ವೇಶ್ಯೆ ಪಾತ್ರಕ್ಕೆ ಆಲಿಯಾ ಪಡೆದ ಸಂಭಾವನೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ, ಅಜಯ್​ ದೇವಗನ್ ಕೂಡ ಏನು ಕಡಿಮೆ ಇಲ್ಲ. ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಈಗಾಗಲೇ ಗಂಗೂಬಾಯಿ ಕಾಥಿಯಾವಾಡಿ ಹಾಡು ರೀಲ್ಸ್ ನಲ್ಲಿ ಸಕ್ಕತ್ ಫೇಮಸ್ ಆಗಿಬಿಟ್ಟಿದೆ. ಬಿಡುಗಡೆಗೂ ಮೊದಲೇ ಈ ಚಿತ್ರ ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು. ಇದಕ್ಕೆ ಕಾರಣ ಮುಖ್ಯವಾಗಿ ನಟಿ ಆಲಿಯಾ ಭಟ್ ಅವರ ಡಿಫರೆಂಟ್ ಗೆಟಪ್! ಜೊತೆಗೆ ಅಜಯ್ ದೇವಗಾನ್ ಹಾಗೂ ಶಂತನೂ ಅವರ ವಿಶೇಷ ನಟನೆ!

ಮುಂಬೈನ ರೆಡ್ ಲೈಟ್ ಏರಿಯಾ ಕಾಮಾಟಿಪುರದ ಬಗ್ಗೆ ಇರುವ ಈ ಚಿತ್ರಕ್ಕೆ ಅಲ್ಲಿನವರ ವಿರೋಧವಿದ್ದರೂ, ಸಾಕಷ್ಟು ಜನ ಮೆಚ್ಚಿಕೊಂಡಿದ್ದಂತೂ ಸುಳ್ಳಲ್ಲ. ಅಂದಹಾಗೆ ವಿದೇಶದಲ್ಲಿಯೂ ಕೂಡ ಸಕ್ಕತ್ ಹಿಟ್ ಆಗಿದೆ ಈ ಚಿತ್ರ. ಕಾಮಾಟಿಪುರದಲ್ಲಿ ಬಹಳ ಹಿಂದೆ ವಾಸವಾಗಿದ್ದ ವೈಶ್ಯೆ ಗಂಗೂಬಾಯಿಯ ಪಾತ್ರದಲ್ಲಿ ಆಲಿಯಾ ಭಟ್ ಕಣ್ಣುಕುಕ್ಕುವಂತೆ ಅದ್ಭುತವಾಗಿ ನಟಿಸಿದ್ದಾರೆ. ಇನ್ನು ನಟ ಅಜಯ್ ದೇವಗನ್ ಕೂಡ ಎಂದಿನಂತೆ ತಮ್ಮ ನೈಜ ನಟನೆಯಿಂದಲೇ ಎಲ್ಲರ ಗಮನಸೆಳೆದಿದ್ದಾರೆ. ಮುಂಬೈ ಮಾಫಿಯಾ ಡಾನ್ ರಹೀಮ್ ಲಾಲಾ ಪಾತ್ರದಲ್ಲಿ ಅಜಯ್ ದೇವಗನ್ ಬಹಳ ಪ್ರಬುದ್ಧವಾಗಿ ಕಾಣಿಸಿಕೊಳ್ಳುತ್ತಾರೆ. ಗಂಗೂಬಾಯಿಯನ್ನು ವೈಶ್ಯಾವಾಟಿಕೆಗೆ ಕರೆತರುವ ಪಾತ್ರವನ್ನು ನಿಭಾಯಿಸಿದ್ದಾರೆ.

alia bhatt gangubai | ವೇಶ್ಯೆ ಪಾತ್ರಕ್ಕೆ ಆಲಿಯಾ ಪಡೆದ ಸಂಭಾವನೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ, ಅಜಯ್​ ದೇವಗನ್ ಕೂಡ ಏನು ಕಡಿಮೆ ಇಲ್ಲ. ಎಷ್ಟು ಗೊತ್ತೇ??
ವೇಶ್ಯೆ ಪಾತ್ರಕ್ಕೆ ಆಲಿಯಾ ಪಡೆದ ಸಂಭಾವನೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ, ಅಜಯ್​ ದೇವಗನ್ ಕೂಡ ಏನು ಕಡಿಮೆ ಇಲ್ಲ. ಎಷ್ಟು ಗೊತ್ತೇ?? 2

ಇನ್ನು ದೇಶ ವಿದೇಶಗಳಲ್ಲಿ ಇಷ್ಟು ಸೌಂಡ್ ಮಾಡಿರುವ ಗಂಗೂಬಾಯಿ ಪಾತ್ರಕ್ಕೆ ಆಲಿಯಾ ಭಟ್ ಪಡೆದ ಸಂಬಾವನೆ ಎಷ್ಟು ಗೊತ್ತಾ? ಕೇಳಿದ್ರೆ ಶಾಖ್ ಆಗ್ತೀರಿ. ಈ ಚಿತ್ರ ಚಿತ್ರೀಕರಣಕಂಡಿದ್ದೇ 100 ಕೋಟಿ ಬಜೆಟ್ ನಲ್ಲಿ. ಇನ್ನು ಆಲಿಯಾ 20 ಕೋಟಿ ಸಂಭಾವನೆ ಪಡೆದಿದ್ದು ಆರ್ಶ್ಚರ್ಯವೇನಲ್ಲ ಬಿಡಿ. ಇನ್ನು ಅಜಯ್ ದೇವಗನ್ 12 ಕೋಟಿ ಸಂಭಾವನೆ ಗಿಟ್ಟಿಸಿಕೊಂಡಿದ್ದಾರೆ ಎನ್ನುತ್ತೆ ಬಾಲಿವುಡ್. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಆಲಿಯಾ ಭಟ್ ಪ್ರಥಮ ಬಾರಿಗೆ ನಟಿಸಿದ್ದು, ತಮ ಪಾತ್ರಕ್ಕೆ, ಸಂಭಾವನೆಗೆ ತಕ್ಕ ಅದ್ಭುತ ಅಭಿನಯ ನೀಡಿದ್ದು ಅಕ್ಷರಶಃ ಸತ್ಯ. ತನಗೆ 9 ನೇ ವಯಸ್ಸಿನಲ್ಲಿರುವಾಗಲೇ ಬನ್ಸಾಲಿ ಅವರೊಂದಿಗೆ ಕೆಲಸ ಮಾಡಬೇಕು ಎನ್ನುವ ಆಸೆ ಇತ್ತು ಎಂದು ಆಲಿಯಾ ಈ ಹಿಂದೆ ಹೇಳಿದ್ದರು. ಒಟ್ಟಿನಲ್ಲಿ ಮಿಸ್ ಮಾಡದೇ ನೋಡಬೇಕಾದ ಚಿತ್ರ ಗಂಗೂಬಾಯಿ ಕಾಥಿಯಾವಾಡಿ

Comments are closed.