ಶಿವಣ್ಣ ನನ್ನು ತಬ್ಬಿಕೊಂಡು ಕೆನ್ನೆ ಗಿಂಡಿದ ನಟ ಡಿ‌ಬಾಸ್ ದರ್ಶನ್. ಶಿವಣ್ಣ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಅವಾರ್ಡ್ ಆಗಿರುವ ಸೈಮ ಅವಾರ್ಡ್ಸ್ ಇದೇ ಸಪ್ಟೆಂಬರ್ 10 ಹಾಗೂ 11ರಂದು ನಮ್ಮ ರಾಜ್ಯದ ರಾಜಧಾನಿ ಆಗಿರುವ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ದಶಕದ ಸಂಭ್ರಮಾಚರಣೆಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ದಕ್ಷಿಣ ಭಾರತ ಚಿತ್ರರಂಗದಿಂದ ಹಾಗೂ ಬಾಲಿವುಡ್ ನಿಂದಲೂ ಕೂಡ ಹಲವಾರು ಸೆಲೆಬ್ರಿಟಿಗಳು ಆಗಮಿಸಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ವಿಡಿಯೋವನ್ನು ಪ್ರಸಾರ ಮಾಡುವ ಮೂಲಕ ಅವರ ನೆನಪನ್ನು ಕೂಡ ಮಾಡಲಾಯಿತು. ಒಂದು ಲೆಕ್ಕದಲ್ಲಿ ಹೇಳುವುದಾದರೆ ಅಪ್ಪು ಅವರಿಗಾಗಿಯೇ ಈ ಕಾರ್ಯಕ್ರಮವನ್ನು ಬೆಂಗಳೂರಿಗೆ ತರಲಾಗಿತ್ತು ಎಂದರೆ ತಪ್ಪಾಗಲಾರದು. ಈ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಹೋದರ ಆಗಿರುವ ಶಿವಣ್ಣ ತಮ್ಮ ತಮ್ಮನ ನೆನಪಿಗಾಗಿ ಅವರ ಇಷ್ಟವಾದ ಹಾಡಾಗಿರುವ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡನ್ನು ಹಾಡಿ ಸಂಪೂರ್ಣವಾಗಿ ಎಮೋಷನಲ್ ಆಗುತ್ತಾರೆ. ಒಂದು ಕ್ಷಣ ಅಲ್ಲಿ ನೆರೆದಿದ್ದ ಪ್ರತಿಯೊಬ್ಬ ಸೆಲೆಬ್ರಿಟಿಗಳು ಕೂಡ ಈ ದೃಶ್ಯವನ್ನು ನೋಡಿ ಕಂಬನಿ ಹಾಕಿದ್ದಂತೂ ಸುಳ್ಳಲ್ಲ.

darshan shivanna | ಶಿವಣ್ಣ ನನ್ನು ತಬ್ಬಿಕೊಂಡು ಕೆನ್ನೆ ಗಿಂಡಿದ ನಟ ಡಿ‌ಬಾಸ್ ದರ್ಶನ್. ಶಿವಣ್ಣ ಮಾಡಿದ್ದೇನು ಗೊತ್ತೇ??
ಶಿವಣ್ಣ ನನ್ನು ತಬ್ಬಿಕೊಂಡು ಕೆನ್ನೆ ಗಿಂಡಿದ ನಟ ಡಿ‌ಬಾಸ್ ದರ್ಶನ್. ಶಿವಣ್ಣ ಮಾಡಿದ್ದೇನು ಗೊತ್ತೇ?? 2

ಈ ಸಂದರ್ಭದಲ್ಲಿ ವೇದಿಕೆಯಿಂದ ಕೆಳಗಿಳಿದು ಬಂದಂತಹ ಕರುನಾಡ ಚಕ್ರವರ್ತಿ ಶಿವಣ್ಣನನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೆನ್ನೆ ಗಿಂಡುವುದರ ಮೂಲಕ ಹಸನ್ಮುಖಿಯಾಗಿ ಕುಶಲೌಪರಿಯನ್ನು ವಿಚಾರಿಸುತ್ತಾರೆ. ಮೊದಲಿನಿಂದಲೂ ಕೂಡ ಶಿವಣ್ಣ ಅವರ ಜೊತೆಗೆ ಇಂತಹ ಸಹೋದರತ್ವದ ಬಾಂಧವ್ಯವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಂದಿದ್ದಾರೆ. ಶಿವಣ್ಣ ಕೂಡ ಡಿ ಬಾಸ್ ಅವರನ್ನು ಆರಂಭಿಸುವ ಮೂಲಕ ಪ್ರೀತ್ಯಾದರಗಳನ್ನು ತೋರಿಸುತ್ತಾರೆ. ಇವರಿಬ್ಬರ ಸಹೋದರತ್ವದ ಝಲಕ್ ಈ ಕಾರ್ಯಕ್ರಮದಲ್ಲಿ ವಿಡಿಯೋ ಮೂಲಕ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದು ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.

Comments are closed.