ದರ್ಶನ್ ಜೊತೆ ಕಾಣಿಸಿಕೊಂಡು ಮಹತ್ವದ ಅಪ್ಡೇಟ್ ಬಿಡುಗಡೆ ಮಾಡಿದ ರಚಿತಾ ರಾಮ್. ನೀಡಿದ ಸಿಹಿ ಸುದ್ದಿ ಏನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ನಾಯಕನಟನ ಅಭಿಮಾನಿಗಳಿಗೆ ಅವರ ಹೀರೋ ಸಿನಿಮಾದ ಕುರಿತಂತೆ ಅಪ್ಡೇಟ್ಗಳು ಟೈಮಿಗೆ ಸರಿಯಾಗಿ ಸಿಗುತ್ತಿವೆ ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಕ್ರಾಂತಿ ಸಿನಿಮಾದ ಕುರಿತಂತೆ ಅವರ ಅಭಿಮಾನಿಗಳಿಗೆ ಯಾವುದೇ ಅಪ್ಡೇಟ್ ಗಳನ್ನು ಚಿತ್ರದ ತಂಡ ನೀಡುತ್ತಿಲ್ಲ ಎನ್ನುವುದು ಅವರ ಬೇಸರಕ್ಕೆ ಕಾರಣವಾಗಿತ್ತು. ಆದರೆ ಈಗ ಪ್ರತಿಯೊಬ್ಬ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಭಿಮಾನಿಗಳ ಕುತೂಹಲವನ್ನು ಚಿತ್ರದ ನಾಯಕಿಯಾಗಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ತಿಳಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

ಹೌದು ಗೆಳೆಯರೇ ಚಿತ್ರದಲ್ಲಿ ನಾಯಕ ನಟಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಎಂಟು ವರ್ಷಗಳ ನಂತರ d-boss ರವರಿಗೆ ಜೋಡಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಹುತೇಕ ಎಲ್ಲಾ ಟಾಕಿ ಪೋರ್ಷನ್ ಚಿತ್ರೀಕರಣವನ್ನು ಕ್ರಾಂತಿ ಚಿತ್ರತಂಡ ಮಾಡಿಕೊಂಡಿದೆ ಎಂಬುದಾಗಿ ತಿಳಿದುಬಂದಿದೆ. ಇತ್ತೀಚಿಗಷ್ಟೇ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಕ್ರಾಂತಿ ಚಿತ್ರದ ಅಪ್ಡೇಟ್ ಎಲ್ಲಿಯವರೆಗೆ ಬಂದಿದೆ ಎಂಬುದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮುಖಾಂತರ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹೌದು ಗೆಳೆಯರೇ ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರದ ನಿರ್ಮಾಪಕರಾಗಿರುವ ಶೈಲಜ ನಾರಿ ಸೇರಿದಂತೆ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಡಿ ಬಾಸ್ ಹಾಗೂ ಚಿತ್ರತಂಡದ ಜೊತೆಗೆ ಪೋಲ್ಯಾಂಡ್ ದೇಶಕ್ಕೆ ಹಾರಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸುಮಲತಾ ಅಂಬರೀಶ್ ರವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕ್ರಾಂತಿ ಕನ್ನಡ ಚಿತ್ರರಂಗದಲ್ಲಿ ದೊಡ್ಡಮಟ್ಟದ ಕ್ರಾಂತಿ ಮಾಡಲಿ ಎಂಬುದಾಗಿ ಪ್ರತಿಯೊಬ್ಬ ಕನ್ನಡ ಸಿನಿಮಾದ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಕ್ರಾಂತಿ ಚಿತ್ರದ ಕುರಿತಂತೆ ನಿಮ್ಮ ನಿರೀಕ್ಷೆಗಳನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.