ಕೊನೆಗೂ ಪುಷ್ಪ 2 ಸಿನೇಮಾದ ಬಗ್ಗೆ ಸಿಕ್ತು ಮಾಹಿತಿ: ಬಿಡುಗಡೆಯಾದ ಮಾಹಿತಿ ನೋಡಿ ಫುಲ್ ಥ್ರಿಲ್ ಆದ ಅಭಿಮಾನಿಗಳು. ಸಾವಿರ ಕೋಟಿ ಫಿಕ್ಸ್ ಹಾ??

ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಇತ್ತೀಚಿನ ಸಿನಿಮಾ ಪುಷ್ಪ. ಈ ಸಿನಿಮಾ ಎಷ್ಟು ದೊಡ್ಡ ಹಿಟ್ ಆಯಿತು ಎಂದು ಹೇಳಬೇಕಾಗಿಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ತೆರೆಕಂಡಿದ್ದ ಪುಷ್ಪ ಸಿನಿಮಾ ಬಾಕ್ಸ್‌ ಆಫೀಸ್‌ ಅಲ್ಲೋಲಕಲ್ಲೋಲ ಮಾಡಿತ್ತು. ಈ ಸಿನಿಮಾ ತೆಲುಗು ರಾಜ್ಯಗಳಲ್ಲಿ ಬ್ಲಾಕ್ ಬಸ್ಟರ್ ಆಯಿತು, ಬಾಲಿವುಡ್ ನಲ್ಲಿ ಸಹ 100 ಕೋಟಿ ಹಣಗಳಿಕೆ ಮಾಡಿತು. ವಿಶ್ವಾದ್ಯಂತ 365 ಕೋಟಿ ರೂಪಾಯಿಗಳನ್ನು ಗಳಿಸಿ, ಆ ಸಮಯದಲ್ಲಿ ಅತಿ ಹೆಚ್ಚು ಹಣಗಳಿಕೆ ಮಾಡಿದ ಭಾರತೀಯ ಸಿನಿಮಾಗಳಲ್ಲಿ ಅಗ್ರಸ್ಥಾನ ಪಡೆಯಿತು..

ಈ ಸಿನಿಮಾದಲ್ಲಿ, ಅಲ್ಲು ಅರ್ಜುನ್ ಅವರ ‘ಪುಷ್ಪ ರಾಜ್’ ಮ್ಯಾನರಿಸಂ ಇನ್ನೂ ಟ್ರೆಂಡಿಂಗ್ ಆಗಿದೆ. ಪುಷ್ಪ ಸಿನಿಮಾ ನಿರ್ದೇಶಕರು ಈಗಾಗಲೇ ಮತ್ತೊಂದು ಸೀಕ್ವೆಲ್ ಘೋಷಣೆ ಮಾಡಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಮೊದಲ ಭಾಗ 2021ರ ಡಿಸೆಂಬರ್ 14 ರಂದು ಬಿಡುಗಡೆಯಾಗಿದ್ದು, ಸದ್ಯದಲ್ಲೇ ಎರಡನೇ ಭಾಗದ ಆ ಭಾಗದ ಚಿತ್ರೀಕರಣವೂ ಆರಂಭವಾಗಲಿದೆ ಎಂಬ ಊಹಾಪೋಹಗಳು ಹಬ್ಬಿದ್ದವು. ಮತ್ತೊಂದೆಡೆ ಅಲ್ಲು ಅರ್ಜುನ್ ಕೂಡ ಮಾರ್ಚ್ ಮತ್ತು ಏಪ್ರಿಲ್ ನಲ್ಲಿಯೇ ಶೂಟಿಂಗ್ ಆರಂಭಿಸಿ ಆರೇಳು ತಿಂಗಳೊಳಗೆ ಸಿನಿಮಾ ಮುಗಿಸಲು ಸೀರಿಯಸ್ ಆಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತು. ಆದರೆ, ಮೊದಲ ಭಾಗ ಬಿಡುಗಡೆಯಾಗಿ ಸುಮಾರು ಆರು ತಿಂಗಳು ಕಳೆದರೂ ಇನ್ನೂ ಚಿತ್ರದ ಶೂಟಿಂಗ್ ಆರಂಭವಾಗಿಲ್ಲ. ಯಾವಾಗ ಶುರುವಾಗುತ್ತದೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದರು.

pushpa | ಕೊನೆಗೂ ಪುಷ್ಪ 2 ಸಿನೇಮಾದ ಬಗ್ಗೆ ಸಿಕ್ತು ಮಾಹಿತಿ: ಬಿಡುಗಡೆಯಾದ ಮಾಹಿತಿ ನೋಡಿ ಫುಲ್ ಥ್ರಿಲ್ ಆದ ಅಭಿಮಾನಿಗಳು. ಸಾವಿರ ಕೋಟಿ ಫಿಕ್ಸ್ ಹಾ??
ಕೊನೆಗೂ ಪುಷ್ಪ 2 ಸಿನೇಮಾದ ಬಗ್ಗೆ ಸಿಕ್ತು ಮಾಹಿತಿ: ಬಿಡುಗಡೆಯಾದ ಮಾಹಿತಿ ನೋಡಿ ಫುಲ್ ಥ್ರಿಲ್ ಆದ ಅಭಿಮಾನಿಗಳು. ಸಾವಿರ ಕೋಟಿ ಫಿಕ್ಸ್ ಹಾ?? 2

ಇತ್ತೀಚೆಗಷ್ಟೇ ಶೂಟಿಂಗ್ ಬಗ್ಗೆ ಒಂದು ಅಪ್‌ಡೇಟ್ ಸಿಕ್ಕಿದೆ. ಭಾಗ 1ರ ಹೊರತಾಗಿ ಭಾಗ 2 ಮಾಡಲು ಸ್ಕ್ರಿಪ್ಟ್ ಕೆಲಸ ಮಾಡಲಾಗುತ್ತಿದೆ. ಈ ಬಾರಿ ಆದಷ್ಟು ಬೇಗ ಶೂಟಿಂಗ್ ಮುಗಿಸಲು ಶೆಡ್ಯೂಲ್ ರಚಿಸಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಮುಂದಿನ ತಿಂಗಳು ರೆಗ್ಯುಲರ್ ಶೂಟಿಂಗ್ ಶುರು ಮಾಡಿ 6 ತಿಂಗಳಲ್ಲಿ ಎಲ್ಲಾ ಕೆಲಸ ಮುಗಿಸಿ ಸಂಕ್ರಾಂತಿ ಹಬ್ಬದ ಸಮಯಕ್ಕೆ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ನಲ್ಲಿದ್ದಾರಂತೆ ನಿರ್ದೇಶಕ ಸುಕುಮಾರ್. ರಶ್ಮಿಕಾ ನಾಯಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ, ಈ ಬಾರಿ ಕೂಡ ಮತ್ತೊಬ್ಬ ನಾಯಕಿಗೆ ಸ್ಥಾನ ಸಿಗಲಿದೆ ಎಂಬ ಮಾತು ಕೇಳಿಬರುತ್ತಿದೆ. ದಿಶಾ ಪಟಾನಿ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

Comments are closed.