ಕೊನೆ ಕ್ಷಣದಲ್ಲಿ ನಿರೂಪಕಿ ಬದಲು, ಜೋಡಿ ನಂಬರ್ 1 ಕಾರ್ಯಕ್ರಮ ನಡೆಸಿಕೊಡುವವರು ಯಾರು ಗೊತ್ತೆ??

ಜೀಕನ್ನಡ ವಾಹಿನಿಯಲ್ಲಿ ಬಹು ನಿರೀಕ್ಷೆ ಸೃಷ್ಟಿಸಿರುವ ಶೋ ಜೋಡಿ ನಂಬರ್ 1. ವಿಶೇಷವಾದ ನಿಜ ಜೀವನದ ದಂಪತಿಗಳಿಗಾಗಿ ಶುರುವಾಗಿರುವ ಈ ಶೋ,ಜನರಲ್ಲಿ ಭಾರಿ ನಿರೀಕ್ಷೆ ಸೃಷ್ಟಿಸಿದೆ. ಇನ್ನು ಈ ಶೋಗೆ ನಿರೂಪಕಿಯಾಗಿ ಅನುಶ್ರೀ ಅವರೇ ಬರುತ್ತಾರೆ ಎನ್ನಲಾಗಿತ್ತು, ಆದರೆ ಈಗ ಕೊನೆಯ ಕ್ಷಣದಲ್ಲಿ ನಿರೂಪಕಿ ಬದಲಾಗಿದ್ದು, ಶ್ವೇತಾ ಚೆಂಗಪ್ಪ ಅವರು ಜೋಡಿ ನಂಬರ್1 ಶೋ ನಿರೂಪಣೆ ಮಾಡಲಿದ್ದಾರೆ. ಈ ಬಗ್ಗೆ ಬಹಳ ಸಂತೋಷದ ಮಾತುಗಳನ್ನಾಡಿದ್ದಾರೆ ಶ್ವೇತಾ.

ಬಹಳ ಸಮಯದ ನಂತರ ಶ್ವೇತಾ ಚೆಂಗಪ್ಪ ಅವರು ಕನ್ನಡ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಹಿಂದೆ ಮಜಾ ಟಾಕೀಸ್ ಶೋನಲ್ಲಿ ರಾಣಿ ಪಾತ್ರದ ಮೂಲಕ ಎಲ್ಲರನ್ನು ರಂಜಿಸಿದ್ದರು ಶ್ವೇತಾ ಚೆಂಗಪ್ಪ. ಮಜಾ ಟಾಕೀಸ್ ಬಳಿಕ ಕಿರುತೆರೆಯಿಂದ ಬ್ರೇಕ್ ತೆಗೆದುಕೊಂಡಿದ್ದ, ಶ್ವೇತಾ ಚೆಂಗಪ್ಪ ಅವರು, ಇದೀಗ ಜೋಡಿ ನಂಬರ್1 ಶೋ ನಿರೂಪಣೆ ಮಾಡುವ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಶ್ವೇತಾ ಚೆಂಗಪ್ಪ ಅವರು ಸಂದರ್ಶನ ಒಂದರಲ್ಲಿ ಇದರ ಬಗ್ಗೆ ಮಾತನಾಡಿದ್ದಾರೆ. ಶ್ವೇತಾ ಅವರು ಹೇಳಿರುವ ಪ್ರಕಾರ ಇದು ಕೊನೆ ಕ್ಷಣದ ನಿರ್ಧಾರ ಆಗಿದೆ. “ಓಹ್..ಜೋಡಿ ನಂಬರ್ ಶೋ ನಿರೂಪಣೆ ಮಾಡುತ್ತಿರುವುದು ಕೊನೆ ಕ್ಷಣದ ನಿರ್ಧಾರ, ಮೊದಲಿಗೆ ತುಂಬಾ ಯೋಚನೆ ಮಾಡಿದ್ದೆ, ಈಗ ಎಲ್ಲವೂ ಒಂದು ಹಂತಕ್ಕೆ ಬಂದು, ಈ ಶೋ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದೇನೆ. ಕಿರುತೆರೆಗೆ ವಾಪಸ್ ಬರಲು ತುಂಬಾ ಸಂತೋಷ ಆಗಿದೆ. ಪ್ರೀಮಿಯರ್ ಎಪಿಸೋಡ್ ಚಿತ್ರೀಕರಣ ನಡೆದಿದ್ದು ಬಹಳ ಚೆನ್ನಾಗಿ ಮೂಡಿಬಂದಿದೆ..

zee jodi no1 | ಕೊನೆ ಕ್ಷಣದಲ್ಲಿ ನಿರೂಪಕಿ ಬದಲು, ಜೋಡಿ ನಂಬರ್ 1 ಕಾರ್ಯಕ್ರಮ ನಡೆಸಿಕೊಡುವವರು ಯಾರು ಗೊತ್ತೆ??
ಕೊನೆ ಕ್ಷಣದಲ್ಲಿ ನಿರೂಪಕಿ ಬದಲು, ಜೋಡಿ ನಂಬರ್ 1 ಕಾರ್ಯಕ್ರಮ ನಡೆಸಿಕೊಡುವವರು ಯಾರು ಗೊತ್ತೆ?? 2

ಅದ್ಭುತವಾದ ಜೋಡಿಗಳು ಸ್ಪರ್ಧಿಗಳಾಗಿ ಬಂದಿದ್ದಾರೆ. ಹಲವು ಗಂಟೆಗಳ ಕಾಲ ಚಿತ್ರೀಕರಣ ಮಾಡೋದು ಸ್ವಲ್ಪ ಒತ್ತಡವಾಗಿತ್ತು, ಆದರೆ ಈ ಶೋ ಅನ್ನು ಚೆನ್ನಾಗಿ ನಡೆಸಿಕೊಡಲು ಪ್ರಯತ್ನ ಮಾಡುತ್ತೇನೆ..” ಎಂದು ಹೇಳಿದ್ದಾರೆ ಶ್ವೇತಾ ಚೆಂಗಪ್ಪ. ಇನ್ನು ಶ್ವೇತಾ ಅವರು ಈ ಶೋ ಜೊತೆಗೆ ಶಿವಣ್ಣ ಅವರೊಡನೆ ಸಿನಿಮಾದಲ್ಲಿ ಸಹ ಮುಖ್ಯ ಪಾತ್ರ ಒಂದರಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಶ್ವೇತಾ ಸ್ವರೂ ಕಿರುತೆರೆ ಮತ್ತು ಬೆಳ್ಳಿತೆರೆ ಎರಡನ್ನು ಸಹ ಬ್ಯಾಲೆನ್ಸ್ ಮಾಡಬೇಕಿದೆ. ಜೊತೆಗೆ ಶ್ವೇತಾ ಅವರಿಗೆ ಜಿಯಾನ್ ಅಯ್ಯಪ್ಪ ಮುದ್ದಿನ ಮಗ ಸಹ ಇದ್ದು, ಸಂತೋಷವಾಗಿ ಮಗುವಿನ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಾರೆ ನಟಿ ಶ್ವೇತಾ.

Comments are closed.