ನಯನತಾರಾ – ವಿಘ್ನೇಶ್ ಶಿವನ್ ಮದುವೆಗೆ ಖರ್ಚಾದ ಹಣವೆಷ್ಟು ಗೊತ್ತಾ?? ಕೋಟಿ ಕೋಟಿ ಇದ್ದರೂ ಖರ್ಚು ಮಾಡಿದ ಹಣವೆಷ್ಟು ಗೊತ್ತೇ?

ನಮಸ್ಕಾರ ಸ್ನೇಹಿತರೇ ಅಂತೂ-ಇಂತೂ ಕೊನೆಗೂ ದಕ್ಷಿಣ ಭಾರತ ಚಿತ್ರರಂಗದ ಅನಭಿಷಕ್ತ ರಾಣಿ ಎಂದೇ ಖ್ಯಾತರಾಗಿರುವ ತಮಿಳು ಚಿತ್ರರಂಗ ಮೂಲದ ನಟಿ ನಯನತಾರಾ ರವರು ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಮದುವೆಯಾಗಿದ್ದಾರೆ. ಹೌದು ಗೆಳೆಯರೆ ಹಲವಾರು ವರ್ಷಗಳ ಕಾಲ ಇವರಿಬ್ಬರ ಲವ್ ಕಹಾನಿಯ ನಂತರ ಇಬ್ಬರು ಕೂಡ ಈಗ ಶಾಸ್ತ್ರೋಕ್ತವಾಗಿ ಚೆನ್ನೈನಲ್ಲಿ ಮದುವೆಯಾಗಿದ್ದಾರೆ. ನಯನತಾರಾ ರವರ ಬದುಕು ವಿಘ್ನೇಶ್ ರವರು ಬರುವುದಕ್ಕಿಂತ ಮುಂಚೆ ಸಾಕಷ್ಟು ದುಃಖಗಳಿಂದ ತುಂಬಿತ್ತು ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ ಆದರೆ ಕುರಿತಂತೆ ಹೆಚ್ಚೇನು ಮಾತನಾಡುವುದು ಬೇಡ.

2015 ರಲ್ಲಿ ಚಿತ್ರವೊಂದರ ಚಿತ್ರೀಕರಣದ ಸಂದರ್ಭದಲ್ಲಿ ಇವರಿಬ್ಬರ ಪರಿಚಯ ಆಗುತ್ತದೆ. ಸ್ನೇಹ ಎನ್ನುವುದು ಪ್ರೀತಿಗೆ ತಿರುಗಲು ಹೆಚ್ಚು ಬೇಕಾಗಿರಲಿಲ್ಲ. ನಂತರ ಹಲವಾರು ವರ್ಷಗಳ ಕಾಲ ಅಂದರೆ ಸರಿ ಸುಮಾರು 6 ರಿಂದ 7 ವರ್ಷಗಳ ಕಾಲ ಇಬ್ಬರು ಜೊತೆಯಾಗಿ ಕಾಲವನ್ನು ಕಳೆದ ನಂತರ ಇಬ್ಬರೂ ಕೂಡ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದು ಇದೇ ಜೂನ್ 9ರಂದು ಚೆನ್ನೈನ ಪ್ರತಿಷ್ಠಿತ ಖಾಸಗಿ ರೆಸಾರ್ಟ್ನಲ್ಲಿ ಗಣ್ಯಾತಿಗಣ್ಯರು ಸಮ್ಮುಖದಲ್ಲಿ ಇವರಿಬ್ಬರು ಸತಿಪತಿಗಳಾಗಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ಕಮಲಹಾಸನ್ ರಜನಿಕಾಂತ್ ಸೇರಿದಂತೆ ಶಾರುಖ್ ಖಾನ್ ರವರಂತಹ ಹಲವಾರು ಟಾಪ್ ಗಣ್ಯ ವ್ಯಕ್ತಿಗಳು ಆಗಮಿಸಿದ್ದರು.

nayanthara vignesh shivan | ನಯನತಾರಾ - ವಿಘ್ನೇಶ್ ಶಿವನ್ ಮದುವೆಗೆ ಖರ್ಚಾದ ಹಣವೆಷ್ಟು ಗೊತ್ತಾ?? ಕೋಟಿ ಕೋಟಿ ಇದ್ದರೂ ಖರ್ಚು ಮಾಡಿದ ಹಣವೆಷ್ಟು ಗೊತ್ತೇ?
ನಯನತಾರಾ - ವಿಘ್ನೇಶ್ ಶಿವನ್ ಮದುವೆಗೆ ಖರ್ಚಾದ ಹಣವೆಷ್ಟು ಗೊತ್ತಾ?? ಕೋಟಿ ಕೋಟಿ ಇದ್ದರೂ ಖರ್ಚು ಮಾಡಿದ ಹಣವೆಷ್ಟು ಗೊತ್ತೇ? 2

ಹೀಗಾಗಿ ಮದುವೆಯನ್ನು ಕೂಡ ಅದ್ದೂರಿಯಾಗಿಯೇ ಆಯೋಜಿಸಲಾಗಿತ್ತು. ಇನ್ನು ಇವರ ಮದುವೆಗೆ ಖರ್ಚಾಗಿರುವ ವೆಚ್ಚವು ಕೂಡ ಅಷ್ಟು ದೊಡ್ಡ ಮಟ್ಟದಲ್ಲಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಕೆಲವರು ಇವರ ಮದುವೆಗೆ ಖರ್ಚು ಮಾಡಿರುವ ಹಣದಲ್ಲಿ ಒಂದು ಸಿನಿಮಾ ಮಾಡಬಹುದಾಗಿತ್ತು ಎಂಬುದಾಗಿ ಕೂಡ ಅಭಿಪ್ರಾಯಪಟ್ಟಿದ್ದಾರೆ. ಆಶ್ಚರ್ಯವೆನಿಸಿದರೂ ಕೂಡ ನಯನತಾರಾ ಹಾಗೂ ವಿಘ್ನೇಶ್ ರವರ ಮದುವೆಗೆ ಬರೋಬರ್ ಮೂರರಿಂದ ನಾಲ್ಕು ಕೋಟಿ ರೂಪಾಯಿ ಖರ್ಚಾಗಿದೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಈ ಜೋಡಿಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಶೇರ್ ಮಾಡಿಕೊಳ್ಳಿ.

Comments are closed.