Kannada astrology:ಸೃಷ್ಟಿಯಾಗಿದೆ ಮಾಲವ್ಯ ಯೋಗ: ಶುಕ್ರ ದೆಸೆ ಆರಂಭವಾಗಿದೆ. ಅದರಲ್ಲೂ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ??
ಸಂತೋಷ, ಐಷಾರಾಮಿ ಬದುಕು, ಸಂಪತ್ತು, ವೈಭವವನ್ನು ಉಂಟುಮಾಡುವ ಶುಕ್ರನು ಈಗಾಗಲೇ ಅಕ್ಟೋಬರ್ 18ರ ರಾತ್ರಿ 9:38ಕ್ಕೆ ತನ್ನ ರಾಶಿಯನ್ನು ಬದಲಿಸಿ, ತುಲಾ ರಾಶಿಗೆ ಸಂಚರಿಸಿದ್ದಾರೆ. ತುಲಾ ರಾಶಿಯಲ್ಲಿ ಶುಕ್ರನು ಮುಂದಿನ ನವೆಂಬರ್ 11 2022 ರವರೆಗೂ ಉಳಿಯಲಿದ್ದಾನೆ. ಆನಂತರ ವೃಶ್ಚಿಕ ರಾಶಿಗೆ ತನ್ನ ಸ್ಥಾನ ಬದಲಿಸಿಕೊಳ್ಳಲಿದ್ದಾನೆ. ಇಂತಹ ಸಂದರ್ಭದಲ್ಲಿ ಶುಕ್ರನು ಯಾರ ಜನ್ಮ ಕುಂಡಲಿಯಲ್ಲಿ ಕೇಂದ್ರ ಸ್ಥಾನದಲ್ಲಿ ಸಂಚರಿಸುವನೋ ಆ ಎಲ್ಲರಿಗೂ ಮಾಲವ್ಯ ಯೋಗವು ಸೃಷ್ಟಿಯಾಗಲಿದೆ. ಶುಕ್ರನ ಈ ರಾಶಿ ಸಂಚಾರದಿಂದ ಉಂಟಾಗುತ್ತಿರುವ ಮಾಲವ್ಯ ಯೋಗ ಯಾವ ರಾಶಿಯವರಿಗೆ ಅದೃಷ್ಟ ಹೊತ್ತು ತರಲಿದೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ವೃಷಭ ರಾಶಿ: ನ್ಯಾಯಾಲಯದ ಯಾವುದೇ ವ್ಯಾಜ್ಯ ಬಗೆಹರಿಯಲಿದೆ. ಜೀವನ ಸಂಗಾತಿ ಜೊತೆಗೆ ಉತ್ತಮ ಭಾಂಧವ್ಯ ವೃದ್ಧಿಸಲಿದೆ. ಪ್ರವಾಸ ಕೈಗೊಳ್ಳುವ ಸಾಧ್ಯತೆ. ಈ ಸಂಕ್ರಮಣವು ಶತ್ರುನಾಶಕ್ಕೆ ನೆರವಾಗಲಿದೆ. ಹೃದಯ ಸಂಬಂಧಿ ಕಾಯಿಲೆಗಳ ನಿವಾರಣೆ. ಆರೋಗ್ಯದಲ್ಲಿ ಚೇತರಿಕೆ. ವ್ಯಾಪಾರದಲ್ಲಿ ದೊಡ್ಡ ಲಾಭ. ಉದ್ಯೋಗದಲ್ಲಿ ಸಂಬಳ ಏರಿಕೆ. ಬಹು ರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವ ಅವಕಾಶ.
ಕನ್ಯಾ ರಾಶಿ: ಉದ್ಯೋಗಿಗಳ ಸಂಬಳ ಏರಿಕೆ. ಮನೆ, ಕಾರು ಸೇರಿದಂತೆ ದೊಡ್ಡ ಮೊತ್ತದ ಕೊಳ್ಳುವಿಕೆ ಸಾಧ್ಯತೆ. ಬೆಲೆ ಬಾಳುವ ವಸ್ತುಗಳ ಖರೀದಿ ಮಾಡಲಿದ್ದೀರಿ. ಆರ್ಥಿಕ ಬಲ ಹೆಚ್ಚಲಿದೆ. ವೃತ್ತಿ ವ್ಯಾಪಾರದಲ್ಲಿ ದೊಡ್ಡ ಲಾಭ ದೊರೆಯಲಿದೆ.
ತುಲಾ ರಾಶಿ: ನೀವು ಹೊಸ ಒಪ್ಪಂದಕ್ಕೆ ಸಹಿ ಹಾಕಬಹುದು. ನಿಮ್ಮ ಹೊಸ ಯೋಜನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಮದುವೆ ನಿಶ್ಚಯವಾಗಬಹುದು. ನಿಮ್ಮ ಬಹು ನಿರೀಕ್ಷಿತ ಕೆಲಸ ಕೈಗೂಡಲಿದೆ. ಹೊಸ ಕೆಲಸ ದಕ್ಕಲಿದೆ. ಬಡ್ತಿ, ಗೌರವ ಸಿಗಲಿದೆ.
ಮಕರ ರಾಶಿ: ಹೊಸ ವ್ಯಾಪಾರ ಆರಂಭಿಸಲು ಸೂಕ್ತ. ಅವಿವಾಹಿತರಿಗೆ ಕಂಕಣ ಭಾಗ್ಯ. ಆದಾಯ ಹೆಚ್ಚಲಿದ್ದು, ಆರ್ಥಿಕವಾಗಿ ಸುಧಾರಿಸಲಿದ್ದೀರಿ. ಉದ್ಯೋಗ ಪ್ರಾಪ್ತಿಯಾಗಲಿದೆ. ಉದ್ಯೋಗ, ವ್ಯವಹಾರದಲ್ಲಿ ಪ್ರಗತಿಗೆ ಅವಕಾಶಗಳು. ಭಡ್ತಿ ಪಡೆಯುವ ಸಾಧ್ಯತೆ. ಶುಭಫಲಗಳ ಪ್ರಾಪ್ತಿ.
ಕುಂಭ ರಾಶಿ: ವಿದೇಶದಲ್ಲಿ ಕೆಲಸ ಮಾಡುತ್ತಿರುವವರಿಗೆ ಅದೃಷ್ಟಸಿದ್ಧಿ. ಉದ್ಯೋಗ, ವ್ಯಾಪಾರದಲ್ಲಿ ಬಡ್ತಿ, ಗೌರವ ಸಿಗಲಿದೆ. ನಿರೀಕ್ಷಿಸದೆ ಇದ್ದ ಕಡೆಯಿಂದ ಹಣಕಾಸಿನ ನೆರವು. ಹೂಡಿಕೆಗೆ ಇದು ಸೂಕ್ತ ಕಾಲ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾಡುವ ಪ್ರವಾಸ ಒಳ್ಳೆಯ ಫಲಿತಾಂಶ ನೀಡಲಿದೆ. ಪ್ರತಿ ಕೆಲಸದಲ್ಲೂ ಯಶಸ್ಸು ಸಾಧಿಸುವಿರಿ. ಶುಕ್ರ ಸಂಕ್ರಮಣವು ಕುಂಭ ರಾಶಿಯವರಿಗೆ ಅದೃಷ್ಟವನ್ನು ವೃದ್ಧಿಸಲಿದೆ.
Comments are closed.