ಪಂತ್ ಅಲ್ಲ, ಮೊದಲು ಈತನನ್ನು ತಂಡದಿಂದ ಹೊರಗಿಡಿ ಎಂದ ಫ್ಯಾನ್ಸ್. ಎರಡನೇ ಪಂದ್ಯದಲ್ಲಿ ವಿಫಲವಾದ ಬಳಿಕ ಫ್ಯಾನ್ಸ್ ಸೋಲಿಗೆ ಕಾರಣವಾಗಿಸಿದ್ದು ಯಾರನ್ನು ಗೊತ್ತೇ?

ಇದೀಗ ಭಾರತದಲ್ಲಿ ಸೌತ್ ಆಫ್ರಿಕಾ ವಿರುದ್ಧದ ಸರಣಿ ಪಂದ್ಯಗಳು ಶುರುವಾಗಿವೆ, ಈಗಾಗಲೇ ಎರಡು ಪಂದ್ಯಗಳು ಮುಗಿದಿದ್ದು, ಎರಡರಲ್ಲೂ ಸಹ ಭಾರತ ತಂಡ ಸೋಲನ್ನು ಕಂಡಿದೆ. ಇದರಿಂದಾಗಿ ಭಾರತ ಕ್ರಿಕೆಟ್ ತಂಡದ ಮೇಲೆ ಒತ್ತಡ ಹೆಚ್ಚಾಗಿದ್ದು, ಮುಂಬರುವ ಪಂದ್ಯಗಳನ್ನು ಭಾರತ ತಂಡವು ಗೆಲ್ಲಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಇದುವರೆಗೂ ಸೌತ್ ಆಫ್ರಿಕಾ ವಿರುದ್ಧದ ಸರಣಿ ಪಂದ್ಯಗಳನ್ನು ಭಾರತ ತಂಡ ಗೆದ್ದಿಲ್ಲ, ಹಾಗಾಗಿ ಈ ಬಾರಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ.

ಹೀಗಿರುವಾಗ, ಭಾರತ ತಂಡ ಎರಡು ಪಂದ್ಯಗಳನ್ನು ಸೋತಿರುವುದು, ದಕ್ಷಿಣ ಆಫ್ರಿಕಾ ವಿರುದ್ಧ ನಿಜಕ್ಕೂ ಗೆಲುವು ಸಾಧಿಸುತ್ತಾರಾ ಎನ್ನುವ ಅನುಮಾನ ಮೂಡಿಸಿದೆ. ಇಲ್ಲಿ ಭಾರತ ತಂಡ ಸೋಲು ಕಂಡಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಮತ್ತು ನೆಟ್ಟಿಗರು ಒಬ್ಬ ಆಟಗಾರ ನೇರವಾಗಿ ಕಾರಣ ಎನ್ನುತ್ತಿದ್ದಾರೆ. ಆ ಆಟಗಾರ ಮತ್ಯಾರು ಅಲ್ಲ, ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಋತುರಾಜ್ ಗಾಯಕ್ವಾಡ್ ಅವರು. ಕಳೆದ ಎರಡು ಪಂದ್ಯಗಳಲ್ಲೂ ಇವರು ಉತ್ತಮವಾದ ಪ್ರದರ್ಶನ ನೀಡಿಲ್ಲ, ಕಳೆದ ಪಂದ್ಯದಲ್ಲಿ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಹಾಗಾಗಿ ಋತುರಾಜ್ ಗಾಯಕ್ವಾಡ್ ಅವರು ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಅಭಿಮಾನಿಗಳು ಆಕ್ರೋಶ ಗೊಂಡಿದ್ದಾರೆ.

india 4 | ಪಂತ್ ಅಲ್ಲ, ಮೊದಲು ಈತನನ್ನು ತಂಡದಿಂದ ಹೊರಗಿಡಿ ಎಂದ ಫ್ಯಾನ್ಸ್. ಎರಡನೇ ಪಂದ್ಯದಲ್ಲಿ ವಿಫಲವಾದ ಬಳಿಕ ಫ್ಯಾನ್ಸ್ ಸೋಲಿಗೆ ಕಾರಣವಾಗಿಸಿದ್ದು ಯಾರನ್ನು ಗೊತ್ತೇ?
ಪಂತ್ ಅಲ್ಲ, ಮೊದಲು ಈತನನ್ನು ತಂಡದಿಂದ ಹೊರಗಿಡಿ ಎಂದ ಫ್ಯಾನ್ಸ್. ಎರಡನೇ ಪಂದ್ಯದಲ್ಲಿ ವಿಫಲವಾದ ಬಳಿಕ ಫ್ಯಾನ್ಸ್ ಸೋಲಿಗೆ ಕಾರಣವಾಗಿಸಿದ್ದು ಯಾರನ್ನು ಗೊತ್ತೇ? 2

ಸೌತ್ ಆಫ್ರಿಕಾ ವಿರುದ್ಧದ ಮುಂದಿನ ಮೂರು ಪಂದ್ಯಗಳನ್ನು ಭಾರತ ತಂಡ ಗೆಲ್ಲದೆ ಹೋದರೆ, ಈ ಸರಣಿ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಲು ಸಾಧ್ಯ ಆಗುವುದಿಲ್ಲ. ಹೇಗಾದರೂ ಮಾಡಿ, ಮುಂದಿನ ಮೂರು ಪಂದ್ಯಗಳನ್ನು ಭಾರತ ತಂಡ ಗೆಲ್ಲಲೇಬೇಕಾದ ಪರಿಸ್ಥಿತಿ ಈಗ ಎದುರಾಗಿದ್ದು, ಪಂದ್ಯ ಗೆಲ್ಲಬೇಕು ಎಂದರೆ, ಋತುರಾಜ್ ಗಾಯಕ್ವಾಡ್ ಅವರನ್ನು ಭಾರತ ತಂಡದಿಂದ ಹೊರಗೆ ಇಡಬೇಕು ಎಂದು ಅಭಿಮಾನಿಗಳು ಕೋಪಗೊಂಡಿದ್ದಾರೆ, ಕಳೆದ ಐದು ಪಂದ್ಯಗಳಲ್ಲಿ ಋತುರಾಜ್ ಗಾಯಕ್ವಾಡ್ ಅವರು 63 ರನ್ ಗಳನ್ನು ಗಳಿಸಿದ್ದಾರೆ. ಹಾಗಾಗಿ ಅವರನ್ನು ತಂಡದಿಂದ ಹೊರಗಿಡುವುದೇ ಒಳ್ಳೆಯದು ಎನ್ನಲಾಗುತ್ತಿದ್ದು, ಮುಂದಿನ ಪಂದ್ಯಕ್ಕೆ ಭಾರತ ತಂಡ ಏನು ಮಾಡಲಿದೆ ಎಂದು ಕಾದು ನೋಡಬೇಕಿದೆ.

Comments are closed.