ಸಾಕಷ್ಟು ಬದಲಾವಣೆ ಮಾಡಿ, ಕೊಹ್ಲಿ ನಾಯಕತ್ವ ಕಿತ್ತುಕೊಂಡು, ಗೆದ್ದೇ ಬಿಡುತ್ತೇವೆ ಎನ್ನುವಂತಿದ್ದ ದ್ರಾವಿಡ್, ಸೋಲಿಗೆ ಕೊಟ್ಟ ಕಾರಣ ಏನು ಗೊತ್ತೇ??

ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಟಿ ಟ್ವೆಂಟಿ ವಿಶ್ವಕಪ್ 2022 ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋಲನ್ನು ಕಂಡಿದೆ. ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡ ನಂತರವೂ ಟೀಮ್ ಇಂಡಿಯ ಸೋಲನ್ನು ಕಂಡಿದೆ. ನಾವು ಈ ಪಂದ್ಯವನ್ನು ಗೆದ್ದೇ ಗೆಲ್ಲುತ್ತೇವೆ, ಈ ಬಾರಿಯ ವಿಶ್ವಕಪ್ ಟ್ರೋಫಿಯನ್ನು ಮುಡುಗೇರಿಸಿಕೊಳ್ಳುತ್ತೇವೆ ಎಂದೆಲ್ಲಾ ಸಾಕಷ್ಟು ಸಲ ಹೇಳಿದ್ದ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಈಗ ಬೇರೆಯದೇ ರೀತಿ ಹೇಳುತ್ತಿದ್ದಾರೆ. ಪಂದ್ಯ ಸೋತ ನಂತರ ಅವರು ಮಾಧ್ಯಮದವರ ಜೊತೆಗೆ ಪ್ರತಿಕ್ರಿಯಿಸುತ್ತಾ ಸೋಲಿಗೆ ಬೇರೆಯ ಕಾರಣಗಳನ್ನು ಕೊಟ್ಟಿದ್ದಾರೆ.

“ನಾವು ಈ ಸಲ ಚೆನ್ನಾಗಿ ಆಡಲಾಗಲಿಲ್ಲ. ನಮ್ಮ ಆಟವನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಬೇಕಾದ ಅಗತ್ಯವಿದೆ. ಹಿಂದಿನ ಪಂದ್ಯಗಳಲ್ಲಿ ನಾವು 180 ರನ್ನಗಿಂತ ಹೆಚ್ಚಿನ ಸ್ಕೋರ್ ಮಾಡಿದೆವು. ಆದರೆ ಈ ಬಾರಿ ಹಾಗೆ ಆಗಲಿಲ್ಲ. ಪಿಚ್ ಸರಿ ಇರಲಿಲ್ಲ, ಸಾಕಷ್ಟು ಸ್ಲೋ ಇತ್ತು ಎಂದು ಕೂಡ ಸಾಕಷ್ಟು ಆಟಗಾರರು ಹೇಳಿದ್ದಾರೆ. ನಮ್ಮ ತಂಡಕ್ಕೆ ಇನ್ನೂ 15 ರಿಂದ 20 ರನ್ ಗಳ ಅವಶ್ಯಕತೆ ಇತ್ತು. ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಆಡಿದರು. ನಾವು ಒಂದು ವೇಳೆ 180 ರನ್ ಕಲೆ ಹಾಕಿದ್ದರೆ ಚೆನ್ನಾಗಿರುತ್ತಿತ್ತು” ಎಂದು ಅವರು ಹೇಳಿದ್ದಾರೆ.

dravid kohli | ಸಾಕಷ್ಟು ಬದಲಾವಣೆ ಮಾಡಿ, ಕೊಹ್ಲಿ ನಾಯಕತ್ವ ಕಿತ್ತುಕೊಂಡು, ಗೆದ್ದೇ ಬಿಡುತ್ತೇವೆ ಎನ್ನುವಂತಿದ್ದ ದ್ರಾವಿಡ್, ಸೋಲಿಗೆ ಕೊಟ್ಟ ಕಾರಣ ಏನು ಗೊತ್ತೇ??
ಸಾಕಷ್ಟು ಬದಲಾವಣೆ ಮಾಡಿ, ಕೊಹ್ಲಿ ನಾಯಕತ್ವ ಕಿತ್ತುಕೊಂಡು, ಗೆದ್ದೇ ಬಿಡುತ್ತೇವೆ ಎನ್ನುವಂತಿದ್ದ ದ್ರಾವಿಡ್, ಸೋಲಿಗೆ ಕೊಟ್ಟ ಕಾರಣ ಏನು ಗೊತ್ತೇ?? 2

ಅಲ್ಲದೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್ ಬ್ಯಾಶ್ ಲೀಗ್ ಪಂದ್ಯದಲ್ಲಿ ಭಾರತ ತಂಡವು ಆಡಲಿರುವುದರ ಕುರಿತಾಗಿ ಸುದ್ದಿಗಾರರು ಕೇಳಿದಾಗ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್, “ಅದು ಸಂಪೂರ್ಣವಾಗಿ ಬಿಸಿಸಿಐ ನಿರ್ಧಾರವಾಗಿದೆ. ಈ ಹಿಂದೆಯೂ ಸಹ ಸಾಕಷ್ಟು ಆಟಗಾರರು ಬಿಬಿಎಲ್ ಸಮಯದಲ್ಲೂ ಕೂಡ ಇಲ್ಲಿಗೆ ಬಂದು ಆಡಿದ್ದಾರೆ ಎಂದು ಗೊತ್ತಿದೆ. ಇಲ್ಲಿ ಇಂಡಿಯನ್ ಕ್ರಿಕೆಟ್ ಗಾಗಿ ಆಡುವುದು ಬಹಳ ಕಷ್ಟವಿದೆ. ಈ ಟೂರ್ನಿಗಳು ಸೀಸನ್ ಪೀಕ್ ನಲ್ಲಿಯೇ ನಡೆಯುತ್ತವೆ. ಇದರ ಕುರಿತ ಎಲ್ಲಾ ನಿರ್ಧಾರಗಳನ್ನು ಬಿಸಿಸಿಐ ತೆಗೆದುಕೊಳ್ಳಲಿದೆ” ಎಂದು ಅವರು ಹೇಳಿದ್ದಾರೆ.

Comments are closed.