವಿದೆ. ಆದರೆ ಅದರಂತೆಯೇ 75 ವರ್ಷ ದಾಟಿದ ಎಲ್ಲರೂ ಕಡ್ಡಾಯ ನಿವೃತ್ತಿ ಪಡೆಯಬೇಕು ಎಂಬ ನಿಯಮ ಕೂಡ ಇದೆ. ಆದರೆ ಈ ರೀತಿಯ ಅಲಿಖಿತ ನಿಯಮವನ್ನು ವರಿಷ್ಠರೇ ಬದಲಾವಣೆ ಮಾಡಿದ್ದಾರೆ, ಅಲಿಖಿತ ನಿಯಮಗಳನ್ನು ಬದಲಾಯಿಸಿದ್ದು, ಪಕ್ಷದ ವರಿಷ್ಠ ಮಂಡಳಿಯ ನಿರ್ಧಾರ. ಆದರೆ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಹಾಗೂ ವ್ಯಕ್ತಿಗತ ಆಯ್ಕೆಯಂತೆ ನನಗೆ ಸಂಘಟನೆಯೇ ಮುಖ್ಯ ಎಂದು ಪ್ರತಿಕ್ರಿಯೆ ನೀಡುವ ಮೂಲಕ ಸಿಎಂ ಯಡಿಯೂರಪ್ಪನವರು ಪಕ್ಷದ ನಿಯಮವನ್ನು ಪಾಲನೆ ಮಾಡಿಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿ ರಾಜೀನಾಮೆ ನೀಡುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಪ್ರಶ್ನೆ ಹುಟ್ಟುಹಾಕಿದ್ದಾರೆ.

Comments are closed.