ಮಮತಾಗೆ ಬಿಗ್ ಶಾಕ್ ನೀಡಿದ ಬಿಜೆಪಿ ! ವಿಧಾನಸಭಾ ಚುನಾವಣೆಯಲ್ಲಿ ದೀದಿ ನೆಲಕಚ್ಚುವುದು ಖಚಿತ !

ನಮಸ್ಕಾರ ಸ್ನೇಹಿತರೇ, ಹಲವಾರು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ತನ್ನ ಅಸ್ತಿತ್ವ ಪಡೆದುಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದ ಬಿಜೆಪಿ ಪಕ್ಷವು ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ರವರ ಜೋಡಿ ಮೋಡಿ ಮಾಡಿ ಟಿಎಂಸಿ ಪಕ್ಷದ ಭದ್ರಕೋಟೆ ಎನಿಸಿಕೊಂಡಿದ್ದ ಪಶ್ಚಿಮ ಬಂಗಾಳದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ 16 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಎಷ್ಟರಮಟ್ಟಿಗೆ ತಯಾರಿ ಆರಂಭವಾಗಿದೆ ಎಂಬುದನ್ನು ಸಾಬೀತು ಮಾಡಿತು. ಸೋತ ಕ್ಷೇತ್ರಗಳಲ್ಲಿಯೂ ಕೂಡ ಬಿಜೆಪಿ ಪಕ್ಷ ಗಣನೀಯ ಪ್ರಮಾಣದಲ್ಲಿ ಮತಗಳನ್ನು ಪಡೆದುಕೊಂಡಿದ್ದ ಕಾರಣ ಈ ಬಾರಿ ಬಿಜೆಪಿ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಏರುವ ಎಲ್ಲಾ ಸಾಧ್ಯತೆಗಳು ಇವೆ ಎಂಬುದನ್ನು ತೋರಿಸಿಕೊಟ್ಟರು.

ಆದರೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷಕ್ಕೆ ಬಲವಾದ ನಾಯಕರಿಲ್ಲದ ಕಾರಣ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದು ದಕ್ಕಿಸಿಕೊಳ್ಳುವುದು ಕಷ್ಟ ಎಂಬುದು ಬಿಜೆಪಿ ಪಕ್ಷಕ್ಕೆ ಚೆನ್ನಾಗಿ ತಿಳಿದಿದೆ. ಇನ್ನು ಅಷ್ಟೇ ಅಲ್ಲದೇ ಇದೇ ಮೊಟ್ಟಮೊದಲ ಬಾರಿಗೆ ಅಧಿಕಾರಕ್ಕೆ ಏರುವ ಸಾಧ್ಯತೆ ಇರುವ ಚುನಾವಣೆಯಲ್ಲಿ ಪ್ರಮುಖ ನಾಯಕನು ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಉಸ್ತುವಾರಿ ವಹಿಸಿಕೊಳ್ಳುವುದು ಬಹಳ ಮುಖ್ಯ ಎನಿಸಿದೆ.‌ ಈ ಉಸ್ತುವಾರಿ ನಾಯಕನಿಗೆ ಒಂದು ಕಡೆ ಜನರ ಮತ ಗಳಿಸುವುದು ಮತ್ತೊಂದೆಡೆ ಯಾವ ಪ್ರಭಾವಿ ವ್ಯಕ್ತಿಗಳನ್ನು ಪಕ್ಷಕ್ಕೆ ಕರೆತಂದು ಮುಖ್ಯಮಂತ್ರಿ ಸ್ಥಾನ ನೀಡಿದರೆ ಪಕ್ಷ ಗೆಲ್ಲಬಹುದು ಎಂಬ ಲೆಕ್ಕಾಚಾರಗಳನ್ನು ಕೂಡ ನಿರ್ವಹಣೆ ಮಾಡಬೇಕಾಗಿದೆ.

ಈ ಎಲ್ಲಾ ಅಂಶಗಳು ಮಮತಾ ಬ್ಯಾನರ್ಜಿ ರವರಿಗೆ ಬಹಳ ಲಾಭದಾಯಕವಾಗಿದ್ದವು. ಉತ್ತಮ ನಾಯಕ ಹಾಗೂ ಉಸ್ತುವಾರಿ ಇಲ್ಲದೆ ತಾನು ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ಮಮತಾ ಬ್ಯಾನರ್ಜಿ ಅವರು ಅಂದುಕೊಂಡಿದ್ದರು. ಆದರೆ ಈ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡುವಂತೆ ಬಿಜೆಪಿ ಪಕ್ಷದ ಹೈಕಮಾಂಡ್ ಇಡೀ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಭಾರತದ ಗೃಹ ಸಚಿವ ಅಮಿತ್ ಷಾ ರವರಿಗೆ ವಹಿಸಿ ಆದೇಶ ಹೊರಡಿಸಲಾಗಿದೆ. ಸಾಮಾನ್ಯವಾಗಿಯೇ ಮಮತಾ ಬ್ಯಾನರ್ಜಿ ರವರು ಅಮಿತ್ ಷಾ ಅವರನ್ನು ಕಂಡರೇ ಬೆ’ಚ್ಚಿಬೀ’ಳುತ್ತಾರೆ. ಅದೇ ಕಾರಣಕ್ಕಾಗಿ ಅಮಿತ್ ಶಾ ರವರನ್ನು ಪಶ್ಚಿಮ ಬಂಗಾಳಕ್ಕೆ ಬರದಂತೆ ತಡೆಯಲು ಪ್ರತಿಬಾರಿಯೂ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಹೀಗಿರುವಾಗ ಇಡೀ ವಿಧಾನಸಭಾ ಚುನಾವಣೆಯನ್ನು ಅಮಿತ್ ಶಾ ರವರ ಹೆಗಲಿಗೆ ಸೇರಿಸುವ ಮೂಲಕ ಬಿಜೆಪಿ ಪಕ್ಷ ಚಾಣಕ್ಯ ನಡೆಯುತ್ತಿದೆ. ಇದರಿಂದ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮತ್ತಷ್ಟು ಕಾವು ಏರುತ್ತಿದೆ.

Comments are closed.