ಭಾರತ ತಂಡದಲ್ಲಿ ಮುಂದಿನ ವಿಶ್ವಕಪ್ ನಲ್ಲಿ ಗೇಮ್ ಚೇಂಜ್ಜರ್ ಅನ್ನು ಆಯ್ಕೆ ಮಾಡಿದ ಗವಾಸ್ಕರ್. ಯಾರಂತೆ ಗೊತ್ತೇ??

ಐಪಿಎಲ್ ನಂತರ ಬಿಗ್ ಕ್ರಿಕೆಟ್ ಫೆಸ್ಟಿವಲ್ ಎಂದರೆ ಆಕ್ಟೊಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಟಿ20 ವರ್ಲ್ಡ್ ಕಪ್ ಮ್ಯಾಚ್ ಗಳು, ವರ್ಲ್ಡ್ ಕಪ್ ಗಾಗಿ ಎಲ್ಲಾ ತಂಡಗಳು ಸಿದ್ಧತೆಳನ್ನು ನಡೆಸುತ್ತಿವೆ. ನಮ್ಮ ಭಾರತ ತಂಡ ಸಹ ಸಿದ್ಧತೆಗಳನ್ನು ಶುರು ಮಾಡಿದ್ದು, ಪ್ರಸ್ತುತ ಸೌತ್ ಆಫ್ರಿಕಾ ತಂಡದ ವಿರುದ್ಧ 5 ಸರಣಿ ಪಂದ್ಯಗಳನ್ನು ಆಡುತ್ತಲಿದೆ. ಭಾರತ ಕ್ರಿಕೆಟ್ ತಂಡವು ಬಲಿಷ್ಠ ತಂಡ ಆಗಿದ್ದರು ಸಹ ಕಳೆದ ವರ್ಷ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಸೋತು, ಬಹಳ ಬೇಗ ಟೂರ್ನಿಯಿಂದ ಹೊರಬಂದಿತ್ತು, ಈ ವರ್ಷ ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿಯಲ್ಲಿ ಭಾರತ ತಂಡ ಕಂಬ್ಯಾಕ್ ಮಾಡಲು ಸಿದ್ಧತೆ ನಡೆಸುತ್ತಿದೆ.

ಈಗಾಗಲೇ ಸೌತ್ ಆಫ್ರಿಕಾ ಜೊತೆಗೆ 5 ಸರಣಿ ಪಂದ್ಯಗಳು ಶುರುವಾಗಿದೆ. ಈ ಪಂದ್ಯಗಳಲ್ಲಿ ಹಿರಿಯ ಪ್ಲೇಯರ್ ಗಳಾದ ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ, ಇವರು ಯಾರು ಇಲ್ಲದೆ, ತಂಡವನ್ನು ಮುನ್ನಡೆಸುತ್ತಿದ್ದರೆ ರಿಷಬ್ ಪಂತ್. ಕೆ.ಎಲ್.ರಾಹುಲ್ ಅವರ ನೇತೃತ್ವದಲ್ಲಿ ಪಂದ್ಯಗಳು ನಡೆಯುತ್ತಿದೆ. ಈ ಪಂದ್ಯಗಳು ನಡೆಯುವಾಗ, ಭಾರತದ ಲೆಜೆಂಡ್ ಸುನೀಲ್ ಗವಾಸ್ಕರ್ ಅವರು, ಈ ಆಟಗಾರ ಭಾರತ ಕ್ರಿಕೆಟ್ ತಂಡದ ಗೇಮ್ ಚೇಂಜರ್ ಆಗಬಹುದು ಎಂದು ಒಬ್ಬ ಯುವ ಕ್ರಿಕೆಟಿಗನ ಹೆಸರನ್ನು ತಿಳಿಸಿದ್ದಾರೆ. ಹಾಗಿದ್ದರೆ, ಆ ಯುವ ಕ್ರಿಕೆಟ್ ಆಟಗಾರ ಯಾರು ಗೊತ್ತಾ? ತಿಳಿಸುತ್ತೇವೆ ನೋಡಿ. ಸುನೀಲ್ ಗವಾಸ್ಕರ್ ಅವರು ಆಯ್ಕೆ ಮಾಡಿರುವುದು ಮತ್ಯಾರನ್ನು ಅಲ್ಲ, ಹಾರ್ದಿಕ್ ಪಾಂಡ್ಯ ಅವರನ್ನು.

india 3 | ಭಾರತ ತಂಡದಲ್ಲಿ ಮುಂದಿನ ವಿಶ್ವಕಪ್ ನಲ್ಲಿ ಗೇಮ್ ಚೇಂಜ್ಜರ್ ಅನ್ನು ಆಯ್ಕೆ ಮಾಡಿದ ಗವಾಸ್ಕರ್. ಯಾರಂತೆ ಗೊತ್ತೇ??
ಭಾರತ ತಂಡದಲ್ಲಿ ಮುಂದಿನ ವಿಶ್ವಕಪ್ ನಲ್ಲಿ ಗೇಮ್ ಚೇಂಜ್ಜರ್ ಅನ್ನು ಆಯ್ಕೆ ಮಾಡಿದ ಗವಾಸ್ಕರ್. ಯಾರಂತೆ ಗೊತ್ತೇ?? 2

28 ವರ್ಷದ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಆಡಿ ಕೆಲಸಮಯ ಆಗಿತ್ತು, ಇಂಜೂರಿ ಆಗಿದ್ದ ಕಾರಣ, ಭಾರತ ತಂಡದಿಂದ ಹೊರಗುಳಿದಿದ್ದ ಪಾಂಡ್ಯ, ಐಪಿಎಲ್ ನಲ್ಲಿ ಅದ್ಭುತವಾಗಿ ಕಂಬ್ಯಾಕ್ ಮಾಡುವ ಮೂಲಕ ಭಾರತ ತಂಡಕ್ಕೆ ಮತ್ತೆ ಮರಳಿ ಬಂದಿದ್ದಾರೆ. ಇದರ ಬಗ್ಗೆ ಸುನೀಲ್ ಗವಾಸ್ಕರ್ ಅವರಿಗೂ ಸಂತೋಷವಾಗಿದಿದ್ದು, ವರ್ಲ್ಡ್ ಕಪ್ ನಲ್ಲಿ ಮಾತ್ರವಲ್ಲ, ಮುಂದಿನ ಪಂದ್ಯಗಳಲ್ಲಿ ಸಹ ಹಾರ್ದಿಕ್ ಪಾಂಡ್ಯ ಗೇಮ್ ಚೇಂಜರ್ ಆಗಬಹುದು ಎಂದಿದ್ದಾರೆ. “ಅವರು ಭಾರತದ ಗೇಮ್ ಚೇಂಜರ್ ಆಗಬಹುದು ಎಂದು ನನಗೆ ಅನ್ನಿಸುತ್ತದೆ, ವರ್ಲ್ಡ್ ಕಪ್ ಮಾತ್ರವಲ್ಲ ಮುಂಬರುವ ಮ್ಯಾಚ್ ಗಳಲ್ಲಿ ಇದು ಖಂಡಿತವಾಗಿ ಆಗಬಹುದು. ಇವರು ಬ್ಯಾಟಿಂಗ್ ಮಾಡಿದರು ಅಥವಾ ಬೌಲರ್ ಆಗಿ ಬಂದರೂ, ಗೇಮ್ ಚೇಂಜರ್ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ. ನನಗೆ ಅವರು ಬೌಲಿಂಗ್ ಮಾಡುವುದು ಇಷ್ಟ..” ಎಂದು ಹೇಳಿದ್ದಾರೆ.

Comments are closed.