ಬಿಗ್ ನ್ಯೂಸ್: ಕನ್ನಡದ ನಿರ್ಮಾಪಕನನ್ನು ಮದುವೆಯಾಗಲು ಹೊರಟ ಉದಯೋನ್ಮುಖ ನಟಿ ಕಾವ್ಯ ಶಾ, ಮದುವೆ ಹುಡುಗ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನೀವು ಸರಿಯಾಗಿ ಗಮನಿಸಿದರೆ ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಮದುವೆಯಾಗುವುದನ್ನು ರೂಢಿಸಿಕೊಂಡು ಬಿಟ್ಟಿದ್ದಾರೆ ಎಂದು ಹೇಳಬಹುದಾಗಿದೆ. ಅದು ಯಾವುದು ಚಿತ್ರರಂಗ ವಿರಲಿ ಎಲ್ಲಾ ಸೆಲೆಬ್ರಿಟಿಗಳು ಕೂಡ ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದನ್ನು ಹೆಚ್ಚು ಮಾಡಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ ತಮ್ಮ ಸಿನಿಮಾ ಹಾಗೂ ನಟನೆ ವೃತ್ತಿಯಲ್ಲಿ ತೊಡಗಿಕೊಂಡಿದ್ದ ಸೆಲೆಬ್ರಿಟಿಗಳು ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ವೈವಾಹಿಕ ಜೀವನದ ಕುರಿತಂತೆ ಗಮನವನ್ನು ಹರಿಸಿ ಮದುವೆಯಾಗುವತ್ತ ಒಲವನ್ನು ತೋರಿದ್ದಾರೆ ಎಂದು ಹೇಳಬಹುದಾಗಿದೆ.

ಕಳೆದ ವರ್ಷವಷ್ಟೇ ನೋಡುವುದಾದರೆ ಮಿಲನಾ ನಾಗರಾಜ್ ಡಾರ್ಲಿಂಗ್ ಕೃಷ್ಣ ಚಂದನ್ ಗೌಡ ಹಾಗೂ ಕವಿತಾ ಗೌಡ ಚಿತ್ರರಂಗದ ಖ್ಯಾತ ನಟಿಯ ರಾಗಿರುವ ಯಾಮಿ ಗೌತಮ್ ಪ್ರಣಿತ ಸುಭಾಷ್ ರಮೇಶ್ ಅರವಿಂದ್ ರವರ ಪುತ್ರಿ ಹೀಗೆ ಹತ್ತಾರು ಸೆಲೆಬ್ರಿಟಿಗಳು ಸಾಲುಸಾಲಾಗಿ ಮದುವೆ ಮಾಡಿಕೊಂಡಿದ್ದನ್ನು ನೀವು ನೋಡಿರಬಹುದು. ಇನ್ನು ಕೆಲವರು ಈ ಸಂದರ್ಭದಲ್ಲಿ ಮಕ್ಕಳಿಗೆ ಜನ್ಮವನ್ನು ಕೂಡ ನೀಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ದಾಂಪತ್ಯ ಜೀವನದ ಯಶಸ್ವಿ ಫಲಿತಾಂಶವನ್ನು ಈ ಸಂದರ್ಭದಲ್ಲಿ ಅವರು ನೋಡಿರುವುದು. ಈಗ ಇದೇ ಮದುವೆ ಆಗುವವರ ಲಿಸ್ಟಿಗೆ ಚಿತ್ರರಂಗದ ಮತ್ತೊಬ್ಬ ನಟಿ ಸೇರ್ಪಡೆಯಾಗುತ್ತಿದ್ದಾರೆ.

kavya shah | ಬಿಗ್ ನ್ಯೂಸ್: ಕನ್ನಡದ ನಿರ್ಮಾಪಕನನ್ನು ಮದುವೆಯಾಗಲು ಹೊರಟ ಉದಯೋನ್ಮುಖ ನಟಿ ಕಾವ್ಯ ಶಾ, ಮದುವೆ ಹುಡುಗ ಯಾರು ಗೊತ್ತೇ??
ಬಿಗ್ ನ್ಯೂಸ್: ಕನ್ನಡದ ನಿರ್ಮಾಪಕನನ್ನು ಮದುವೆಯಾಗಲು ಹೊರಟ ಉದಯೋನ್ಮುಖ ನಟಿ ಕಾವ್ಯ ಶಾ, ಮದುವೆ ಹುಡುಗ ಯಾರು ಗೊತ್ತೇ?? 3

ಹೌದು ನಾವು ಮಾತನಾಡಲು ಹೊರಟಿರುವುದು ಕಿರುತೆರೆಯ ನಟಿ ಹಾಗೂ ನಿರೂಪಕಿಯಾಗಿ ಕೆಲಸ ಮಾಡಿರುವ ನಟಿ ಕಾವ್ಯ ಶಾ ರವರ ಕುರಿತಂತೆ. ಇವರು ಚಿ ಸೌ ಸಾವಿತ್ರಿ ಹಾಗೂ ಬಂಗಾರ ಧಾರವಾಹಿಗಳಲ್ಲಿ ಕಾಣಿಸಿಕೊಂಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇನ್ನು ಇವರು ಮದುವೆಯಾಗುತ್ತಿರುವುದು ಯಾವುದು ನಟ ಅಥವಾ ಸಹಕಲಾವಿದರನ್ನು ಅಲ್ಲ ಬದಲಾಗಿ ನಿರ್ಮಾಪಕರೊಬ್ಬರನ್ನು.

