ಬಿಗ್ ನ್ಯೂಸ್: ದರ್ಶನ್ ಹಾಗೂ ಸುದೀಪ್ ಒಂದೇ ವೇದಿಕೆಯ ಮೇಲೆ ಕಾಣಿಸಿಕೊಳ್ಳಲು ಮುಹೂರ್ತ ಫಿಕ್ಸ್, ಇದಕೆಲ್ಲ ಕಾರಣ ಅಪ್ಪು. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸ್ನೇಹಕ್ಕೆ ಗುರುವಾಗಿದ್ದವರು ಎಂದರೆ ಅದು ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್. ಅವರಿಬ್ಬರ ನಂತರ ಸ್ನೇಹ ಅಥವಾ ಕುಚಿಕು ಎನ್ನುವ ಪದಕ್ಕೆ ನಿಜವಾದ ಅರ್ಥವನ್ನು ನೀಡಿದ್ದಾರೆ ಎಂದರೆ ಅದು ದಚ್ಚು ಕಿಚ್ಚ ರವರ ಜೋಡಿ. ಹೌದು ಒಂದು ಕಾಲದಲ್ಲಿ ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಹೋಗುತ್ತಿದ್ದರು.

ಕನ್ನಡ ಚಿತ್ರರಂಗದಲ್ಲಿ ಸ್ನೇಹಕ್ಕೆ ಒಂದು ಒಳ್ಳೆ ನಿದರ್ಶನವಾಗಿ ಇದ್ದರು. ಆದರೆ ಇವರ ಸ್ನೇಹ ಸಂಬಂಧದ ಮೇಲೆ ಯಾವ ಕೆಟ್ಟವರ ಕಣ್ಣು ಬಿತ್ತೋ ಏನೋ ಇಬ್ಬರೂ ಕೂಡ ಪರಸ್ಪರ ಮುನಿಸಿಕೊಂಡಿದ್ದು ಒಬ್ಬರು ಹೋದ ಜಾಗಕ್ಕೆ ಇನ್ನೊಬ್ಬರು ಹೋಗುತ್ತಿಲ್ಲ ಎಂಬಷ್ಟರಮಟ್ಟಿಗೆ ವೈರತ್ವವನ್ನು ಬೆಳೆಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಇವರಿಬ್ಬರ ಅಭಿಮಾನಿಗಳು ಕೂಡ ಇವರಿಬ್ಬರು ಒಂದಾಗಲಿ ಎಂಬುದಾಗಿ ಟ್ವಿಟರ್ನಲ್ಲಿ ಹಲವಾರು ಬಾರಿ ಅಭಿಯಾನಗಳನ್ನು ಕೂಡ ಮಾಡಿದ್ದಾರೆ. ಆದರೆ ಇಂದಿಗೂ ಕೂಡ ಅಷ್ಟೇ ಮುನಿಸಿನಿಂದ ಇಬ್ಬರೂ ಇದ್ದಾರೆ. ಅತಿಶೀಘ್ರದಲ್ಲೇ ಇವರಿಬ್ಬರು ಒಂದೇ ವೇದಿಕೆಯ ಮೇಲೆ ಒಂದಾಗಲಿದ್ದಾರೆ ಎಂಬ ಸುದ್ದಿಗಳು ಕೂಡಿದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

sudeep puneeth darshan | ಬಿಗ್ ನ್ಯೂಸ್: ದರ್ಶನ್ ಹಾಗೂ ಸುದೀಪ್ ಒಂದೇ ವೇದಿಕೆಯ ಮೇಲೆ ಕಾಣಿಸಿಕೊಳ್ಳಲು ಮುಹೂರ್ತ ಫಿಕ್ಸ್, ಇದಕೆಲ್ಲ ಕಾರಣ ಅಪ್ಪು. ಹೇಗೆ ಗೊತ್ತೇ??
ಬಿಗ್ ನ್ಯೂಸ್: ದರ್ಶನ್ ಹಾಗೂ ಸುದೀಪ್ ಒಂದೇ ವೇದಿಕೆಯ ಮೇಲೆ ಕಾಣಿಸಿಕೊಳ್ಳಲು ಮುಹೂರ್ತ ಫಿಕ್ಸ್, ಇದಕೆಲ್ಲ ಕಾರಣ ಅಪ್ಪು. ಹೇಗೆ ಗೊತ್ತೇ?? 2

ಕಳೆದ ಐದು ವರ್ಷಗಳಿಂದ ಇಬ್ಬರೂ ಕೂಡ ಒಬ್ಬರನ್ನು ಕಂಡರೆ ಒಬ್ಬರು ಆಗದಂತೆ ಬದುಕುತ್ತಿದ್ದಾರೆ ಇವರು ಹೇಗೆ ವೇದಿಕೆ ಮೇಲೆ ಒಂದಾಗಲು ಸಾಧ್ಯವಿಲ್ಲ ದಾಗಿ ನೀವು ಯೋಚಿಸುತ್ತಿರಬಹುದು. ಅದಕ್ಕೂ ಕೂಡ ಕಾರಣವಿದೆ. ಹೌದು ಗೆಳೆಯರೇ ಮಾರ್ಚ್ 6ರಂದು ಹೊಸಪೇಟೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗೂ ಜೂನಿಯರ್ ಎನ್ಟಿಆರ್ ಅವರು ಕೂಡ ಪ್ರಮುಖ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕೇಳಿಬರುತ್ತಿದೆ ಸುದ್ದಿಯ ಪ್ರಕಾರ ತಮ್ಮ ಸ್ನೇಹಿತನಿಗಾಗಿ ಕಿಚ್ಚ ಹಾಗೂ ದಚ್ಚು ಕೂಡ ಈ ಕಾರ್ಯಕ್ರಮದಲ್ಲಿ ಒಂದಾಗಿ ಭಾಗವಹಿಸಲಿದ್ದಾರೆ ಎಂಬುದಾಗಿ ಕೇಳಿಬರುತ್ತಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಹಾಗೂ ಸುಳ್ಳು ಎನ್ನುವುದನ್ನು ಕಾರ್ಯಕ್ರಮ ನಡೆದ ನಂತರವೇ ತಿಳಿದುಕೊಳ್ಳಬಹುದಾಗಿದೆ. ನಿಮಗೆ ಈ ಕುರಿತಂತೆ ಏನನ್ನಿಸುತ್ತದೆ ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Comments are closed.