ಕೊನೆಗೂ ಬಯಲಾಯಿತು ಅಸಲಿ ಸತ್ಯ, ಪುನೀತ್ ರವರಿಗೆ ಪವರ್ ಸ್ಟಾರ್ ಎಂಬ ಬಿರುದು ನೀಡಿದ ಮಹಾತ್ಮ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣ ಸಂಭವಿಸಿ ಆಗಲೇ ತಿಂಗಳುಗಟ್ಟಲೆ ಕಳೆದು ಹೋದರೂ ಕೂಡ ಇಂದಿಗೂ ಅವರನ್ನು ಪ್ರೀತಿಸುತ್ತಿರುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ದೇಶವಿದೇಶಗಳಿಂದ ಅಭಿಮಾನಿಗಳು ಬರುತ್ತಿರುವುದನ್ನು ನೋಡಿದರೆ ನಿಜಕ್ಕೂ ಕೂಡ ಹೃದಯ ತೇವವಾಗುತ್ತದೆ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ಕಾಣುತ್ತಿದ್ದ ಅಪ್ಪು ಅವರ ವ್ಯಕ್ತಿತ್ವ ನಿಜಕ್ಕೂ ಕೂಡ ಎಲ್ಲರೂ ಮೆಚ್ಚುವಂತದ್ದಾಗಿತ್ತು.

ಇಂದಿಗೂ ಕೂಡ ಅಪ್ಪು ಅವರನ್ನು ದಿನಾಲು ನೆನೆಸಿಕೊಂಡು ಅಳುವವರು ಸಾವಿರಾರು ಜನರಿದ್ದಾರೆ. ಸಹಸ್ರಾರು ಜನರ ಸಂಖ್ಯೆಯಲ್ಲಿ ಅಪ್ಪು ರವರ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ದರ್ಶನವನ್ನು ಪಡೆಯಲು ಬರುತ್ತಾರೆ. ಚಿಕ್ಕವಯಸ್ಸಿನಿಂದಲೂ ಕೂಡ ಅಪ್ಪು ಅವರನ್ನು ಕನ್ನಡದ ಜನತೆ ಮೆಚ್ಚಿ ಕೊಂಡಾಡಿದ್ದಾರೆ. ತಂದೆ ರಾಜಕುಮಾರ್ ಅವರಂತೆ ಪುನೀತ್ ರಾಜಕುಮಾರ್ ಅವರ ಕೂಡ ಸಣ್ಣ ವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿ ಪಡೆದಂತಹ ಅತ್ಯದ್ಭುತ ಪ್ರತಿಭಾವಂತ.

puni ragha | ಕೊನೆಗೂ ಬಯಲಾಯಿತು ಅಸಲಿ ಸತ್ಯ, ಪುನೀತ್ ರವರಿಗೆ ಪವರ್ ಸ್ಟಾರ್ ಎಂಬ ಬಿರುದು ನೀಡಿದ ಮಹಾತ್ಮ ಯಾರು ಗೊತ್ತೇ??
ಕೊನೆಗೂ ಬಯಲಾಯಿತು ಅಸಲಿ ಸತ್ಯ, ಪುನೀತ್ ರವರಿಗೆ ಪವರ್ ಸ್ಟಾರ್ ಎಂಬ ಬಿರುದು ನೀಡಿದ ಮಹಾತ್ಮ ಯಾರು ಗೊತ್ತೇ?? 3

