ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ ಯಾರು ಶ್ರೇಷ್ಠ ಗೊತ್ತಾ?

ನಮ್ಮಲ್ಲಿ ಬಹಳಷ್ಟು ಜನರಿಗೆ, ಈ ಪ್ರಶ್ನೆ ಜೀವನದಲ್ಲಿ ಒಂದು ಬಾರಿಯಾದರೂ ಮೂಡಿರುತ್ತದೆ. ಏಕೆಂದರೆ ಹಲವಾರು ಪುರಾಣ ಮತ್ತು ಗ್ರಂಥಗಳಲ್ಲಿ ಉಲ್ಲೇಖಗಳು ಹೇಳುವ ಹಾಗೆ, ಬ್ರಹ್ಮನು ಜೀವಿಯನ್ನು ಸೃಷ್ಟಿಸುತ್ತಾನೆ, ಮತ್ತು ವಿಷ್ಣು ಜೀವಿಗೆ ಕಾವಲಾಗಿ ರಕ್ಷಿಸುತ್ತಾನೆ ಮತ್ತು ಶಿವನು ಜೀವಿಯ ವಿನಾಶಕ್ಕೆ ಕಾರಣವಾಗುತ್ತಾನೆ ಎಂದು ಹಲವಾರು ಕಥೆ ಪುರಾಣಗಳು ಹೇಳಿವೆ. ಆದರೆ ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ ಯಾರಿಗೆ ಅತಿ ಹೆಚ್ಚು ಶಕ್ತಿ ಇದೆ ಮತ್ತು ಇವರಲ್ಲಿ ಯಾರು ಅತಿ ಬಲಿಷ್ಠರು ಎಂದು ತಿಳಿದುಕೊಳ್ಳಲು ಹಲವಾರು ಜನರು ತರತರನಾದ ಕಥೆಗಳನ್ನು ನಿರ್ಮಿಸಿದ್ದಾರೆ.

ಮೊದಲನೆಯದಾಗಿ ಶಿವ ಪುರಾಣ, ಈ ಶಿವ ಪುರಾಣವು ಹೇಳುವ ಕಥೆ ಏನೆಂದರೆ ಮೊದಲು ಬ್ರಹ್ಮ ಮತ್ತು ವಿಷ್ಣು ಇವರ ಮಧ್ಯದಲ್ಲಿ ಘರ್ಷಣೆ ಉಂಟಾಗುತ್ತದೆ, ನಾನು ಬಲಿಷ್ಠ ನಾನು ಶಕ್ತಿಶಾಲಿ ಈ ರೀತಿ ಉಂಟಾದ ಜಗಳ ವಿಕೋಪಕ್ಕೆ ತಿರುಗುತ್ತದೆ, ಇದನ್ನು ಗಮನಿಸಿದ ಪರಮೇಶ್ವರನು ಇವರಿಬ್ಬರ ಮಧ್ಯದಲ್ಲಿ ಅಗ್ನಿಯ ಕಂಬವನ್ನು ನಿರ್ಮಿಸಿ ಇದರ ತುದಿಯನ್ನು ಯಾರು ಕಂಡು ಹಿಡಿಯುತ್ತಾರೆ, ಅವರೆ ಶ್ರೇಷ್ಠರು ಎಂಬ ನಿರ್ಧಾರಕ್ಕೆ ಬರಲಾಯಿತು. ಇದನ್ನು ಕೇಳಿದ ವಿಷ್ಣು ಮತ್ತು ಬ್ರಹ್ಮ ಕಂಬದ ಮೇಲೆ ಮತ್ತು ಕೆಳಗೆ ಧಾವಿಸುತ್ತಾರೆ.

ಆದರೆ ಯಾರೊಬ್ಬರಿಗೂ ಅದರ ತುದಿ ಸಿಗುವುದಿಲ್ಲ. ವಿಷ್ಣು ತನ್ನ ಸೋಲನ್ನು ಒಪ್ಪಿಕೊಂಡು ಸತ್ಯವನ್ನು ನುಡಿಯುತ್ತಾನೆ ಆದರೆ ಬ್ರಹ್ಮ ನನಗೆ ತುಂಬಿ ಸಿಕ್ಕಿತ್ತು ಎಂದು ಸುಳ್ಳು ಹೇಳುತ್ತಾರೆ ಇದನ್ನು ಕಂಡ ಶಿವ ಕುಪಿತನಾಗಿ ಸುಳ್ಳು ಹೇಳಿದ ಬ್ರಹ್ಮನ ತಲೆಯನ್ನು ಕತ್ತರಿಸುತ್ತಾನೆ ಮತ್ತು ಸತ್ಯವನ್ನು ಹೇಳಿ ಪ್ರಾಮಾಣಿಕತೆ ತೋರಿದ ವಿಷ್ಣುಗೆ “ನನ್ನ ಸಮವಾಗಿ ಪೂಜೆ ಪುರಸ್ಕಾರ ನಿನಗೆ ನಡೆಯಲಿ” ಎಂದು ವರವನ್ನು ಸಹ ನೀಡುತ್ತಾನೆ ಆದ್ದರಿಂದಲೇ ಇದು ಶಿವಪುರಾಣ ಎಂದು ಪ್ರಖ್ಯಾತಿ ಪಡೆದಿದೆ.