ಕಾವ್ಯ ಶಾ ರವರು ಕನ್ನಡ ಕಿರುತೆರೆಯಿಂದ ಸಿನಿಮಾ ಲೋಕಕ್ಕೆ ಕೂಡ ಆಗಮಿಸುತ್ತಾರೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಮನೋರಂಜನ್ ರವಿಚಂದ್ರನ್ ನಟನೆಯ ಮುಗಿಲ್ಪೇಟೆ ಹೀಗೆ ಹಲವಾರು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಸದ್ಯಕ್ಕೆ ಈಗ ತಮಿಳು ಚಿತ್ರರಂಗ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ನಿರತರಾಗಿದ್ದಾರೆ ಎಂದು ಕೇಳಿಬರುತ್ತಿದೆ. ಇವರು ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ರಾಗಿರುವ ನಾಗೇಂದ್ರ ಶಾ ರವರ ಪುತ್ರಿಯಾಗಿದ್ದಾರೆ. ಈಗ ಕಾವ್ಯ ಶಾ ರವರು ಮದುವೆಯಾಗುತ್ತಿರುವ ಕನ್ನಡದ ನಿರ್ಮಾಪಕನ ಹೆಸರು ವರುಣ್ ಗೌಡ ಎಂದು.

ವರುಣ್ ರವರು ಮೊದಲಿನಿಂದಲೂ ಕೂಡ ಜೀ ಕನ್ನಡ ಸಂಸ್ಥೆಯ ಪ್ರಮುಖರಾಗಿರುವ ರಾಘವೇಂದ್ರ ಹುಣಸೂರು ರವರ ಜೊತೆಗೆ ಸೇರಿಕೊಂಡು ಜೀ ಕನ್ನಡದಲ್ಲಿ ಪ್ರಸಾರವಾಗುವ ಅಂತಹ ಎಲ್ಲಾ ರಿಯಾಲಿಟಿ ಶೋ ಹಾಗೂ ವಿಶೇಷ ಕಾರ್ಯಕ್ರಮಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಇವರದೇ ಆದಂತಹ ಸ್ವಂತ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಕೂಡ ಇದೆ. ಇತ್ತೀಚಿಗಷ್ಟೇ ನಿರ್ಮಾಪಕನಾಗಿ ಕೂಡ ಹಾಸ್ಟೆಲಿಗೆ ಹುಡುಗರು ಬೇಕಾಗಿದ್ದಾರೆ ಎನ್ನುವ ಸಿನಿಮಾವನ್ನು ಕೂಡ ನಿರ್ಮಾಣ ಮಾಡುತ್ತಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಳಿ ಪ್ರಮೋಷನ್ ವಿಡಿಯೋವನ್ನು ಕೂಡ ಚಿತ್ರೀಕರಿಸಿರುವುದು ನಿಮಗೆಲ್ಲಾ ಗೊತ್ತಿದೆ.

kavya shah 2 | ಬಿಗ್ ನ್ಯೂಸ್: ಕನ್ನಡದ ನಿರ್ಮಾಪಕನನ್ನು ಮದುವೆಯಾಗಲು ಹೊರಟ ಉದಯೋನ್ಮುಖ ನಟಿ ಕಾವ್ಯ ಶಾ, ಮದುವೆ ಹುಡುಗ ಯಾರು ಗೊತ್ತೇ??
ಬಿಗ್ ನ್ಯೂಸ್: ಕನ್ನಡದ ನಿರ್ಮಾಪಕನನ್ನು ಮದುವೆಯಾಗಲು ಹೊರಟ ಉದಯೋನ್ಮುಖ ನಟಿ ಕಾವ್ಯ ಶಾ, ಮದುವೆ ಹುಡುಗ ಯಾರು ಗೊತ್ತೇ?? 4

ಈಗ ವರುಣ್ ಗೌಡ ಹಾಗೂ ಕಾವ್ಯ ಶಾ ಜೋಡಿಗಳು ಇದೇ ಮಾರ್ಚ್ ಅಂತ್ಯದಲ್ಲಿ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರವನ್ನು ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಿಂದಲೂ ಕೂಡ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಜೀವನದಲ್ಲಿ ಸೆಟಲ್ ಆದನಂತರ ಮದುವೆಯಾಗೋಣ ಎನ್ನುವ ನಿರ್ಧಾರಕ್ಕೆ ಬಂದಿದ್ದರಂತೆ. ಈಗ ಎಲ್ಲಾ ಸೆಟ್ ಆದ ನಂತರವೇ ಮನೆಯವರ ಒಪ್ಪಿಗೆ ಮೇರೆಗೆ ಅದ್ದೂರಿಯಾಗಿ ಮದುವೆಯಾಗಲು ಹೊರಟಿದ್ದಾರೆ. ಈ ಪ್ರೇಮ ಪಕ್ಷಿಗಳಿಗೆ ನಾವು ಶುಭವಾಗಲಿ ಎಂದು ಶುಭ ಹಾರೈಸೋಣ.

Comments are closed.