ಮೂರು ತಲೆಮಾರಿನಲ್ಲಿ ನಟಿಸಿಕೊಂಡು ಬಂದವರು ಪುನೀತ್ ರಾಜಕುಮಾರ್ ರವರು ಎಂದರೆ ತಪ್ಪಾಗಲಾರದು. ಯುವಕರಿಗೆ ನೆಚ್ಚಿನ ಅಣ್ಣನಾಗಿ ಹೆಣ್ಣುಮಕ್ಕಳಿಗೆ ಡ್ರೀಮ್ ಬಾಯ್ ಹಿರಿಯರಿಗೆ ಮಗನಂತೆ ಪುನೀತ್ ರಾಜಕುಮಾರ್ ಅವರು ಕಾಣಿಸಿಕೊಂಡಿದ್ದಾರೆ. ಅಣ್ಣಾವ್ರ ನಂತರ ಕನ್ನಡ ಚಿತ್ರರಂಗದಲ್ಲಿ ಅವರ ಸ್ಥಾನವನ್ನು ತುಂಬಿದ ನಟ ಎಂದರೆ ಪುನೀತ್ ರಾಜಕುಮಾರ್ ಅವರು ಮಾತ್ರ. ಅವರನ್ನು ನೋಡಿದ ಪ್ರತಿಯೊಬ್ಬರೂ ಕೂಡ ನಿಮ್ಮಲ್ಲಿ ನಾವು ರಾಜಕುಮಾರ್ ಅವರನ್ನು ಕಾಣುತ್ತೇವೆ ಎಂಬುದಾಗಿಯೇ ಹೇಳುತ್ತಾರೆ. ಇದುವರೆಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಿಸಿರುವ ಯಾವುದೇ ಸಿನಿಮಾಗಳಲ್ಲಿ ಕೂಡ ಮಿತಿಮೀರಿದ ಯಾವುದೇ ಕಂಟೆಂಟ್ ಇಲ್ಲ ಹಾಗೂ ಸಮಾಜಕ್ಕೆ ಸಂದೇಶವನ್ನು ನೀಡುವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಅಂತಹ ದೊಡ್ಡ ನಟನ ಮಗನಾಗಿ ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜಕುಮಾರ್ ಅವರ ಜವಾಬ್ದಾರಿ ಬೆಟ್ಟದಷ್ಟಿತ್ತು. ಆದರೆ ಅವನ್ನೆಲ್ಲ ಸುಲಭವಾಗಿ ನಿಭಾಯಿಸುತ್ತಾ ಸ್ಟಾರ್ ಆಗುವ ಬದಲು ಅಣ್ಣಾವ್ರ ಮಗನಾಗಿ ಯಾವ ಗ್ರಾಮವನ್ನು ಹೊಂದಿರಬೇಕು ಅವನ್ನೆಲ್ಲ ಕರಗತ ಮಾಡಿಕೊಂಡರು. ಇಂದಿಗೂ ಕೂಡ ಹಮ್ಮು-ಬಿಮ್ಮು ಗಳಿಂದ ನಡೆದು ಕೊಂಡವರಲ್ಲ. ಮರ ಎಷ್ಟೇ ಆಕಾಶದೆತ್ತರಕ್ಕೆ ಬೆಳೆದು ಕೂಡ ವಿನಮ್ರವಾಗಿ ನೆಲಕ್ಕೆ ಬಾಗಿದ ಸರಳತೆ ಅವರಲ್ಲಿತ್ತು. ಅದರಲ್ಲೂ ಮೈತ್ರಿ ಹಾಗೂ ರಾಜಕುಮಾರ ಗಳಂತಹ ಚಿತ್ರಗಳನ್ನು ನೋಡಿದ ಮೇಲೆ ಖಂಡಿತವಾಗಿ ಅವರಲ್ಲಿರುವ ಸಾಮಾಜಿಕ ಪ್ರಜ್ಞೆ ಹಾಗೂ ವ್ಯಕ್ತಿತ್ವ ಎಂದು ಎನ್ನುವುದು ಎಲ್ಲವೂ ತಿಳಿಯುತ್ತದೆ.

ಎದುರುಗಡೆ ಯಾರೇ ಇದ್ದರೂ ಕೂಡ ಅವರ ಆಸ್ತಿ ಅಂತಸ್ತುಗಳನ್ನು ಲೆಕ್ಕ ಹಾಕದೆ ಎಲ್ಲರಿಗೂ ಸಮಾನವಾಗಿ ಪ್ರೀತಿ ಹಾಗೂ ಗೌರವಗಳನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನೀಡುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ಇಂತಹ ಸ್ಪಷ್ಟ ಹಾಗೂ ಸರಳ ವ್ಯಕ್ತಿತ್ವ ಸಿಗುವುದು ವಿರಳ. ಗುಣದಲ್ಲಿ ನಿಜವಾಗಲು ಕೂಡ ಸನ್ ಆಫ್ ಬಂಗಾರದ ಮನುಷ್ಯ.