ಎರಡನೆಯದಾಗಿ ಶ್ರೀಮನ್ ಭಗವತಿ ಪುರಾಣ, ಪ್ರಸ್ತುತ ಪುರಾಣವು ಸಪ್ತಋಷಿಗಳು ಒಂದು ದಿನ ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠರು ಎಂಬ ಸಂಗತಿಯನ್ನು ತಿಳಿಯಬೇಕೆಂದು ಎಂದು ಚರ್ಚಿಸುತ್ತಿದ್ದರು. ಆದ್ದರಿಂದಲೇ ಭೃಂಗ ಋಷಿಗಳು ಮೊದಲನೆಯದಾಗಿ ಬ್ರಹ್ಮನ ಬಳಿ ತೆರಳುತ್ತಾರೆ ಬ್ರಹ್ಮನಿಗೆ ಅವಾಚ್ಯ ಶಬ್ದದಿಂದ ಟೀಕಿಸಿ ಮತ್ತು ನಿಂದಿಸಿ ಪರೀಕ್ಷಿಸಲು ಮುಂದಾಗುತ್ತಾರೆ. ಇದಕ್ಕೆ ಕೋಪಗೊಂಡ ನಂತರ, ಭೃಂಗ ಋಷಿಗಳು ಕ್ಷಮೆಯನ್ನು ಕೇಳಿ ಅಲ್ಲಿಂದ ಕೈಲಾಸದ ಕಡೆಗೆ ಹೋಗುತ್ತಾರೆ.

ಕೈಲಾಸದಲ್ಲಿ ಶಿವನನ್ನು ಭೇಟಿಯಾದ ಭೃಂಗ ಋಷಿಗಳು ಬ್ರಹ್ಮನಿಗೆ ಮಾಡಿದ ಹಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಾಗೂ ಬೈದು ಪರೀಕ್ಷೆ ಮಾಡುತ್ತಾರೆ, ಇದಕ್ಕೆ ಬಹಳ ಕೋಪಗೊಂಡ ಶಿವನನ್ನು ಶಾಂತಗೊಳಿಸಿ ಮತ್ತು ಕ್ಷಮೆಯಾಚಿಸಿ ಅಲ್ಲಿಂದ ಬರುತ್ತಾರೆ, ನಂತರ ವಿಷ್ಣು ಬಳಿ ಹೋದ ಭೃಂಗ ಋಷಿಗಳು ವಿಷ್ಣುವಿನ ಎದೆಗೆ ತಮ್ಮ ಪಾದದಿಂದ ಒದೆಯುತ್ತಾರೆ. ಇದಕ್ಕೆ ವಿಷ್ಣು ಬೃಂಗ ಋಷಿಗಳ ಕಾಲನ್ನು ಹಿಡಿದು ” ನನ್ನ ಎದೆಯ ತುಂಬ ಗಟ್ಟಿಯಾಗಿದೆ ನಿಮ್ಮ ಕಾಲಿಗೆ ಏನು ಪೆಟ್ಟಾಗಿಲ್ಲ ತಾನೇ” ಎಂದು ಕೇಳುತ್ತಾರೆ. ಇದಕ್ಕೆ ಅಚ್ಚರಿಗೊಳಗಾದರು ಭೃಂಗ ಋಷಿಗಳು ವಿಷ್ಣುವೇ ಸರ್ವಶ್ರೇಷ್ಠ ಎಂದು ಪ್ರಕಟಿಸುತ್ತಾರೆ. ಕೊನೆಯದಾಗಿ ಏನೇ ಆದರೂ ಸಹ ತ್ರಿಮೂರ್ತಿಗಳು ಒಬ್ಬರ ಮೇಲೆ ಒಬ್ಬರು ಅವಲಂಬಿತರಾಗಿದ್ದಾರೆ, ಒಬ್ಬರಿಲ್ಲ ದೆ ಇನ್ನೊಬ್ಬರಿಲ್ಲ ಎಂದೇ ಹೇಳಬಹುದು, ಆದ್ದರಿಂದ ಮೂವರು ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಹಾಗೂ ಒಂದೇ ಗುರಿಯೆಡೆಗೆ ಸಾಗುತ್ತಿದ್ದರೂ ಇಂದು ಹಲವು ಕಥೆ ಪುರಾಣಗಳು ಸಾರುತ್ತವೆ.

Comments are closed.