ಮದುವೆಯನ್ನು ಸರಳವಾಗಿ ಮಾಡಿಕೊಂಡಿದ್ದ ನಿಖಿಲ್ ರೇವತಿ, ಮಗನ ನಾಮಕರಣಕ್ಕೆ ಖರ್ಚು ಮಾಡಿದ ಚಿಲ್ಲರೆ ಹಣವೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ 2 ವರ್ಷಗಳ ಹಿಂದಷ್ಟೇ ಮದುವೆಯಾಗಿರುವ ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳು ಈಗಾಗಲೇ 9 ತಿಂಗಳ ಗಂಡುಮಗುವನ್ನು ಹೊಂದಿದ್ದಾರೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಕಾಲವೆನ್ನುವುದು ಅಷ್ಟು ಬೇಗ ಕಳೆದಿದೆ ಎಂದು ಹೇಳಲು ನಾವು ಹೊರಟಿರುವುದು. 2020 ರಲ್ಲಿ ರಾಮನಗರದ ಬಿಡದಿಯ ತೋಟದ ಮನೆಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಖಿಲ್ ಕುಮಾರ್ ಹಾಗೂ ರೇವತಿ ರವರ ಮದುವೆ ಸರಳವಾಗಿ ನಡೆದಿತ್ತು. ಇದಾದ ನಂತರ ಸಂಪೂರ್ಣವಾಗಿ ಇಬ್ಬರು ದಂಪತಿಗಳು ಲಾಕ್ಡೌನ್ ಸಂದರ್ಭದಲ್ಲಿ ಅಲ್ಲಿಯೇ ಉಳಿದು ಕೊಂಡಿದ್ದರು.

ನಂತರ ಕಳೆದ ವರ್ಷದ ಆರಂಭದಲ್ಲಿ ರೇವತಿ ಹಾಗೂ ನಿಖಿಲ್ ಕುಮಾರ್ ಇಬ್ಬರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಾವು ಮಗುವಿಗೆ ಪೋಷಕ ರಾಗುತ್ತಿದ್ದೇವೆ ಎಂಬುದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ನಂತರ ಕಳೆದ ವರ್ಷವಷ್ಟೆ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಹೋಟೆಲ್ ನಲ್ಲಿ ರೇವತಿ ರವರಿಗೆ ನಿಖಿಲ್ ಕುಮಾರ್ ಅವರು ಅದ್ದೂರಿಯಾಗಿ ಸೀಮಂತ ಶಾಸ್ತ್ರ ಕಾರ್ಯಕ್ರಮವನ್ನು ಕೂಡ ಮಾಡುತ್ತಾರೆ.

ಇನ್ನು ಇತ್ತೀಚೆಗಷ್ಟೇ ಮಗುವಿಗೆ ಕುಟುಂಬಸ್ಥರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಬೆಂಗಳೂರಿನ ಜೆಪಿ ನಗರದಲ್ಲಿ ಅದ್ದೂರಿಯಾಗಿ ನಾಮಕರಣ ಕಾರ್ಯಕ್ರಮವನ್ನು ಕೂಡ ನೆರವೇರಿಸುತ್ತಾರೆ. 9 ತಿಂಗಳ ಗಂಡು ಮಗುವಿಗೆ ಅವ್ಯಾನ್ ದೇವ್ ಎನ್ನುವ ವಿಶಿಷ್ಟ ಹೆಸರನ್ನು ಇಡಲಾಗಿದೆ. ಈಗ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿರುವುದು ನಿಖಿಲ್ ಕುಮಾರ್ ಅವರು ನಾಮಕರಣ ಕಾರ್ಯಕ್ರಮಕ್ಕಾಗಿ ಖರ್ಚು ಮಾಡಿರುವ ಹಣದ ಕುರಿತಂತೆ. ಹೌದು ಗೆಳೆಯರೇ ತಮ್ಮ ಪುತ್ರನ ನಾಮಕರಣ ಕಾರ್ಯಕ್ರಮಕ್ಕೆ ನಿಖಿಲ್ ಕುಮಾರ್ ರವರು ಖರ್ಚು ಮಾಡಿರುವ ಹಣ ಬರೋಬ್ಬರಿ 1.8 ಕೋಟಿ ರೂಪಾಯಿ. ಇನ್ನು ಈ ಬಳಿಕ ಮಂಡ್ಯದಲ್ಲಿಯೂ ಕೂಡ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲು ಕೂಡ ಸಿದ್ಧತೆ ನಡೆಯುತ್ತಿದೆ ಎಂಬುದು ತಿಳಿದು ಬರುತ್ತಿದೆ.

Comments are closed.