ಧೃವಸರ್ಜಾ ಮಗಳನ್ನ ನೋಡಲು ಮನೆಗೆ ಬಂದ ನಟ ದರ್ಶನ್. ಮಗುವಿಗೆ ಡಿ ಬಾಸ್ ಕೊಟ್ಟ ಉಡುಗೊರೆ ಏನು ಗೊತ್ತೇ??

ಸರ್ಜಾ ಕುಟುಂಬವು ಕಳೆದ ಕೆಲವು ವರ್ಷಗಳಿಂದ ಹಲವು ನೋವುಗಳನ್ನು ತಿಂದಿದೆ. ಚಿರಂಜೀವಿ ಸರ್ಜಾ ಅವರ ಅಗಲಿಕೆ ಹಾಗೂ ಇತ್ತೀಚಿಗೆ ಅರ್ಜುನ್ ಸರ್ಜಾ ಅವರ ತಾಯಿಯ ನಿಧನ ಇವುಗಳಿಂದ ಮನೆಯಲ್ಲಿ ಸೂತಕದ ಛಾಯೆ ತುಂಬಿತ್ತು. ಎಲ್ಲಾ ಕತ್ತಲು ಸರಿದು ಬೆಳಕು ಹರಿಯುವ ಹಾಗೆ ಈಗ ಮನೆ ಮಂದಿಯೆಲ್ಲಾ ಸಂತಸ ಪಡುವ ಶುಭ ಸುದ್ದಿಯನ್ನು ಧ್ರುವ ದಂಪತಿ ನೀಡಿದ್ದಾರೆ. ಇತ್ತೀಚೆಗೆ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ ಅಕ್ಟೋಬರ್ 2 ಪ್ರೇರಣ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಮನೆಯಲ್ಲಿ ಸಂಭ್ರಮ ತುಂಬಿದೆ. ಮನೆಗೆ ಮಹಾಲಕ್ಷ್ಮಿ ಬಂದಳು ಎಂದು ಎಲ್ಲರೂ ಖುಷಿಯಾಗಿದ್ದಾರೆ. ಬಂಧುಗಳು, ಸ್ನೇಹಿತರು ತಾಯಿ ಮಗುವನ್ನು ನೋಡಲು ಬರುತ್ತಿದ್ದಾರೆ.

ನಟ ದರ್ಶನ್ ಕೂಡ ಮಗುವನ್ನು ನೋಡಲು ಬಂದಿದ್ದು, ದುಬಾರಿ ಉಡುಗೊರೆ ನೀಡಿದ್ದಾರೆ. ಧ್ರುವ ಸರ್ಜಾ ಮತ್ತು ದರ್ಶನ ರವರು ಮೊದಲಿನಿಂದಲೂ ಒಳ್ಳೆಯ ಸ್ನೇಹಿತರು. ಸಾಕಷ್ಟು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ದರ್ಶನ್ ಸ್ನೇಹಿತರ ಜೊತೆಗೆ ಸಾಕಷ್ಟು ಒಳ್ಳೆಯ ಒಡನಾಟ ಹೊಂದಿರುವ ನಟ. ದರ್ಶನ್ ರವರು ಅವರನ್ನು ಪ್ರೀತಿಸುವವರಿಗಾಗಿ ಸದಾ ಪ್ರೀತಿ ತೋರಿಸುತ್ತಾ ಸಹಾಯ ಮಾಡುವ ಗುಣವನ್ನು ಹೊಂದಿದ್ದಾರೆ. ಇದೀಗ ದರ್ಶನ್ ಅವರು ಧ್ರುವ ಸರ್ಜಾ ಅವರ ಮಗಳನ್ನು ನೋಡಲಿಕ್ಕೆ ಎಂದು ಅವರ ಮನೆಗೆ ಹೋಗಿದ್ದಾರೆ. ಮಗುವನ್ನು ಕಂಡು ಮಗು ತುಂಬಾ ಮುದ್ದಾಗಿದೆ, ಲಕ್ಷಣವಾಗಿದೆ, ಚುರುಕಾಗಿದ್ದಾಳೆ. ಚೆನ್ನಾಗಿ ನೋಡಿಕೊಳ್ಳಿ, ಆರೈಕೆ ಮಾಡಿ ಹೀಗೆ ಒಳ್ಳೆಯ ಮಾತುಗಳನ್ನು ಆಡಿ ಮಗುವನ್ನು ಮುದ್ದು ಮಾಡಿದ್ದಾರೆ. ಜೊತೆಗೆ ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರೆ.

