ಮುಂದಿನ ವಿಶ್ವಕಪ್ ಗೆ ಬೆಸ್ಟ್ ಫಿನಿಶರ್ ರವನ್ನು ಆಯ್ಕೆ ಮಾಡಿದ ರಿಕ್ಕಿ ಪಾಂಟಿಂಗ್: ಆಯ್ಕೆ ಮಾಡಿದ ಭಾರತೀಯ ಯಾರು ಗೊತ್ತೇ?

ಭಾರತ ಕ್ರಿಕೆಟ್ ತಂಡ ಈಗ ಸೌತ್ ಆಫ್ರಿಕಾ ವಿರುದ್ಧದ ಸರಣಿ ಪಂದ್ಯಗಳನ್ನು ಆಡುತ್ತಿದ್ದಾರೆ. ಐಪಿಎಲ್ ಮುಗಿದ ತಕ್ಷಣವೇ ಶುರುವಾಗಿರುವ ಪಂದ್ಯಗಳಿವು. ಈ ವರ್ಷ ಅಂತಾರಾಷ್ಟ್ರೀಯ ಮಟ್ಟದ ಟಿ20 ಪಂದ್ಯಗಳಿಗೆ ದಿನೇಶ್ ಕಾರ್ತಿಕ್ ಅವರು ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಈ ವರ್ಷದ ಐಪಿಎಲ್ ನಲ್ಲಿ ದಿನೇಶ್ ಕಾರ್ತಿಕ್ ಅವರು ಆರ್.ಸಿ.ಬಿ ತಂಡದ ಪರವಾಗಿ ಅದ್ಭುತವಾದ ಪ್ರದರ್ಶನ ನೀಡಿದ್ದರು. ಆಡಿದ 16 ಪಂದ್ಯಗಳಲ್ಲಿ 330 ರನ್ ಗಳನ್ನು ಭಾರಿಸಿ, ಆರ್.ಸಿ.ಬಿ ತಂಡಕ್ಕೆ ಪ್ರಬಲವಾದ ಬ್ಯಾಟ್ಸ್ಮನ್ ಆಗಿದ್ದರು ದಿನೇಶ್ ಕಾರ್ತಿಕ್.

ಆರ್.ಸಿ.ಬಿ ತಂಡದ ಪರವಾಗಿ ನೀಡಿದ ಅದ್ಭುತವಾದ ಪ್ರದರ್ಶನದಿಂದಲೇ ಭಾರತ ತಂಡಕ್ಕೆ ಸೆಲೆಕ್ಟ್ ಆಗಿದ್ದಾರೆ. ಈ ವರ್ಷಾಂತ್ಯದಲ್ಲಿ ಅಂದರೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಟಿ20 ವಿಶ್ವಕಪ್ ಪಂದ್ಯಗಳು ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿದೆ. ಅದಕ್ಕಿಂತ ಮೊದಲು ಭಾರತ ಕ್ರಿಕೆಟ್ ತಂಡವು 30 ಪಂದ್ಯಗಳನ್ನು ಆಡಬೇಕಿದ್ದು, ಅವುಗಳಲ್ಲಿ ಉತ್ತಮವಾದ ಪ್ರದರ್ಶನ ನೀಡಿದರೆ ಮಾತ್ರ ದಿನೇಶ್ ಕಾರ್ತಿಕ್ ಅವರು ಟಿ20 ವಿಶ್ವಕಪ್ ಪಂದ್ಯಗಳಿಗೆ ಟೀಮ್ ಇಂಡಿಯಾಗೆ ಸೆಲೆಕ್ಟ್ ಆಗಲಿದ್ದಾರೆ. ಇದರ ಬಗ್ಗೆ ಈಗ ಆಸ್ಟ್ರೇಲಿಯಾದ ಲೆಜೆಂಡರಿ ಆಟಗಾರ ಆಗಿರುವ ರಿಕ್ಕಿ ಪಾಂಟಿಂಗ್ ಅವರು ಮಾತನಾಡಿ, ದಿನೇಶ್ ಕಾರ್ತಿಕ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

dk ponting | ಮುಂದಿನ ವಿಶ್ವಕಪ್ ಗೆ ಬೆಸ್ಟ್ ಫಿನಿಶರ್ ರವನ್ನು ಆಯ್ಕೆ ಮಾಡಿದ ರಿಕ್ಕಿ ಪಾಂಟಿಂಗ್: ಆಯ್ಕೆ ಮಾಡಿದ ಭಾರತೀಯ ಯಾರು ಗೊತ್ತೇ?
ಮುಂದಿನ ವಿಶ್ವಕಪ್ ಗೆ ಬೆಸ್ಟ್ ಫಿನಿಶರ್ ರವನ್ನು ಆಯ್ಕೆ ಮಾಡಿದ ರಿಕ್ಕಿ ಪಾಂಟಿಂಗ್: ಆಯ್ಕೆ ಮಾಡಿದ ಭಾರತೀಯ ಯಾರು ಗೊತ್ತೇ? 2

“ದಿನೇಶ್ ಕಾರ್ತಿಕ್ ಅವರನ್ನು ಖಂಡಿತವಾಗಿ ನಾನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುತ್ತೇನೆ. 5 ಅಥವಾ 6ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಅವರು ಸೂಕ್ತವಾದವರು. ಆರ್.ಸಿ.ಬಿ ತಂಡಕ್ಕೆ ಅವರು ಫಿನಿಷರ್ ರೋಲ್ ಪ್ಲೇ ಮಾಡಿದನ್ನು ಗಮನಿಸಿ. ಎಲ್ಲಾ ತಂಡಗಳಲ್ಲೂ ಕೊನೆಯ ಓವರ್ ನಲ್ಲಿ ಪಂದ್ಯ ಗೆದ್ದು ಕೊಡುವ ಸಾಮರ್ಥ್ಯ ಇರುವಂಥ ಆಟಗಾರರು ಬೇಕಾಗುತ್ತಾರೆ. ಆಟಗಾರರು ಅವರ ಅತ್ಯುತ್ತಮ ಪ್ರದರ್ಶನ ನೀಡಿದರೆ, ಅದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ. ಆರ್.ಸಿ.ಬಿ ತಂಡಕ್ಕೆ ಈ ವರ್ಷ ಬೇರೆ ಎಲ್ಲಾ ಆಟಗಾರರಿಗಿಂತ ದಿನೇಶ್ ಕಾರ್ತಿಕ್ ಅವರ ಪ್ರಭಾವ ಜಾಸ್ತಿ ಇತ್ತು.”ಎಂದಿದ್ದಾರೆ ಪಾಂಟಿಂಗ್. ಈ ಬಾರಿ ದಿನೇಶ್ ಕಾರ್ತಿಕ್ ಅವರ ಸ್ಟ್ರೈಕ್ ರೇಟ್ 183 ಇತ್ತು.

Comments are closed.