ಮದುವೆಯಾದ ಮರು ದಿನವೇ ಹೊಸ ವಿವಾದ ಸೃಷ್ಟಿ ಮಾಡಿದ ನಯನತಾರ. ದೇವಸ್ಥಾನದಲ್ಲಿ ಮಾಡಿದ ಮಹಾ ಎಡವಟ್ಟು ಏನು ಗೊತ್ತೇ??

ಲೇಡಿ ಸೂಪರ್ ಸ್ಟಾರ್ ನಯನತಾರ ಅವರ ಮದುವೆ ಮೊನ್ನೆಯಷ್ಟೇ ನಡೆದಿದ್ದು, ಮದುವೆಯಾದ ಮರುದಿನವೇ ನಟಿ ನಯನತಾರ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಜೂನ್ 9 ರಂದು ತಮಿಳುನಾಡಿನ ಮಹಾಬಲಿ ಪುರಂ ನ ಐಷಾರಾಮಿ ರೆಸಾರ್ಟ್ ಒಂದರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯ ಬಳಿಕ ಈ ಜೋಡಿ, ಮರುದಿನವೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ತಿರುಪತಿಗೆ ಹೋಗಿದ್ದ ಸಮಯದಲ್ಲಿವಿವಾದಕ್ಕೆ ಸಿಲುಕಿಕೊಂಡಿದ್ದಾರೆ ನಟಿ ನಯನತಾರ. ಅಷ್ಟಕ್ಕೂ ಸ್ಟಾರ್ ನಟಿ ಮಾಡಿಕೊಂಡಿದ್ದೇನು? ತಿಳಿಸುತ್ತೇವೆ ನೋಡಿ.

ನಟಿ ನಯನತಾರ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಇಬ್ಬರು ಸಹ ಸುಮಾರು 7 ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ಮದುವೆ ಬಗ್ಗೆ ಕೆಲವು ದಿನಗಳಿಂದ ಸುದ್ದಿಗಳು ಕೇಳಿ ಬರುತ್ತಿದ್ದವು. ಕೊನೆಗೂ ಜೂನ್ 9ರಂದು ಮಹಾಬಲಿಪುರಂ ನ ರೆಸಾರ್ಟ್ ಒಂದರಲ್ಲಿ ಅದ್ಧೂರಿಯಾಗಿ ಈ ಜೋಡಿಯ ಮದುವೆ ನಡೆಯಿತು. ಮೊದಲಿಗೆ ನಯನತಾರ ಮತ್ತು ವಿಘ್ನೇಶ್ ಶಿವನ್ ತಿರುಪತಿ ದೇವಸ್ಥಾನದಲ್ಲಿ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಮಹಾಬಲಿಪುರಂನಲ್ಲಿ ಈ ಜೋಡಿಯ ಮದುವೆ ನಡೆಯಿತು. ಇವರಿಬ್ಬರಿಗು ತಿರುಪತಿ ತಿಮ್ಮಪ್ಪನ ಪರಮ ಭಕ್ತರು, ಆಗಾಗ ಜೊತೆಯಾಗಿ ತಿರುಪತಿಗೆ ಹೋಗಿ ದೇವರ ದರ್ಶನ ಪಡೆದು ಬರುತ್ತಿದರು. ಅದೇ ರೀತಿ ಮದುವೆಯಾದ ಮರುದಿನ ಕೂಡ ತಿರುಪತಿಗೆ ಹೋಗಿ ದೇವರ ದರ್ಶನ ಪಡೆದು ಬಂದಿದ್ದಾರೆ.

nayan 2 | ಮದುವೆಯಾದ ಮರು ದಿನವೇ ಹೊಸ ವಿವಾದ ಸೃಷ್ಟಿ ಮಾಡಿದ ನಯನತಾರ. ದೇವಸ್ಥಾನದಲ್ಲಿ ಮಾಡಿದ ಮಹಾ ಎಡವಟ್ಟು ಏನು ಗೊತ್ತೇ??
ಮದುವೆಯಾದ ಮರು ದಿನವೇ ಹೊಸ ವಿವಾದ ಸೃಷ್ಟಿ ಮಾಡಿದ ನಯನತಾರ. ದೇವಸ್ಥಾನದಲ್ಲಿ ಮಾಡಿದ ಮಹಾ ಎಡವಟ್ಟು ಏನು ಗೊತ್ತೇ?? 2

ಹೀಗೆ ದೇವಸ್ಥಾನಕ್ಕೆ ಹೋಗಿದ್ದ ಸಮಯದಲ್ಲಿ ತಿರುಮಲದಲ್ಲಿ ನಯನತಾರ ಅವರು ಒಂದು ಎಡವಟ್ಟು ಮಾಡಿಕೊಂಡಿದ್ದು, ಅಲ್ಲಿನ ಸ್ಥಳಗಳಲ್ಲಿ ವಿಘ್ನೇಶ್ ಶಿವನ್ ಅವರು ಎಲ್ಲಾ ಕಡೆ ಬರಿಗಾಲಿನಲ್ಲಿ ಓಡಾಡಿದ್ದು, ನಯನತಾರ ಅವರು ಚಪ್ಪಲಿ ಧರಿಸಿ ಓಡಾಡಿದ್ದು, ಇವರು ಚಪ್ಪಲಿ ಧರಿಸಿ ಓಡಾಡಿರುವುದು ಹಿಂದು ಭಕ್ತರ ಭಾವನೆಗಳಿಗೆ ಧಕ್ಕೆ ತರುವಂಥಾ ಕೆಲಸ ಆಗಿದೆ ಎನ್ನಲಾಗುತ್ತಿದೆ. ಭಕ್ತರು ಸೋಷಿಯಲ್ ಮೀಡಿಯಾದಲ್ಲಿ ನಯನತಾರ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ವಿಚಾರದ ಟಿಟಿಡಿ ಸಹ ಪ್ರತಿಕ್ರಿಯಿಸಿ, ನಯನತಾರ ಅವರು ಚಪ್ಪಲಿ ಧರಿಸಿ ಓಡಾಡಿದ ಸ್ಥಳದಲ್ಲಿ ಭಕ್ತರಿಗೆ ಚಪ್ಪಲಿ ಧರಿಸಿ ಓಡಾಡುವ ಪರ್ಮಿಶನ್ ಇದೆ ಎಂದು ತಿಳಿಸಿದೆ. ಇನ್ನು ದೇವರ ದರ್ಶನ ಪಡೆದ ಬಳಿಕ ದೇವಸ್ಥಾನದಿಂದ ನಿರ್ಗಮಿಸಿದ್ದಾರೆ.

Comments are closed.