ಪ್ರಶ್ನೆಯಾಗಿಯೇ ಉಳಿದಿದ್ದ ದಿವ್ಯಾ ಅರವಿಂದ್ ಸಂಬಂಧ;. ತಮ್ಮ ಸ್ನೇಹದ ಬಗ್ಗೆ ವಿಶೇಷ ಮಾಹಿತಿ ಹಂಚಿಕೊಂಡು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇದುವರೆಗೆ ಕನ್ನಡ ಬಿಗ್ ಬಾಸ್ ದೊಡ್ಮನೆಗೆ ಹೋಗಿ ಬಂದ ಹಲವು ಸ್ಪರ್ಧಿಗಳಲ್ಲಿ ಕೆಲವರು ಮಾತ್ರ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೂ ಸುದ್ದಿಯಲ್ಲಿರುತ್ತಾರೆ. ಜನರೂ ಕೂಡ ಅವರ ಬಗ್ಗೆ ಆಸಕ್ತಿ ತೋರಿಸುತ್ತಾರೆ. ಅಂಥವರಲ್ಲಿ ಬಿಗ್ ಬಾಸ್ ಸೀಸನ್ 8ರ ಟಾಪ್ ಸ್ಪರ್ಧಿಗಳಾದ ಅರವಿಂದ್ ಮತ್ತು ದಿವ್ಯಾ ಉರುಡುಗ ಕೂಡ ಪ್ರಮುಖರು. ಬಿಗ್ ಬಾಸ್ ಮನೆಯಲ್ಲಿ ಅತ್ಯಂತ ಉತ್ತಮ ಆಟ, ಮನೋರಂಜನೆ ಜೊತೆಗೆ ಒಟ್ಟಿಗೇ ಇದ್ದು ಇಬ್ಬರೂ ಮದುವೆಯಾಗ್ತಾರಾ ಅನ್ನೋ ಕುತೂಹಲವನ್ನು ಹುಟ್ಟುಹಾಕಿತ್ತು ಈ ಜೋಡಿ.

ಇನ್ನು ಡಿಯೂ ಹಾಗೂ ಕೆಪಿ ನಡುವಿನ ಆಳವಾದ ಗೆಳೆತನ ಇನ್ನೂ ಹಾಗೆಯೇ ಇದೆ. ಇವರಿಬ್ಬರೂ ಅಭಿಮಾನಿಗಳ ಫೇವರೇಟ್ ಜೋಡಿ ಕೂಡ ಹೌದು. ಇತ್ತೀಚಿಗೆ ಡಿಯೂ ತಮ್ಮ ಇನ್ಸ್ಟಾ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದ ಒಂದು ರೀಲ್ ಮತ್ತೆ ಈ ಜೋಡಿಯ ಬಗ್ಗೆ ಕುತೂಹಲ ಹುಟ್ಟುಹಾಕಿದೆ. ಹೌದು ಕಳೆದ ವರ್ಷ ಫೆ. 28ರಂದು ಬಿಗ್ ಬಾಸ್ ಶುರುವಾಗಿತ್ತು.

divya aravind kp | ಪ್ರಶ್ನೆಯಾಗಿಯೇ ಉಳಿದಿದ್ದ ದಿವ್ಯಾ ಅರವಿಂದ್ ಸಂಬಂಧ;. ತಮ್ಮ ಸ್ನೇಹದ ಬಗ್ಗೆ ವಿಶೇಷ ಮಾಹಿತಿ ಹಂಚಿಕೊಂಡು ಹೇಳಿದ್ದೇನು ಗೊತ್ತೇ??
ಪ್ರಶ್ನೆಯಾಗಿಯೇ ಉಳಿದಿದ್ದ ದಿವ್ಯಾ ಅರವಿಂದ್ ಸಂಬಂಧ;. ತಮ್ಮ ಸ್ನೇಹದ ಬಗ್ಗೆ ವಿಶೇಷ ಮಾಹಿತಿ ಹಂಚಿಕೊಂಡು ಹೇಳಿದ್ದೇನು ಗೊತ್ತೇ?? 2

ಅವತ್ತೇ ಕೆಪಿ ಹಾಗೂ ಡಿಯು ಭೇಟಿಯಾಗಿದ್ರು. ಹಾಗಾಗಿ ತಮ್ಮ ಗೆಳೆತನಕ್ಕೆ ಒಂದು ವರ್ಷ ತುಂಬುತ್ತದೆ ಎನ್ನುವ ಅರ್ಥದಲ್ಲಿ ರೀಲ್ಸ್ ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿ ಸ್ಪೆಷಲ್ ಒನ್ ಅಂತ ಕ್ಯಾಪ್ಷನ್ ಕೂಡ ಕೊಟ್ಟಿದ್ರು. ಅರವಿಂದ ಕೆಪಿ ಕೂಡ ಇದನ್ನ ತಮ್ಮ ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ನಲ್ಲಿ ಗಟ್ಟಿಯಾದ ಗೆಳೆತನ ಇನ್ನೂ ಹಾಗೆಯೇ ಉಳಿದಿದೆ ಎನ್ನುವುದನ್ನು ಇವರ ಸೋಶಿಯಲ್ ಮೀಡಿಯಾ ಖಾತೆಗಳನ್ನು ನೋಡಿದ್ರೆ ಅರ್ಥಆಗತ್ತೆ. ಇವರಿಬ್ಬರ ಬಾಂಡಿಂಗ್ ಇನ್ನೂ ಗಟ್ಟಿಯಾಗ್ಲಿ ಅನ್ನೋದೆ ಅಭಿಮಾನಿಗಳ ಹಾರೈಕೆ.

Comments are closed.