“ಪುನೀತ ಪರ್ವ” ಕಾರ್ಯಕ್ರಮಕ್ಕೆ ಸುದೀಪ್ ಬರ್ತಾರೆ ನೀವು ಬರಲ್ವಾ ಎಂದಿದ್ದಕೆ ದರ್ಶನ್ ಖಡಕ್‌ ಆಗಿ ಹೇಳಿದ್ದೇನು ? ಶಾಕ್.

ಪುನೀತ ಪರ್ವ ಕಾರ್ಯಕ್ರಮವು ಪುನೀತ್ ರಾಜಕುಮಾರ್ ರವರ ಪುಣ್ಯ ತಿಥಿಯ ಸ್ಮರಣಾರ್ಥವಾಗಿ ಒಂದು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 28 ರಂದು ಬಿಡುಗಡೆಯಾಗಲಿರುವ ಗಂಧದ ಗುಡಿ ಚಿತ್ರಕ್ಕೆ ಕ್ಷಣಗಣನೆ ಆರಂಭವಾಗಿದ್ದು, ದಿವಂಗತ ಪವರ್ ಸ್ಟಾರ್ ಅನ್ನು ಮತ್ತೆ ದೊಡ್ಡ ಪರದೆಯಲ್ಲಿ ನೋಡಲು ಅಭಿಮಾನಿಗಳು ಮತ್ತು ಹಿತೈಷಿಗಳು ಉತ್ಸುಕರಾಗಿದ್ದಾರೆ. ಈ ಸಂದರ್ಭವನ್ನು ಗುರುತಿಸುವ ಸಲುವಾಗಿ ಅಕ್ಟೋಬರ್ 21 ರ ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರೀ – ರಿಲೀಸ್ ಕಾರ್ಯಕ್ರಮವನ್ನು ಪುನೀತ ಪರ್ವ ಎಂಬ ಹೆಸರಿನಲ್ಲಿ ಆಯೋಜಿಸಲಾಗಿದೆ. ಪುನೀತ ಪರ್ವ ಆಯೋಜನೆಯ ಜವಾಬ್ದಾರಿಯನ್ನು ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಅವರ ಕುಟುಂಬ ಸದಸ್ಯರು ತೆಗೆದುಕೊಂಡಿದ್ದಾರೆ. ಪುನೀತ ಪರ್ವ ಕುರಿತಾಗಿ ಅಶ್ವಿನಿ ಪುನೀತ್ ರಾಜಕುಮಾರ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಇದರ ಕುರಿತು ಮಾಹಿತಿ ನೀಡಿದ್ದಾರೆ.

ಪುನೀತ ಪರ್ವ ಹೆಸರಿನಲ್ಲಿ ನಡೆಯುತ್ತಿರುವ ‘ಗಂಧದ ಗುಡಿ’ ಪ್ರೀ ರಿಲೀಸ್‌ ಕಾರ್ಯಕ್ರಮಕ್ಕೆ ಈಗಾಗಲೇ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ನವೆಂಬರ್‌ 1 ರಂದು ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಈ ವಿವಿಧ ಕಾರ್ಯಕ್ರಮಗಳ ಅಂಗವಾಗಿ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ‘ಗಂಧದಗುಡಿ ಹಬ್ಬ’ ದ ಹೆಸರಿನಲ್ಲಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅಕ್ಟೋಬರ್ 21 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಪುನೀತ ಪರ್ವ ಕಾರ್ಯಕ್ರಮ ಕುರಿತು ಅಶ್ವಿನಿ ಪುನೀತ್ ರಾಜಕುಮಾರ್ ರವರು ಡ್ರೆಸ್ ಕೋಡ್ ಹಾಗೂ ಇನ್ನಿತರ ಮಾಹಿತಿಯನ್ನು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮವು ಸಂಜೆ 6 ಗಂಟೆಗೆ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ನಡೆಯಲಿದ್ದು ಕಾರ್ಯಕ್ರಮಕ್ಕೆ ಬರುವವರು ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿಕೊಂಡು ಬರಲು ಮನವಿ ಮಾಡಿದ್ದಾರೆ.

darshan abt puneetha parva 1 | "ಪುನೀತ ಪರ್ವ" ಕಾರ್ಯಕ್ರಮಕ್ಕೆ ಸುದೀಪ್ ಬರ್ತಾರೆ ನೀವು ಬರಲ್ವಾ ಎಂದಿದ್ದಕೆ ದರ್ಶನ್ ಖಡಕ್‌ ಆಗಿ ಹೇಳಿದ್ದೇನು ? ಶಾಕ್.
"ಪುನೀತ ಪರ್ವ" ಕಾರ್ಯಕ್ರಮಕ್ಕೆ ಸುದೀಪ್ ಬರ್ತಾರೆ ನೀವು ಬರಲ್ವಾ ಎಂದಿದ್ದಕೆ ದರ್ಶನ್ ಖಡಕ್‌ ಆಗಿ ಹೇಳಿದ್ದೇನು ? ಶಾಕ್. 2

ಗಂಧದ ಗುಡಿ ಪುನೀತ್ ರಾಜಕುಮಾರ್ ರವರ ಕನಸಿನ ಪ್ರಾಜೆಕ್ಟ್ ಆಗಿದ್ದು ಅಕ್ಟೋಬರ್ 28 ರಂದು ತೆರೆ ಕಾಣಲಿದೆ. ಇದರ ಅಂಗವಾಗಿ ಅಕ್ಟೋಬರ್ 21 ಪುನೀತ ಪರ್ವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರ ಕುಟುಂಬದ ಸದಸ್ಯರು, ಹಿತೈಷಿಗಳು, ರಾಜಕೀಯ ಗಣ್ಯರು ಮತ್ತು ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದ ಸೇರಿದಂತೆ ಕನ್ನಡ ಸಹವರ್ತಿ ನಟರೆಲ್ಲ ಇರಲಿದ್ದಾರೆ. ಕನ್ನಡ ನಟರಾದ ದರ್ಶನ್, ಸುದೀಪ್, ಯಶ್, ಉಪೇಂದ್ರ ಸೇರಿದಂತೆ ಇನ್ನೂ ಹಲವು ನಟರು ಭಾಗಿಯಾಗಲಿದ್ದಾರೆ. ದರ್ಶನ್ ರವರು ಕಾರ್ಯಕ್ರಮಕ್ಕೆ ಬರುವಿಕೆಯ ಬಗ್ಗೆ ಕೇಳಿದಾಗ ಅವರು ಕುತೂಹಲಕಾರಿ ಪ್ರತಿಕ್ರಿಯೆ ನೀಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಪುನೀತ ಪರ್ವ ಕಾರ್ಯಕ್ರಮಕ್ಕೆ ಭಾಗಿಯಾಗುತ್ತಿರ ಎಂದು ಕೇಳಿದ್ದಕ್ಕೆ ದರ್ಶನ್ ರವರು ಪುನೀತ್ ರಾಜಕುಮಾರ್ ರಂತಹ ಒಳ್ಳೆಯ ವ್ಯಕ್ತಿ ಕುರಿತು ಗೌರವ ಸಲ್ಲಿಸುವ ಕಾರ್ಯಕ್ರಮ ಮಾಡುತ್ತಿರುವಾಗ ನಾನೊಬ್ಬನೇ ಅಲ್ಲ ಪ್ರತಿಯೊಬ್ಬರೂ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಪುನೀತ್ ರಾಜಕುಮಾರ್ ರವರ ಆದರ್ಶಗಳನ್ನು ಅಳವಡಿಸಿಕೊಂಡು ನಡೆಯಬೇಕು ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

Comments are closed.