punith shivanna 1 | ಕೊನೆಗೂ ಬಯಲಾಯಿತು ಅಸಲಿ ಸತ್ಯ, ಪುನೀತ್ ರವರಿಗೆ ಪವರ್ ಸ್ಟಾರ್ ಎಂಬ ಬಿರುದು ನೀಡಿದ ಮಹಾತ್ಮ ಯಾರು ಗೊತ್ತೇ??
ಕೊನೆಗೂ ಬಯಲಾಯಿತು ಅಸಲಿ ಸತ್ಯ, ಪುನೀತ್ ರವರಿಗೆ ಪವರ್ ಸ್ಟಾರ್ ಎಂಬ ಬಿರುದು ನೀಡಿದ ಮಹಾತ್ಮ ಯಾರು ಗೊತ್ತೇ?? 4

ಒಬ್ಬ ನಟ ನಿರ್ಮಾಪಕನಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡಿರುವಂತಹ ಸಾಧನೆ ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಮೆಚ್ಚುವಂತದ್ದು. ಮೂರನೇ ವಯಸ್ಸಿಗೆ ಹಾಡಲು ಆರಂಭಿಸುತ್ತಾರೆ ಹಾಗೂ 6ನೇ ವಯಸ್ಸಿಗೆ ಬಾಲನಟನಾಗಿ ನ್ಯಾಷನಲ್ ಅವಾರ್ಡ್ ಅನ್ನು ಪಡೆಯುತ್ತಾರೆ. ಪುನೀತ್ ರಾಜಕುಮಾರ್ ಅವರಂತಹ ಪ್ರತಿಭೆ ಇನ್ನು ಹಿಂದೆ ಹುಟ್ಟಿಲ್ಲ ಇನ್ನುಮುಂದೆ ಹುಟ್ಟುವುದಿಲ್ಲ. ಇದು ಜೀವನದಲ್ಲಿ ಕೂಡ ಎಲ್ಲರಿಗೂ ಸಹಾಯ ಮಾಡಿ ಅದನ್ನು ಯಾರಿಗೂ ತಿಳಿಯದಂತೆ ಕೂಡ ಮಾಡುವ ನಿಸ್ವಾರ್ಥ ಮನಸ್ಸು ನಿಜಕ್ಕೂ ಕೂಡ ಅವರ ಚಿನ್ನದಂತಹ ವ್ಯಕ್ತಿತ್ವವನ್ನು ಸಮಾಜಕ್ಕೆ ನಿರೂಪಿಸುತ್ತದೆ.

ಇನ್ನು ಎಲ್ಲರಿಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಪವರ್ ಸ್ಟಾರ್ ಎಂಬ ಬಿರುದನ್ನು ಯಾರು ನೀಡಿರಬಹುದು ಎಂಬ ಕುತೂಹಲವಿದೆ. ಹೌದು ಗೆಳೆಯರೆ ನಿಮ್ಮ ಈ ಗೊಂದಲವನ್ನು ನಾವು ಸಂಪೂರ್ಣವಾಗಿ ಪರಿಹರಿಸುತ್ತೇವೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಪವರ್ಸ್ಟಾರ್ ಎನ್ನುವ ಬಿರುದನ್ನು ಇಟ್ಟಿರುವುದು ಇನ್ಯಾರೂ ಅಲ್ಲ ಅವರ ಸ್ವಂತ ಸಹೋದರ ಆಗಿರುವ ಕರುನಾಡ ಚಕ್ರವರ್ತಿ ಶಿವಣ್ಣನವರು. ಇದನ್ನು ಸ್ವತಃ ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಆದರೆ ತಮ್ಮನಿಲ್ಲದೆ ಅಣ್ಣನ ಕೂಡ ಏಕಾಂಗಿಯಾಗಿ ದುಃಖ ಪಡುತ್ತಿದ್ದಾರೆ. ಅಪ್ಪು ಇಲ್ಲದ ದುಃಖವನ್ನು ಭರಿಸುವ ಶಕ್ತಿ ದೇವರು ಅವರಿಗೆ ನೀಡಿ ಕನ್ನಡ ಚಿತ್ರರಂಗವನ್ನು ಮುನ್ನಡೆಸಿಕೊಂಡು ಹೋಗುವಂತಾಗಲಿ ಎಂಬುದು ನಮ್ಮ ಆಸೆ.

Comments are closed.