ಮೊದಲ ಬಾರಿಗೆ ತನ್ನ ಅಭಿಮಾನಿಗಳು ಮಾಡುತ್ತಿರುವ ಕೆಲಸ ನೋಡಿ, ಭಾವುಕರಾದ ಡಿ ಬಾಸ್. ಟಚ್ ಮಾಡಲು ಸಾಧ್ಯವಿಲ್ಲವೇ?? ಫ್ಯಾನ್ಸ್ ಏನು ಮಾಡಿದ್ದಾರೆ ಗೊತ್ತೇ?

ನಟ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಬೇರೆ ಎಲ್ಲಾ ನಟರಿಗಿಂತ ಅರಿದೊಡ್ಡ ಮಾಸ್ ಫ್ಯಾನ್ ಬೇಸ್ ಇದೆ. ಡಿಬಾಸ್ ಎಂದೇ ಅಭಿಮಾನಿಗಳು ಪ್ರೀತಿಯಿಂದ ದರ್ಶನ್ ಅವರನ್ನು ಕರೆಯುತ್ತಾರೆ. ದರ್ಶನ ಅವರ ಪ್ರತಿಯೊಂದು ಸಿನಿಮಾಗು ಅಭಿಮಾನಿಗಳ ಸಪೋರ್ಟ್ ಅದ್ಭುತವಾಗಿರುತ್ತದೆ. ದರ್ಶನ್ ಅವರ ವೈಯಕ್ತಿಕ ಜೀವನದಲ್ಲಿ ಅಥವಾ ವೃತ್ತಿ ಜೀವನದಲ್ಲಿ ಏನೇ ನಡೆದರು, ಅಭಿಮಾನಿಗಳು ಮಾತ್ರ ದರ್ಶನ್ ಅವರ ಕೈಬಿಟ್ಟಿಲ್ಲ. ಪ್ರತಿಯೊಂದು ಹಂತದಲ್ಲಿ ದರ್ಶನ್ ಅವರಿಗೆ ಅಭಿಮಾನಿಗಳು ಸಾಥ್ ನೀಡಿದ್ದಾರೆ. ಇದೀಗ ದರ್ಶನ್ ಅವರು ಸಹ ಅಭಿಮಾನಿಗಳಿಗೆ ಸಾಥ್ ನೀಡಿದ್ದಾರೆ..

ದರ್ಶನ್ ಅವರು ಕೆಲಸಮಯದ ಹಿಂದೆ, ಮಾಧ್ಯಮದವರ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಆಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ದರ್ಶನ್ ಅವರ ಬಗ್ಗೆ ಯಾವ ಸುದ್ದಿಯನ್ನು ಸಹ ಮಾಧ್ಯಮದವರು ಪ್ರಸಾರ ಮಾಡುತ್ತಿರಲಿಲ್ಲ. ಆದರೆ ದರ್ಶನ್ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಡಿಬಾಸ್ ಅವರ ಬಗ್ಗೆ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗೆಯೇ ಇತ್ತೀಚೆಗೆ ದರ್ಶನ್ ಅವರ ಅಭಿಮಾನಿಗಳು, ಇದೇ ವಿಚಾರದ ಬಗ್ಗೆ ಒಂದು ಪೋಸ್ಟ್ ಮಾಡಿದ್ದಾರೆ. “ದಶಕಗಳ ಹಿಂದೆ ಸರಿಯಾಗಿ ಮೀಡಿಯಾ ಸಪೋರ್ಟ್ ಇಲ್ಲದೆ ಇದ್ದಾಗಿನಿಂದಲೂ ನಾವೆಲ್ಲರೂ ಅವರ ಜೊತೆ ಇದ್ದೇವೆ. ಅವರಿಗೆ ಮೀಡಿಯಾ ಅವಶ್ಯಕತೆ ಇಲ್ಲ, ಮೀಡಿಯಾಗೆ ಟಿ.ಆರ್.ಪಿ ಗಾಗಿ ಅವರ ಅವಶ್ಯಕತೆ ಇದೆ. ಯಾವುದೇ ಮೀಡಿಯಾ ಸಹಾಯ ಇಲ್ಲದೆ, ದರ್ಶನ್ ಅವರ ಮುಂದಿನ ಕ್ರಾಂತಿ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸೋಣ.” ಎಂದು ಡಿಬಾಸ್ ಅಭಿಮಾನಿಗಳು ಪೋಸ್ಟ್ ಮಾಡಿದ್ದರು.

dboss 2 | ಮೊದಲ ಬಾರಿಗೆ ತನ್ನ ಅಭಿಮಾನಿಗಳು ಮಾಡುತ್ತಿರುವ ಕೆಲಸ ನೋಡಿ, ಭಾವುಕರಾದ ಡಿ ಬಾಸ್. ಟಚ್ ಮಾಡಲು ಸಾಧ್ಯವಿಲ್ಲವೇ?? ಫ್ಯಾನ್ಸ್ ಏನು ಮಾಡಿದ್ದಾರೆ ಗೊತ್ತೇ?
ಮೊದಲ ಬಾರಿಗೆ ತನ್ನ ಅಭಿಮಾನಿಗಳು ಮಾಡುತ್ತಿರುವ ಕೆಲಸ ನೋಡಿ, ಭಾವುಕರಾದ ಡಿ ಬಾಸ್. ಟಚ್ ಮಾಡಲು ಸಾಧ್ಯವಿಲ್ಲವೇ?? ಫ್ಯಾನ್ಸ್ ಏನು ಮಾಡಿದ್ದಾರೆ ಗೊತ್ತೇ? 2

ಅಭಿಮಾನಿಗಳ ಈ ಪ್ರೀತಿಗೆ ಫಿದಾ ಆದ ದಾಸ ದರ್ಶನ್ ಅವರು, ಅಭಿಮಾನಿಗಳ ಈ ಪೋಸ್ಟ್ ಶೇರ್ ಮಾಡಿ, ತಾವು ಸಹ ಅಭಿಮಾನಿಗಳ ಬಗ್ಗೆ ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ. “ನಾ ನಡೆಯೋ ಹಾದಿಯಲ್ಲಿ ನನ್ನೊಂದಿಗೆ ಸದಾ ನಿಲ್ಲುವ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಾನು ಸದಾ ಚಿರಋಣಿ. ನೀವು ನನಗೆ ನೀಡುತ್ತಿರುವ ಸಾಥ್ ಗೆ ನಾನು ಆಭಾರಿಯಾಗಿದ್ದೇನೆ, ನಿಮ್ಮ ಈ ಪ್ರೀತಿಯನ್ನು ವರ್ಣಿಸಲು ಬಹುಕೋಟಿ ಪದಗಳೇ ಸಾಲದು. ನಿಮ್ಮ ದಾಸ ದರ್ಶನ್” ಎಂದು ಬರೆದುಕೊಂಡಿದ್ದಾರೆ ನಟ ದರ್ಶನ್ . ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸದಾ ಋಣಿಯಾಗಿರುವ ಮಾತುಗಳನ್ನಾಡಿದ್ದಾರೆ. ದರ್ಶನ್ ಅವರ ಕ್ರಾಂತಿ ಸಿನಿಮಾ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ.

Comments are closed.