darshan dhruva | ಧೃವಸರ್ಜಾ ಮಗಳನ್ನ ನೋಡಲು ಮನೆಗೆ ಬಂದ ನಟ ದರ್ಶನ್. ಮಗುವಿಗೆ ಡಿ ಬಾಸ್ ಕೊಟ್ಟ ಉಡುಗೊರೆ ಏನು ಗೊತ್ತೇ??
ಧೃವಸರ್ಜಾ ಮಗಳನ್ನ ನೋಡಲು ಮನೆಗೆ ಬಂದ ನಟ ದರ್ಶನ್. ಮಗುವಿಗೆ ಡಿ ಬಾಸ್ ಕೊಟ್ಟ ಉಡುಗೊರೆ ಏನು ಗೊತ್ತೇ?? 2

ದರ್ಶನ್ ರವರು ಈ ಮೊದಲು ಪ್ರೇಮ ಬರಹ ಚಿತ್ರಕ್ಕಾಗಿ ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಅವರ ಜೊತೆಗೆ ಒಂದು ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದರು. ಅಷ್ಟರಮಟ್ಟಿಗೆ ಅವರೊಟ್ಟಿಗೆ ಬಾಂಧವ್ಯವನ್ನು ದರ್ಶನವರು ಇಟ್ಟುಕೊಂಡಿದ್ದಾರೆ. ಇದೀಗ ದರ್ಶನ್ ಧ್ರುವ ಸರ್ಜಾ ಹಾಗೂ ಪ್ರೇರಣ ಅವರ ಮಗಳನ್ನು ನೋಡಲಿಕ್ಕೆ ಅವರ ಮನೆಗೆ ಹೋಗಿದ್ದಾರೆ. ತಾಯಿ ಮಗುವನ್ನು ನೋಡಿ ಉಡುಗೊರೆಯಾಗಿ ದರ್ಶನ್ ಕೊಟ್ಟಿರುವ ವಸ್ತುವಿನ ಬಗ್ಗೆ ತಿಳಿದುಕೊಂಡರೆ ನೀವು ಖಂಡಿತ ಶಾಕ್ ಆಗ್ತೀರಿ. ಹೌದು ದರ್ಶನ್ ರವರು ಪ್ರೇರಣಾ ಹಾಗೂ ಧ್ರುವ ಸರ್ಜಾ ಅವರ ಮುದ್ದಾದ ಹೆಣ್ಣು ಮಗುವಿಗೆ ಚಿನ್ನದ ಚೈನ್ ಕೊಟ್ಟಿದಾರೆ ಎಂದು ಹೇಳಲಾಗುತ್ತಿದೆ. ಸದಾ ತಮ್ಮ ಪ್ರೀತಿ ಪಾತ್ರರನ್ನು ಅತ್ಯಂತ ಗೌರವ ಹಾಗೂ ಬಾಂಧವ್ಯದಿಂದ ನೋಡುವ ದರ್ಶನ್ ಅವರಿಗಾಗಿ ಏನನ್ನು ಬೇಕಾದರೂ ಮಾಡುತ್ತಾರೆ ಎಂದು ಈಗಾಗಲೇ ಸಾಕಷ್ಟು ಸಲ ಸಾಬೀತು ಮಾಡಿದ್ದಾರೆ. ಈಗ ಆ ಪುಟ್ಟ ಮಗುವಿಗೆ ಪ್ರೀತಿಯಿಂದ ಚಿನ್ನದ ಸರ ನೀಡಿದ್ದಾರೆ.

Comments are closed.